ಬೇಸಿಗೆ ತಂಪಾಗಿರಲು ಹಾಲು ಹಾಕದ ಮಿಲ್ಕ್ ಶೇಕ್

blank

ಬೇಸಿಗೆ ತಂಪಾಗಿರಲು ಹಾಲು ಹಾಕದ ಮಿಲ್ಕ್ ಶೇಕ್ಬೇಸಿಗೆಯಲ್ಲೂ ನಮ್ಮನ್ನು ತಂಪಾಗಿಟ್ಟು, ಸಾಮಾನ್ಯವಾಗಿ ಆಗುವ ಸುಸ್ತನ್ನು ಕಡಿಮೆ ಮಾಡುವ ವಿಶೇಷ ಮಿಲ್ಕ್ ಶೇಕ್ ಬಗ್ಗೆ ಇಂದು ತಿಳಿದುಕೊಳ್ಳೋಣ. ಇದು ಸೇವಿಸುವಾಗ ತಂಪೆನಿಸು ವುದು ಮಾತ್ರವಲ್ಲದೆ ದೇಹದ ಉಷ್ಣತೆ ನಿಯಂತ್ರಿಸುತ್ತದೆ. ತೆಂಗಿನಕಾಯಿ ಯನ್ನು ತುರಿದು ರುಬ್ಬಿ, ಸೋಸಿ ಹಾಲು ತಯಾರಿಸಿಕೊಳ್ಳಬೇಕು. ಅದಕ್ಕೆ ಕರಬೂಜ, ಚಿಕ್ಕು, ಮಾವಿನ ಹಣ್ಣು, ಸೀತಾಫಲ, ಬೇಲದ ಹಣ್ಣು ಮತ್ತು ಮೂರ್ನಾಲ್ಕು ಖರ್ಜೂರ ಹಾಕಿ ರುಬ್ಬಿಕೊಂಡು ಮಿಲ್ಕ್ ಶೇಕ್ ತಯಾರಿಸಿ ಕಾಲು ಚಮಚ ಸೊಗದೇ ಬೇರಿನ ಪುಡಿ ಮತ್ತು ಒಂದು ಚಿಟಿಕೆ ಏಲಕ್ಕಿ ಪುಡಿ ಹಾಕಿ ಸೇವಿಸಬೇಕು.

ತೆಂಗಿನ ತುರಿ ನಿಜಕ್ಕೂ ಅತ್ಯುತ್ತಮವಾದ ಮತ್ತು ನಿತ್ಯವೂ ಸೇವನೆಗೆ ಯೋಗ್ಯವಾದ ಆಹಾರ ಪದಾರ್ಥವಾಗಿದೆ. ದೇಹವನ್ನು ತಂಪಾಗಿಟ್ಟು, ದೇಹಕ್ಕೆ ಶಕ್ತಿಯನ್ನು ಕೊಟ್ಟು, ಜೀರ್ಣಕ್ರಿಯೆ ಸರಿಯಾಗಿ ಇರುವಂತೆ ನೋಡಿಕೊಳ್ಳುತ್ತದೆ. ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಶಕ್ತಿಯನ್ನು ಹೆಚ್ಚಿಸುತ್ತದೆ. ಆಯುರ್ವೆದ ಗ್ರಂಥಗಳಲ್ಲಿ ಇದನ್ನು ಹೃದ್ಯ ಎಂದು ಕರೆದಿದ್ದಾರೆ. ಅಂದರೆ ಇದು ಹೃದಯಕ್ಕೆ ಶಕ್ತಿಯನ್ನು ಕೊಡುತ್ತದೆ. ಹೊರತು ಹೃದಯದ ಅನಾರೋಗ್ಯಕ್ಕೆ ಕಾರಣವಾಗಲು ಸಾಧ್ಯವಿಲ್ಲ. ಇದನ್ನು ದೇಹದಲ್ಲಿ ಉರಿ ಇರುವವರಿಗೆ, ಪಿತ್ತ ಹೆಚ್ಚಾದವರಿಗೆ, ಗಾಯಗಳಿಂದ ಬಳಲುತ್ತಿರುವವರಿಗೆ, ಧಾತುಕ್ಷಯವಾಗಿ ಸೊರಗಿದವರಿಗೆ, ರಕ್ತಸ್ರಾವಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಅನುಭವಿಸುತ್ತಿರುವವರಿಗೆ ಕೊಡಬೇಕು ಎಂದು ಗ್ರಂಥಗಳು ಹೇಳುತ್ತವೆ.

