ಈಶಾನ್ಯ ಪದವೀಧರರ ಕ್ಷೇತ್ರದಲ್ಲಿ ಕಾಂಗ್ರೆಸ್​​ಗೆ​ ಗೆಲುವು

ಕಲಬುರಗಿ: ವಿಧಾನ ಪರಿಷತ್​ ಈಶಾನ್ಯ ಪದವೀಧರರ ಕ್ಷೇತ್ರದಲ್ಲಿ ಕಾಂಗ್ರೆಸ್​ ಗೆಲುವು ಸಾಧಿಸಿದೆ. ಅಭ್ಯರ್ಥಿ ಡಾ. ಚಂದ್ರಶೇಖರ್​ ಪಾಟೀಲ್​ ಹುಮನಾಬಾದ್​, ಬಿಜೆಪಿಯ ಕೆ.ಬಿ.ಶ್ರೀನಿವಾಸ್​ ಅವರ ವಿರುದ್ಧ 321 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಹೈದ್ರಾಬಾದ್​ ಕರ್ನಾಟಕದ ಕಲಬುರಗಿ, ಬೀದರ್​, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳನ್ನು ಒಳಗೊಂಡ ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆಯಲ್ಲಿ 1988ರಿಂದಲೂ ಬಿಜೆಪಿಯೇ ಗೆಲುವು ಸಾಧಿಸುತ್ತ ಬಂದಿತ್ತು. ಆದರೆ, ಈ ಬಾರಿ ಕಾಂಗ್ರೆಸ್​ ಬಿಜೆಪಿ ಭದ್ರಕೋಟೆಯನ್ನು ಛಿದ್ರ ಮಾಡಿದೆ. ಬಿಜೆಪಿಯಲ್ಲಿ ಹಾಲಿ ಶಾಸಕ ಅಮರನಾಥ ಪಾಟೀಲ್​ಗೆ ಟಿಕೆಟ್​ ನೀಡದಿರುವುದೇ ಸೋಲಿಗೆ ಕಾರಣವಾಯಿತು ಎಂಬರ್ಥದ ಮಾತುಗಳೂ ಕೇಳಿಬರುತ್ತಿವೆ.

Leave a Reply

Your email address will not be published. Required fields are marked *