ಪ್ರಧಾನಿ ಮೋದಿ, ಟೀಂ ಇಂಡಿಯಾ ನಾಯಕ ಕೊಹ್ಲಿಯನ್ನು ಸೋಲಿಸುವುದು ಸುಲಭವಲ್ಲ: ಅರುಣ್​ ಜೇಟ್ಲಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಅವರವರ ಕ್ಷೇತ್ರದಲ್ಲಿ ಅದ್ಭುತ ಆಟಗಾರರು. ಅವರನ್ನು ಸೋಲಿಸುವುದು ಸುಲಭವಲ್ಲ ಎಂದು ಲೋಕಸಭಾ ಚುನಾವಣೆ ಹಾಗೂ ಕ್ರಿಕೆಟ್​ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಕೇಂದ್ರ ವಿತ್ತಸಚಿವ ಅರುಣ್​ ಜೇಟ್ಲಿ ಹೇಳಿಕೆ ನೀಡಿದ್ದಾರೆ.

ಮುಂದಿನ ವರ್ಷ ಮೇ ಅಂತ್ಯಕ್ಕೆ ಹೊಸ ಸರ್ಕಾರ ರಚನೆಯಾಗಲಿದ್ದು, ಇದೇ ವೇಳೆ ಟೀಂ ಇಂಡಿಯಾ ವಿಶ್ವಕಪ್​ ಟೂರ್ನಿಯಲ್ಲಿ ಭಾಗವಹಿಸಲು ಇಂಗ್ಲೆಂಡ್​ಗೆ ತೆರಳಲಿದೆ. ಈ ಎರಡೂ ವಿಚಾರಗಳನ್ನು ಮುಂದಿಟ್ಟುಕೊಂಡು ಜೇಟ್ಲಿ ಭವಿಷ್ಯ ನುಡಿದಿದ್ದಾರೆ.

ಪ್ರಸ್ತುತ ಭಾರತ ಕ್ರಿಕೆಟ್​ ತಂಡ ತುಂಬಾ ಬಲಿಷ್ಠವಾಗಿದೆ. ಅವರನ್ನು ಸುಲಭವಾಗಿ ಸೋಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮಹಾಘಟ​ಬಂಧನ್​​ ಅಥವಾ ಪ್ರತಿಪಕ್ಷಗಳ ಮಹಾ ಮೈತ್ರಿಕೂಟವು ಸ್ಥಿರವಾದ ಸಿದ್ಧಾಂತವನ್ನೇ ಹೊಂದಿಲ್ಲ. ಹೀಗಾಗಿ ದೇಶದ ಜನರು ಅವರನ್ನು ಆಯ್ಕೆ ಮಾಡುವ ಮೂಲಕ ಆತ್ಮಹತ್ಯೆಗೆ ಒಳಗಾಗುವುದಿಲ್ಲ. ಅವರಲ್ಲಿ ನಾಯಕತ್ವದಲ್ಲಿ ಖಚಿತತೆ ಇಲ್ಲ. ಉದ್ದೇಶದಲ್ಲೂ ನಿಖರತೆ ಇಲ್ಲ ಎಂದು ವ್ಯಂಗ್ಯವಾಡಿದರು.

ರಫೇಲ್​ ಒಪ್ಪಂದ ಹಾಗೂ ಬ್ಯಾಂಕ್​ಗಳಿಗೆ ವಂಚಿಸಿ ಪರಾರಿಯಾಗಿದ್ದ ವಿಜಯ ಮಲ್ಯ ವಿಚಾರದಲ್ಲಿ ರಾಹುಲ್​ ಗಾಂಧಿ ಸುಳ್ಳುಗಳನ್ನಾಡುತ್ತಿದ್ದಾರೆ. ಸುಳ್ಳಿಗೆ ಆಯಸ್ಸು ಕಡಿಮೆ. ನೀವು ಗಂಭೀರ ರಾಜಕಾರಣ ಮಾಡಬೇಕಾದರೆ, ಎರಡು ವಿಚಾರಗಳಲ್ಲಿ ಗಂಭೀರತೆಯನ್ನು ಅರಿತುಕೊಳ್ಳಿ. ಸುಧೀರ್ಘ ರಾಜಕಾರಣದಲ್ಲಿ ಉಳಿಬೇಕಾದರೆ ಇದು ಅವಶ್ಯಕ ಎಂದು ರಾಹುಲ್​ ಗಾಂಧಿಗೆ ಸಲಹೆ ನೀಡಿದರು. (ಏಜೆನ್ಸೀಸ್​)

One Reply to “ಪ್ರಧಾನಿ ಮೋದಿ, ಟೀಂ ಇಂಡಿಯಾ ನಾಯಕ ಕೊಹ್ಲಿಯನ್ನು ಸೋಲಿಸುವುದು ಸುಲಭವಲ್ಲ: ಅರುಣ್​ ಜೇಟ್ಲಿ”

  1. There is no vacancy for Prime Ministerial post at least for another decade. Instead of trying for it & showing huge amount of (artificial) love on farmer, why can’t he (RaGa) try to become farmer himself. This is one of the world class pride post & no need to engage in delivering false allegation on ruling party, no need to win any election.

Comments are closed.