ಹೋರಾಟಕ್ಕೆ ವಿಶೇಷ ಸಭೆ

ಬಾಗಲಕೋಟೆ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟದ ರೂಪುರೇಷೆ ತಯಾರಿಸಲು ಮತ್ತು ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಉತ್ತರ ಕರ್ನಾಟಕ ಹೋರಾಟ ಸಮಿತಿ ನೇತೃತ್ವದಲ್ಲಿ ಸೆ.23ರಂದು ಬಾಗಲಕೋಟೆಯಲ್ಲಿ ವಿಶೇಷ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟ ಸಮಿತಿ ಮುಖಂಡರು ಹೇಳಿದರು.

ಅಂದು ಬಾಗಲಕೋಟೆ ನಗರದ ಚರಂತಿಮಠದಲ್ಲಿ ಬೆಳಗ್ಗೆ 11 ಗಂಟೆಗೆ ವಿಶೇಷ ಸಭೆ ಆರಂಭವಾಗಲಿದೆ. ನಿಡಸೋಶಿಯ ಪಂಚಮಶಿವಲಿಂಗೇಶ್ವರ ಸ್ವಾಮೀಜಿ (ಪ್ರಭು ಸ್ವಾಮೀಜಿ) ಸಾನ್ನಿಧ್ಯ, ಹೋರಾಟ ಸಮಿತಿ ಅಧ್ಯಕ್ಷ, ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರತ್ಯೇಕ ರಾಜ್ಯ ಪ್ರತಿಪಾದಿಸುವ ಮತ್ತು ಬೆಂಬಲಿಸುವ ನಾಡಿನ ಧಾರ್ವಿುಕ ಮುಖಂಡರು, ಹೋರಾಟಗಾರರು, ಚಿಂತಕರು, ಸಾಹಿತಿಗಳು, ವಿವಿಧ ಸಂಘಟನೆಗಳು ಮುಖಂಡರು ಭಾಗವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಶೇಷ ಸಭೆಯಲ್ಲಿ ಪತ್ರ್ಯೇಕ ರಾಜ್ಯಕ್ಕಾಗಿ ಪಂಚ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಪ್ರತ್ಯೇಕ ರಾಜ್ಯದಲ್ಲಿ ಸೇರಬಯಸುವ ಜಿಲ್ಲೆಗಳು ಎಷ್ಟು ಮತ್ತು ಯಾವವು? ರಾಜಧಾನಿ ಯಾವುದಾಗಬೇಕು, ಪ್ರತ್ಯೇಕ ರಾಜ್ಯವನ್ನು ಯಾವ ಹೆಸರಿನಿಂದ ಕರೆಯಬೇಕು ? ರಾಜ್ಯ ಧ್ವಜದ ವಿನ್ಯಾಸ ಹೇಗಿರಬೇಕು? ಪ್ರತ್ಯೇಕ ರಾಜ್ಯದ ಧ್ವಜಾರೋಹಣ ದಿನಾಂಕ ನಿಗದಿ ಮಾಡುವುದು ಸೇರಿ ನಾನಾ ವಿಷಯಗಳ ಕುರಿತು ಸಭೆಯಲ್ಲಿ ರ್ಚಚಿಸಿ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಪತ್ರ್ಯೇಕ ರಾಜ್ಯ ರಚನೆಗೆ ಒತ್ತಾಯಿಸಿ ಪ್ರಧಾನಿ ಭೇಟಿ, ಉತ್ತರ ಕರ್ನಾಟಕ ಬೃಹತ್ ಸಮಾವೇಶದ ಆಯೋಜನೆ ಹಾಗೂ ಮುಂದಿನ ಹೋರಾಟದ ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಿದರು.

ಉತ್ತರ ಕರ್ನಾಟಕ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಲಶೆಟ್ಟಿ, ಮುಖಂಡರಾದ ಮನ್ನಿಕಟ್ಟಿ ವಿರಕ್ತಮಠದ ಶಿವುಕುಮಾರ ಸ್ವಾಮೀಜಿ, ನಿಲೇಶ ಬನ್ನೂರ, ಕುತುಬುದ್ದೀನ್ ಖಾಜಿ, ಶ್ರೀಶೈಲ ಬಸಾರ, ಎಸ್.ಬಿ.ಕರಣೆ, ವೆಂಕಟಾಚಲಪತಿ ಬಳ್ಳಾರಿ ಸೇರಿ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.