ಆಯುರ್ವೆದ ಗ್ರಂಥಗಳಲ್ಲಿ ಕರಬೂಜವನ್ನು ಕೋಷ್ಠ ಶುದ್ಧಿಕರ ಎಂದು ಕರೆದಿದ್ದಾರೆ. ಅಂದರೆ ಕರುಳನ್ನು ಶುದ್ಧ ಮಾಡುತ್ತದೆ ಎಂದರ್ಥ. ಭಾವ ಪ್ರಕಾಶ ನಿಘಂಟುವಿನಲ್ಲಿ ಇದಕ್ಕೆ ವೃಷ್ಯ ಗುಣ ಇದೆ ಎಂದು ಹೇಳಿದ್ದಾರೆ. ಅಂದರೆ ಇದಕ್ಕೆ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಗುಣ ಕೂಡ ಇದೆ ಎಂದರ್ಥ. ಇದು ಮಲವಿಸರ್ಜನೆ ಸರಾಗವಾಗಿ ಆಗಲು ಸಹಾಯ ಮಾಡುವ ಕಾರಣದಿಂದ ಇದನ್ನು ಮಲಬದ್ಧತೆ ಇರುವವರು ಬೇಸಿಗೆಯಲ್ಲಿ ಹೆಚ್ಚಾಗಿ ಬಳಸಬಹುದು. ಕರ್ಬೂಜದ ಹಣ್ಣಿನಲ್ಲಿ ತಾಮ್ರ, ಫಾಸ್ಪರಸ್, ಕಬ್ಬಿಣ, ವಿಟಮಿನ್ ಎ, ಬಿ1, ಬಿ2 ಮತ್ತು ವಿಟಮಿನ್ ಸಿಗಳು ಹೇರಳವಾಗಿವೆ. ಇದರಿಂದಾಗಿ ಬೇಸಿಗೆಯಲ್ಲಿ ದೌರ್ಬಲ್ಯದ ಸಮಸ್ಯೆಯನ್ನು ಅನುಭವಿಸುವವರು ಇದನ್ನು ಹೆಚ್ಚಾಗಿ ಉಪಯೋಗಿಸಬಹುದು.

ಚೆನ್ನಾಗಿ ಬಲಿತ ಮತ್ತು ಸಿಹಿಯಾಗಿರುವ ಮಾವಿನ ಹಣ್ಣು ವಾತ ದೋಷವನ್ನು ನಿಯಂತ್ರಿಸುತ್ತದೆ. ಇದು ದೇಹದ ಧಾತುಗಳಿಗೆ ಪುಷ್ಟಿ ನೀಡಿ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಮಾವು ಬೆಳೆಯುವ ಕಾಲದಲ್ಲಿ ಹೆಚ್ಚಾಗಿ ಮಾವಿನ ಹಣ್ಣನ್ನು ಸೇವಿಸುವುದರಿಂದ ಬೇಸಿಗೆಯಲ್ಲಿ ಆಗುವ ಸುಸ್ತು, ಬಾಯಾರಿಕೆ ನೀಗಿಸಿಕೊಂಡು ದೇಹದ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಬೇಸಿಗೆಯಲ್ಲಿ ಉಷ್ಣತೆಯ ಕಾರಣದಿಂದ ಉಂಟಾಗುವ ಹಲವು ತೊಂದರೆಗಳನ್ನು ಬೇಲದ ಹಣ್ಣು ತಡೆಯು ತ್ತದೆ ಮತ್ತು ಆಗಲೇ ತೊಂದರೆಗಳನ್ನು ಅನುಭವಿಸುತ್ತಿರುವವರಿಗೆ ರೋಗ ನಿವಾರಣೆಗೆ ಅನುಕೂಲ ಮಾಡಿಕೊಡುತ್ತದೆ. ಅತಿ ಬಾಯಾರಿಕೆ, ಉಷ್ಣತೆ, ತಲೆನೋವು, ಹೊಟ್ಟೆ ಉರಿಯಂತಹ ತೊಂದರೆಗಳಿದ್ದಾಗ ಕೆಲ ದಿನಗಳ ಕಾಲ ಪ್ರತಿದಿನ ಚೆನ್ನಾಗಿ ಬಲಿತ ಒಂದು ಹಣ್ಣನ್ನು ಸೇವಿಸಬೇಕು. ಎಲ್ಲಾ ಕಡೆ ಇದು ಲಭ್ಯವಿರಲಿಕ್ಕಿಲ್ಲ. ಸಿಗದೇ ಹೋದರೆ ಇದನ್ನು ಬಿಟ್ಟು ಮಿಲ್ಕ್ ಶೇಕ್ ಮಾಡಿಕೊಳ್ಳಬಹುದು.

ಚಿಕ್ಕು ಹಣ್ಣು ಅತ್ಯಂತ ಪೋಷಕಾಂಶ ಭರಿತವಾದುದು. ಇದರಲ್ಲಿ ಆಂಟಿ ಆಕ್ಸಿಡೆಂಟ್​ಗಳು ಹೇರಳವಾಗಿವೆ. ಇದು ಕೂಡ ತಂಪು ಗುಣವನ್ನು ಹೊಂದಿದ್ದು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಸೀತಾಫಲವಂತೂ ಹೊಟ್ಟೆಗೆ ತಂಪು ನೀಡಿ ಅಸಿಡಿಟಿ, ಅಲ್ಸರ್​ನಂತಹ ತೊಂದರೆಗಳಲ್ಲಿ ಅನುಕೂಲ ಮಾಡಿಕೊಡುತ್ತದೆ. ವಾತ ಮತ್ತು ಪಿತ್ತದೋಷಗಳನ್ನು ಚೆನ್ನಾಗಿ ನಿಯಂತ್ರಿಸಿ, ದೇಹಕ್ಕೆ ಉತ್ತಮವಾದ ಬಲವನ್ನು ತಂದುಕೊಡುತ್ತದೆ. ಇದಕ್ಕೆ ಜೀವಕೋಶಗಳಿಗೆ ಶಕ್ತಿಯನ್ನು ಕೊಡುವ, ಮಧುಮೇಹವನ್ನು ನಿಯಂತ್ರಿಸುವ, ದೊಡ್ಡ ಕರುಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಗುಣಪಡಿಸುವ ಶಕ್ತಿ ಇದೆ ಎಂದು ಸಂಶೋಧನೆಗಳು ಹೇಳುತ್ತವೆ.

ಖರ್ಜೂರದ ನಿಯಮಿತ ಸೇವನೆಯಿಂದ ದೌರ್ಬಲ್ಯ, ಮಾನಸಿಕ ಒತ್ತಡ ಅಥವಾ ವೃದ್ಧಾಪ್ಯದ ಕಾರಣದಿಂದ ಆಗುವ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆಯಾಗುತ್ತವೆ. ಯಾವುದೇ ಕಾರಣದಿಂದ ಧಾತುಕ್ಷಯವಾಗಿದ್ದರೆ, ತೂಕ ಕಡಿಮೆಯಾಗಿದ್ದರೆ, ಸುಸ್ತು ಉಂಟಾಗುತ್ತಿದ್ದರೆ ಅಂತಹ ಸಂದರ್ಭದಲ್ಲಿ ಖರ್ಜೂರ ತುಂಬಾ ಪ್ರಯೋಜನಕಾರಿ. ಖರ್ಜೂರ ಉಷ್ಣವೆಂದು ತುಂಬಾ ಜನ ಹೆದರುತ್ತಾರೆ. ಆದರೆ ಎಲ್ಲಾ ಆಯುರ್ವೆದ ಗ್ರಂಥಗಳಲ್ಲಿಯೂ ಖರ್ಜೂರವು ತಂಪೆಂದೂ, ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ಎಂದೂ ವಿವರಿಸಿದ್ದಾರೆ. ಕಪ್ಪಗೆ, ಮೆತ್ತಗೆ ಇರುವ ಮತ್ತು ನೈಜ ಸಿಹಿ ಅನುಭವ ಕೊಡುವ ಖರ್ಜೂರವನ್ನು ಬಳಸುವುದು ಸೂಕ್ತ. ಇಂಥವು ಸ್ವಲ್ಪ ದುಬಾರಿಯಾದರೂ ಆರೋಗ್ಯಕ್ಕೆ ಹೆಚ್ಚು ಒಳ್ಳೆಯದಾಗಿರುತ್ತವೆ.

0.12 ಸೆಕೆಂಡ್​! ಅದೇ ವೇಗ, ನಿಖರತೆ, ಚಾಣಕ್ಷತನ; ವಯಸ್ಸಾಯ್ತು ಎಂದವರಿಗೆ ಮೈದಾನದಲ್ಲೇ ಖಡಕ್ ಉತ್ತರ ಕೊಟ್ಟ ‘ಕ್ಯಾಪ್ಟನ್​ ಕೂಲ್’​ | MS Dhoni

 

Share This Article

Toilet ಬಳಸಿದ ನಂತರ ಈ ತಪ್ಪು ಎಂದಿಗೂ ಮಾಡಬೇಡಿ: ಅಪಾಯ ಕಾದಿದೆಯಂತೆ!

Toilet : ನಮಲ್ಲಿ ಹಲವರು ಶೌಚಾಲಯ (ಪಾಶ್ಚಾತ್ಯ ಶೌಚಾಲಯ) ಬಳಸಿದ ನಂತರ ಟಾಯ್ಲೆಟ್​ನ ಮುಚ್ಚುಳ ಮುಚ್ಚದೇ…

ಬೇಸಿಗೆಯಲ್ಲಿ ನಿಮ್ಮ ಆರೋಗ್ಯಕ್ಕೆ ಯಾವುದು ಹೆಚ್ಚು ಪ್ರಯೋಜನಕಾರಿ, ಮೊಸರು ಅಥವಾ ಮಜ್ಜಿಗೆ?Summer Health Tips

  Summer Health Tips: ಬೇಸಿಗೆಯ ಸುಡುವ ಬಿಸಿಲಿನಲ್ಲಿ ಮಧ್ಯಾಹ್ನವಾಗಲಿ ಅಥವಾ ಸಂಜೆಯಾಗಲಿ, ನಮ್ಮ ದೇಹವನ್ನು…

Oil Food: ಎಣ್ಣೆ ಪದಾರ್ಥ ಆಹಾರ ತಿಂದ ನಂತರ ಈ ಕೆಲಸಗಳನ್ನು ಮಾಡಿ ಆರೋಗ್ಯಕ್ಕೆ ಒಳ್ಳೆಯದು

Oil Food: ನಮ್ಮಲ್ಲಿ ಹಲವರಿಗೆ ಯಾವಾಗಲೂ ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಕು ಎಂದು ಅನಿಸುತ್ತದೆ. ಅಂದರೆ ನಾವು…