ಗೋಡ್ಸೆ ಗಾಂಧೀಜಿ ದೇಹವನ್ನು ಹತ್ಯೆಗೈದ, ಪ್ರಜ್ಞಾ ಸಿಂಗ್​ರಂತಹವರು ದೇಶದ ಆತ್ಮವನ್ನೇ ಕೊಲ್ಲುತ್ತಿದ್ದಾರೆ: ಕೈಲಾಶ್​ ಸತ್ಯಾರ್ಥಿ ಟ್ವೀಟ್​

ನವದೆಹಲಿ: ನಟ ಕಮಲ್​ ಹಾಸನ್​ ನಾಥುರಾಮ್​ ಗೋಡ್ಸೆಯನ್ನು ದೇಶದ ಮೊದಲ ಹಿಂದು ಭಯೋತ್ಪಾದಕ ಎಂದು ಹೇಳಿದಾಗಿನಿಂದ ಅದೇ ವಿಚಾರವಾಗಿ ವಾದ-ವಿವಾದಗಳು ಮುಂದುವರಿಯುತ್ತಲೇ ಇವೆ.

ಈ ಮಧ್ಯೆ ಭೋಪಾಲ್​ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್​ ಠಾಕೂರ್​ ನಾಥುರಾಮ್​ ಗೋಡ್ಸೆಯನ್ನು ದೇಶಭಕ್ತ ಎಂದಿದ್ದರು. ಆದರೆ ಅವರ ಹೇಳಿಕೆಯಿಂದ ಬಿಜೆಪಿ ಸೇರಿ ಎಲ್ಲ ಪಕ್ಷಗಳೂ ವಿರೋಧಿಸಿದ್ದು, ಮೋದಿಯವರೂ ಕೂಡ ಈ ವಿಚಾರದಲ್ಲಿ ಪ್ರಜ್ಞಾ ಅವರನ್ನು ಕ್ಷಮಿಸುವುದಿಲ್ಲ ಎಂದಿದ್ದಾರೆ.
ಈಗ ನೊಬೆಲ್​ ಶಾಂತಿ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಸಾಧ್ವಿ ಪ್ರಜ್ಞಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಟ್ವೀಟ್​ ಮಾಡಿರುವ ಅವರು, ಗೋಡ್ಸೆ ಗಾಂಧಿಯ ದೇಹವನ್ನು ಹತ್ಯೆಗೈದ. ಆದರೆ ಪ್ರಜ್ಞಾ ಸಿಂಗ್​ ಠಾಕೂರ್​ನಂಥವರು, ಗಾಂಧೀಜಿಯವರ, ಭಾರತದ ಆತ್ಮವನ್ನೇ ಹತ್ಯೆಗೈಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಜ್ಞಾ ಸಿಂಗ್​ ಠಾಕೂರ್​ನಂಥ ಹಲವು ಜನರು ಶಾಂತಿ, ಅಹಿಂಸೆ, ಸಹನೆಗಳನ್ನು ಕೊಲೆ ಮಾಡುತ್ತಿದ್ದಾರೆ.

ಗಾಂಧಿಯವರು ಪಕ್ಷ, ರಾಜಕೀಯಕ್ಕೂ ಮೀರಿ ಬೆಳೆದಂಥ ವ್ಯಕ್ತಿ. ಬಿಜೆಪಿ ನಾಯಕರು ತಮ್ಮ ಲಾಭದ ಆಸೆಯನ್ನು ಬಿಟ್ಟು ಗಾಂಧಿ ವಿರುದ್ಧ ಹೇಳಿಕೆ ನೀಡುತ್ತಿರುವ ತಮ್ಮ ಪಕ್ಷದವರನ್ನು ಉಚ್ಚಾಟನೆ ಮಾಡಿ ರಾಜಧರ್ಮ ಪಾಲನೆ ಮಾಡಬೇಕು ಎಂದು ಹಿಂದಿಯಲ್ಲಿ ಟ್ವೀಟ್​ ಮಾಡಿದ್ದಾರೆ.

ನಾಥೂರಾಮ್​ ಗೋಡ್ಸೆ ಪರ ಪ್ರಜ್ಞಾ ಸಿಂಗ್​ ಠಾಕೂರ್​ ನೀಡಿದ್ದ ದೇಶಭಕ್ತ ಹೇಳಿಕೆ ವಿರುದ್ಧ ಎಲ್ಲ ಪಕ್ಷಗಳ ಮುಖಂಡರೂ ತಿರುಗಿಬಿದ್ದಿದ್ದಾರೆ. ಬಿಜೆಪಿ ಕೂಡ ಅವರ ಹೇಳಿಕೆ ಪಕ್ಷದ್ದಲ್ಲ ಎಂದು ಅಂತರ ಕಾಯ್ದುಕೊಂಡಿದೆ.

Leave a Reply

Your email address will not be published. Required fields are marked *