22.5 C
Bengaluru
Thursday, January 23, 2020

ಊರ್ತುಂಬಾ ಬಾವಿ, ನೀರಿಲ್ಲ..!

Latest News

ನಾಲ್ಕು ಜಿಲ್ಲೆಗಳಿಗೆ ವೈದ್ಯಕೀಯ ಕಾಲೇಜು ಮಂಜೂರು

ಮೈಸೂರು: ವೈದ್ಯಕೀಯ ಶಿಕ್ಷಣ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾಡಳಿತದ ವತಿಯಿಂದ ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ...

ಶನಿ ಸಂಚಾರ ಯಾರಿಗೆ ವರ, ಯಾರಿಗೆ ಗ್ರಹಚಾರ

ಶುಕ್ರವಾರ 33 ವರ್ಷದ ನಂತರ ಶನಿ ತನ್ನ ಮನೆಗೆ ಬರುತ್ತಾನೆ. ಒಂದು ಮನೆಯಿಂದ ಮತ್ತೊಂದು ಮನೆಗೆ ದಾಟಲು 2 ವರ್ಷ 8 ತಿಂಗಳು...

ಕೌಟುಂಬಿಕ ಕಲಹಕ್ಕೆ ನಲುಗಿದ ತಾಯಿ ಮಕ್ಕಳೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆ

ಚಿಕ್ಕೋಡಿ: ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ತಾಯಿ ತನ್ನ ಇಬ್ಬರು ಮಕ್ಕಳೊಂದಿಗೆ ಕಾಲುವೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಕ್ಕೇರಿ ತಾಲೂಕಿನ ನೊಗನಿಹಾಳ ಗ್ರಾಮದಲ್ಲಿ...

ಆಸ್ಪತ್ರೆ ಶುಚಿತ್ವಕ್ಕೆ ಮದ್ದರೆದ ಸಚಿವರ ವಾಸ್ತವ್ಯ

ಚಿತ್ರದುರ್ಗ: ಆರೋಗ್ಯ ಸಚಿವ ಶ್ರೀರಾಮುಲು ಅವರು ಗುರುವಾರ ರಾತ್ರಿ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಛತೆ ಇಣುಕಿದೆ. ಮೈಸೂರಿನಲ್ಲಿದ್ದ ಸಚಿವರು ರಾತ್ರಿ 11-30ರ...

ಹಾಫ್ ಬಾಯಿಲ್ಡ್ ರೆಡಿ; ಬ್ಯಾಚಲರ್​ ಬಾಯ್ಸ್​ ಕಾಮಿಡಿ ಸಿನಿಮಾ

‘ಹಾಫ್ ಬಾಯಿಲ್ಡ್’ ರೆಡಿಯಾಗಿದೆ. ಹಾಗಂತ ಇದು ಹಾಫ್ ಬಾಯಿಲ್ಡ್ ಮೊಟ್ಟೆ ಅಲ್ಲ, ‘ನಾವೆಲ್ರೂ ಹಾಫ್ ಬಾಯಿಲ್ಡ್’ ಎಂಬ ಚಿತ್ರ. ಹೀಗೊಂದು ವಿಭಿನ್ನ ಶೀರ್ಷಿಕೆ ಇಟ್ಟುಕೊಂಡು ಕನ್ನಡದಲ್ಲಿ...

ಶ್ರೀಪತಿ ಹೆಗಡೆ ಹಕ್ಲಾಡಿ/ನರಸಿಂಹ ನಾಯಕ್ ಬೈಂದೂರು

ನಮ್ ಕತಿ ಕೇಂಡ್ರೇ, ಸತ್ತೋರ್ ಮುಂದೆ ಕಷ್ಟಸುಖ ಹೇಳಿಕೊಂಡ್ಹಾಂಗೆ ಆತ್ತೇ..ನಾವ್ ಬಾಯಿಬಡ್ಕಂಡ್ರೆ ಅವರು ಕೇಂತ್ರಾ.. ಹಾಂಗಾಯಿತು ನಮ್ ಕತಿ.. ಹಾಂಗಾರೂ ಊರ್ ತಂಬಾ ಬಾವಿಯಿತ್ತೇ..ಕುಡೂಕೆ ನೀರಿಲ್ಲ್ಯೇ.. ನಾವು ಯಾರ್‌ಹತ್ರ ಬಾಯಿಬಡ್ಕಣ್ಕು ಹೇಳೀನೀ.. ಸುಡ್ಗಾಡು ಬೇಸಿಗೆ ಯಾಕಾರೂ ಬತ್ತೋ ಅಂಬ ಹಾಂಗೆ ಆಯಿತು ಮಾರ‌್ರೇ..

ಹೀಗೆ ಕುಂದಗನ್ನಡದಲ್ಲಿ ನೀರಿನ ಸಮಸ್ಯೆ ಬಗ್ಗೆ ಬೀಜೂರು ಗ್ರಾಪಂ ನಿವಾಸಿಗಳು ಸಮಸ್ಯೆ ಬಿಚ್ಚಿಡುತ್ತಾರೆ.
ಬಿಜೂರು ಸಮುದ್ರ ಮಟ್ಟಕ್ಕೆ ಸಮನಾಂತರದಲ್ಲಿದ್ದು, ಕಣ್ಣು ಹಾಯಿಸಿದಷ್ಟು ಕಾಣುವುದು ಗದ್ದೆ ಬಯಲೇ. ನೆಲ ಸಮತಟ್ಟಾಗಿದ್ದರಿಂದ ಹಿಂದಿನವರು ಗದ್ದೆಗಳಲ್ಲಿ ಕೆರೆಕಟ್ಟೆ ಕಟ್ಟಿ ನೀರಿಂಗಿಸಿಕೊಂಡು ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದರು. ಕೆರೆಕಟ್ಟೆಗಳ ನಿರ್ಲಕ್ಷಿಸಿದ್ದರಿಂದ ಬಿಜೂರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ.

ಬಿಜೂರು ಗ್ರಾಮ ನೀರಿನ ಸಮಸ್ಯೆ ಪರಿಹಾರಕ್ಕೆ ಪೈಪ್ ಲೈನ್ ಸುಮಾರು 2.50 ಸಾವಿರ ಮೀಟರ್ ಮಾಡಿದ್ದರೂ ನೀರು ಮಾತ್ರ ಪೈಪ್‌ನಲ್ಲಿ ಹರಿಯಲಿಲ್ಲ! ಕೃಷಿಕರ ಒಪ್ಪಿಗೆ ಕೂಡಾ ಪಡೆಯದೆ ಕೃಷಿ ಭೂಮಿಯಲ್ಲಿ ಪೈಪ್ ಹಾಕಿದ್ದು, ನಾಟಿ ಮಾಡುವಾಗ ಪೈಪ್ ಲೈನ್ ಕೃಷಿಕರಿಗೆ ಹೊಸ ಸಮಸ್ಯೆ ತಂದಿರುವುದು ಸಾಧನೆ. ಒಟ್ಟಾರೆ ಕುಡಿಯುವ ನೀರು ಪೂರೈಕೆ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಗಟ್ಟಿಯಾಗುತ್ತಿರುವುದು ದುರಂತ.

ಗೋಮಾಳದಲ್ಲಿ ಕೆರೆ: ಬಿಜೂರು ಬಳಿ ಗೋಮಾಳದಲ್ಲಿರುವ ಕೆರೆಯೊಳಗೆ ಬಾವಿ ತೆಗೆದು ನಿಯಮ ಉಲ್ಲಂಘಿಸಲಾಗಿದೆ. ಅಷ್ಟೇ ಅಲ್ಲದೆ ತೋಡಿದ ಬಾವಿ ಮಣ್ಣು ಕೆರೆಗೆ ತುಂಬಿ ಅರ್ಧಕೆರೆ ಆಪೋಷನ ತೆಗೆದುಕೊಳ್ಳಲಾಗಿದೆ. ಇನ್ನೂ ಬಾವಿ ಕೂಡಾ ಪೂರ್ಣ ಮಾಡದೆ ಅನುದಾನ ಬಿಡುಗಡೆ ಮಾಡಲಾಗಿದೆ. ಜಿಪಂ ನೀರಾವರಿ ಅಧಿಕಾರಿಗಳ ಸ್ಥಳ ಕೂಡ ಪರೀಕ್ಷಿಸದೆ, ಭೂ ವಿಜ್ಞಾನ ಇಲಾಖೆ ಅನುಮೋದನೆ ಕೂಡ ಪಡೆಯದೆ ಕೆರೆ ಒಳಗೆ ಬಾವಿ ತೋಡುವ ಮೂಲಕ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರಾ ಎಂಬ ಶಂಕೆ ಮೂಡುತ್ತದೆ. ಪ್ರಸಕ್ತ ಈ ಬಾವಿಯಲ್ಲಿ 18 ಫೀಟ್ ನೀರಿದ್ದು, ಖಾಸಗಿ ವ್ಯಕ್ತಿಗಳು ಮೋಟಾರ್ ಮೂಲಕ ತಮ್ಮ ತೋಟಕ್ಕೆ ನೀರು ಪೂರೈಸುತ್ತಿದ್ದಾರೆ. ಕೆರೆಯ ಹೂಳು ತೆಗೆದು ಶುದ್ಧೀಕರಿಸಿ ಕುಡಿಯುವ ನೀರು ಪೂರೈಕೆ ಮಾಡಲು ಅವಕಾಶವಿದ್ದರೂ ಮತ್ತೆ ಬಾವಿ ತೋಡುವ ಮೂಲಕ ಸರ್ಕಾರದ ಹಣ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ವಿಪರ್ಯಾಸ.

