ಉತ್ತರ ಕರ್ನಾಟಕ ಪ್ರತ್ಯೇಕ ಧ್ವಜ ಹಾರಿಸಲು ಮುಂದಾದ ಹೋರಾಟಗಾರರು

ಬೆಳಗಾವಿ: ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ಆಗ್ರಹಿಸಿ ಬೆಳಗಾವಿ ಸುವರ್ಣ ಸೌಧದ ಎದುರು ಸ್ವಾಮೀಜಿಗಳು ನಡೆಸಿದ ಧರಣಿ ವೇಳೆ ಹೋರಾಟಗಾರರು ಉತ್ತರ ಕರ್ನಾಟಕ ಪ್ರತ್ಯೇಕ ಧ್ವಜ ಹಾರಿಸಲು ಮುಂದಾಗಿದ್ದು ಗೊಂದಲ ಸೃಷ್ಟಿಸಿತು.

60 ವರ್ಷಗಳು ಆಡಳಿತ ನಡೆಸಿದ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ಧ್ವಜ ಹಾರಿಸಲು ಮುಂದಾದಾಗ ಸ್ಥಳದಲ್ಲಿ ಬಿ.ಎಸ್​.ಯಡಿಯೂರಪ್ಪ ಗರಂ ಆದರು. ಹಾಗೇ ಸ್ವಾಮೀಜಿಗಳೂ ಹೋರಾಟಗಾರರ ಮನವೊಲಿಸಲು ಪ್ರಯತ್ನಿಸಿದರು.

ಪ್ರತ್ಯೇಕ ಧ್ವಜವನ್ನು ವಶಕ್ಕೆ ಪಡೆದ ಪೊಲೀಸರು, ಸ್ವಾಮೀಜಿಯವರ ಭಾಷಣಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿ‌ ಮುಖಂಡ ನಾಗೇಶ್ ಗೋಲಶೆಟ್ಟಿಯನ್ನು ಬಂಧಿಸಿದರು.