ಉಗ್ರರ ದಾಳಿಯಲ್ಲ, ಕಾರಿನಲ್ಲಿದ್ದ ಅನಿಲ ಸಿಲಿಂಡರ್​ ಸ್ಫೋಟದಿಂದಾದ ಅಪಘಾತ ಎಂದ ಸಿಆರ್​ಪಿಎಫ್​

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಜಮ್ಮು ಮತ್ತು ಶೀನಗರ ಹೆದ್ದಾರಿಯ ಬನಿಹಾಲ್​ ಬಳಿ ಶನಿವಾರ ಮಧ್ಯಾಹ್ನ ಕಾರಿನಲ್ಲಿದ್ದ ಸಿಲಿಂಡರ್​ ಸ್ಫೋಟಿಸಿದ್ದರಿಂದ, ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಇದೇ ಸಂದರ್ಭದಲ್ಲಿ ಈ ಮಾರ್ಗದಲ್ಲಿ ಸಿಆರ್​ಪಿಎಫ್​ ಸಿಬ್ಬಂದಿ ಇದ್ದ ವಾಹನ ಹಾದು ಹೋಗುತ್ತಿದ್ದುದರಿಂದ, ಉಗ್ರರು ಪುಲ್ವಾಮಾ ಮಾದರಿಯ ದಾಳಿ ಇದೆಂಬ ಶಂಕೆ ಮೂಡಿತ್ತು.

ಇದು ಉಗ್ರರ ದಾಳಿಯಲ್ಲ: ಸಿಆರ್​ಪಿಎಫ್
ಆದರೆ, ಈಗ ಸ್ಪಷ್ಟನೆ ನೀಡಿರುವ ಸಿಆರ್​ಪಿಎಫ್​ ಸಿಬ್ಬಂದಿ, ಇದು ಉಗ್ರರ ದಾಳಿ ಅಲ್ಲ. ಈ ಘಟನೆ ಸಂಭವಿಸಿದಾಗ ಸಿಆರ್​ಪಿಎಫ್​ ಸಿಬ್ಬಂದಿ ಇದ್ದ ವಾಹನ ತುಂಬಾ ದೂರದಲ್ಲಿತ್ತು. ಕಾರಿನಲ್ಲಿದ್ದ ಅನಿಲ ಸಿಲಿಂಡರ್​ ಆಕಸ್ಮಿಕವಾಗಿ ಸ್ಫೋಟಿಸಿದ್ದು ಈ ಘಟನೆಗೆ ಕಾರಣ. ಹಾಗಾಗಿ ಸಿಆರ್​ಪಿಎಫ್​ ಸಿಬ್ಬಂದಿ ಇದ್ದ ವಾಹನಕ್ಕೆ ಏನೊಂದು ಹಾನಿಯಾಗಿಲ್ಲ. ಆದರೂ, ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *