More

    ಮಧ್ಯಮ ವರ್ಗದವರಿಗಾಗಿ ಮಾರುಕಟ್ಟೆಗೆ ಬಂತು ಬಜೆಟ್​ ಫೋನ್​

    ಹೊಸದಿಲ್ಲಿ: ಮಧ್ಯಮ ವರ್ಗದ ಗ್ರಾಹಕರಿಗೆ ಅನಕೂಲವಾಗಲೆಂದು ನೋಕಿಯಾ ಸ್ಮಾರ್ಟ್‌ಫೋನ್‌ಗಳ ತಯಾರಕ ಕಂಪನಿಯಾದ ಎಚ್‌ಎಂಡಿ ಗ್ಲೋಬಲ್ ಮಂಗಳವಾರ ತನ್ನ ಹೊಸ ಸಿ-ಸರಣಿಯ ಹೊಸ ನೋಕಿಯಾ C32 ಫೋನ್​ನ್ನು ಬಿಡುಗಡೆ ಮಾಡಿದೆ.

    ಹೊಸ ನೋಕಿಯಾ C32 ಫೋನ್​ 4GB RAM+64GB ಹಾಗೂ 4GB RAM+128GBಯ ಎರಡು ಆವೃತ್ತಿಯಲ್ಲಿ ಲಭ್ಯವಿದೆ. ಈ ಫೋನ್​ನ ಬೆಲೆಯು ಕ್ರಮವಾಗಿ ರೂ 8,999 ಮತ್ತು 9,499 ಆಗಿದೆ. 

    ಇದನ್ನೂ ಓದಿ: ಬೋರ್‌ವೆಲ್ ಕೊರೆಸಿ ನೀರಿನ ದಾಹ ತೀರಿಸಿದ ಆಂಧ್ರಪ್ರದೇಶದ ರೈತ

    ಹೊಸ ನೋಕಿಯಾ ಸ್ಮಾರ್ಟ್‌ಫೋನ್ 6.5 ಇಂಚಿನ HD+ ಡಿಸ್‌ಪ್ಲೇ ಹೊಂದಿದೆ. ಇದು 50MP AI ಡ್ಯುಯಲ್ ಫ್ರಂಟ್​ ಕ್ಯಾಮೆರಾ ಮತ್ತು 8MP ಸೆಲ್ಪಿ ಕ್ಯಾಮರಾವನ್ನು ಹೊಂದಿದೆ. Nokia C32 ಸ್ಮಾರ್ಟ್‌ಫೋನ್ ಆಕ್ಷಾ-ಕೋರ್ ಪ್ರೊಸೆಸರ್‌ನಿಂದ ಬೆಂಬಲಿತವಾಗಿದ್ದು, 5000mAh ಬ್ಯಾಟರಿಯನ್ನು ಹೊಂದಿದೆ. ಇದರ ಇನ್ನೊಂದು ವಿಶೇಷವೆಂದರೆ 3GB RAM ವಿಸ್ತರಿಸಬಹುದಾದ ಮೆಮೋರಿಯನ್ನು ಹೊಂದಿದೆ.

    ಮೂರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುವ ಈ ಫೋನ್​ಗಳು ಕಪ್ಪು, ತಿಳಿ ಗುಲಾಬಿ, ಹಾಗೂ ಹಸಿರು ಬಣ್ಣಗಳಲ್ಲಿ ಲಭ್ಯವಿದೆ. ಇದು ಆಂಡ್ರಾಯ್ಡ್​ 13 ಮೊಬೈಲ್ ಆಪರೇಟಿಂಗ್ ಸಿಸ್ಟಮ್​ನಲ್ಲಿ ಕಾರ್ಯ ನಿರ್ವಹಿಸುತ್ತದೆ. ನೋಕಿಯಾ C32 ಒಂದು ವರ್ಷ ರಿಪ್ಲೇಸ್​ಮೆಂಟ್​​ ಹೊಂದಿದ್ದು, ಖರೀದಿಸಿದ ದಿನದಿಂದ ಒಂದು ವರ್ಷದವರೆಗೆ ಹಾರ್ಡ್‌ವೇರ್ ಅಥವಾ ಫೋನ್​ನಲ್ಲಿ ಉತ್ಪಾದನಾ ದೋಷವಿದ್ದರೆ, ಫೋನ್​ನ್ನು ಬದಲಾಯಿಸಲಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts