ರಾಜಸ್ಥಾನ ಚುನಾವಣೆ; ಜನರ ವಿಶ್ವಾಸವನ್ನು ಗೆಲ್ಲಲಾಗದ ಬಿಜೆಪಿ EDಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ: ಅಶೋಕ್​ ಗೆಹ್ಲೋಟ್

ಜೈಪುರ: ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಆಡಳಿತರೂಢ ಕಾಂಗ್ರೆಸ್​ಗೆ ಕಿರುಕುಳ ನೀಡಲು ಬಿಜೆಪಿ ಜಾರಿ ನಿರ್ದೇಶನಾಲಯವನ್ನು (ED) ಬಳಸುತ್ತಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​ ಆರೋಪಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಅವರು, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್​ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನದಲ್ಲಿ ಕಾಂಗ್ರೆಸ್​ ಮತ್ತೊಮ್ಮೆ ಅಧಿಕಾರಕ್ಕೇರುತ್ತದೆ ಎಂಬ ವಿಚಾರ ಬಿಜೆಪಿಯವರ ನಿದ್ದೆಗೆಡಿಸಿದ್ದು, ಜನರ ವಿಶ್ವಾಸವನ್ನು ಗೆಲ್ಲಲಾಗದೆ ಬಿಜೆಪಿ ಕಾಂಗ್ರೆಸ್​ಗೆ ಕಿರುಕುಳ ನೀಡಲು … Continue reading ರಾಜಸ್ಥಾನ ಚುನಾವಣೆ; ಜನರ ವಿಶ್ವಾಸವನ್ನು ಗೆಲ್ಲಲಾಗದ ಬಿಜೆಪಿ EDಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ: ಅಶೋಕ್​ ಗೆಹ್ಲೋಟ್