ಟ್ಯಾಂಕ್ ನಿರ್ಮಾಣಕ್ಕೆ ತಯಾರಿ: ಬಿಜೂರು ಗ್ರಾಪಂ ಸ್ಮಶಾನದಲ್ಲಿ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಸಾಮಗ್ರಿ ಬಂದು ಬಿದ್ದಿದೆ. ಟ್ಯಾಂಕ್‌ಗೆ ನೀರೆಲ್ಲಿಂದ ಎಂದು ಗೊತ್ತಿಲ್ಲ. ಜಿಪಂ ಹಾಗೂ ಬೇರೆ ಬೇರೆ ಅನುದಾನದ ಮೂಲಕ ಬಿಜೂರು ಗ್ರಾಪಂ ನೀರಿನ ಸಮಸ್ಯೆ ಪರಿಹಾರಕ್ಕೆ ಕೋಟಿ ಲೆಕ್ಕದಲ್ಲಿ ಅನುದಾನ ಖರ್ಚು ಮಾಡಿದ್ದರೂ, ಸಾರ್ವಜನಿಕರಿಗೆ ಕುಡಿಯಲು ನೀರಿಲ್ಲ. ಇವೆಲ್ಲದರ ನಡುವೆ ಬಿಜೂರು ಸರ್ಕಾರಿ ಹಿಪ್ರಾ ಶಾಲೆ ಆವರಣದಲ್ಲಿ ಮತ್ತೊಂದು ಬಾವಿ ತೆಗೆಯುವ ಮೂಲಕ ಸುದ್ದಿಯಾಗುತ್ತಿದೆ. ಬಿಜೂರು ಸರಿಹದ್ದಿನಲ್ಲಿ ಒಟ್ಟು ಸರ್ಕಾರದ ಏಳು ಬಾವಿಗಳಿದ್ದು, ನೀರಿನ ಬಳಕೆಗೆ ಒತ್ತು ಕೊಡದೆ ಮತ್ತೊಂದು ಬಾವಿ ತೆಗೆದೇ ಸಿದ್ಧ ಎನ್ನುವ ಮೂಲಕ ಗುತ್ತಿಗೆದಾರರ ಹಿತದೃಷ್ಟಿಯೇ ಮುಖ್ಯವಾಗಿಟ್ಟು ಕೊಳ್ಳಲಾಗುತ್ತದೆ ಎಂಬ ಅನುಮಾನಕ್ಕೂ ಎಡೆ ಮಾಡಿಕೊಡುತ್ತಿದೆ.

ಬಿಜೂರು ಸ್ಮಶಾನ ಜಾಗದಲ್ಲಿ ಕುಡಿಯುವ ನೀರು ಪೂರೈಕೆ ಹಿನ್ನೆಲೆಯಲ್ಲಿ ಟ್ಯಾಂಕ್ ನಿರ್ಮಿಸಲಾಗುತ್ತಿದ್ದು, ಸ್ಮಶಾನ ಜಾಗದಲ್ಲಿ ಬಾವಿ ತೋಡಿದರೆ ಸಮೃದ್ಧ ನೀರು ಸಿಗುತ್ತದೆ. ಅದು ಬಿಟ್ಟು ಎಲ್ಲೆಲ್ಲೋ ಬಾವಿ ತೆಗೆದು ಅದರಿಂದ ನೀರು ಪೂರೈಕೆ ಮಾಡುವ ದುಂದು ವೆಚ್ಚ ಮಾಡುವುದು ಯಾಕೆ ಎಂಬುದು ಪ್ರಶ್ನೆ.

ಬಿಜೂರು ಸರ್ವೇ ನಂಬರ್17ರಲ್ಲಿ ಗೋಮಾಳ ಜಾಗವಿದ್ದು, ಅದರಲ್ಲಿ ಸಾಕು ಪ್ರಾಣಿಗಳ ನೀರಿನ ದಾಹ ತಣಿಸಲು ಕೆರೆ ಕೂಡಾ ಹಿಂದಿನವರು ನಿರ್ಮಿಸಿದ್ದರು. 35 ಸೆನ್ಸ್ ವಿಸ್ತಾರದ ಕೆರೆಯಲ್ಲಿ ಅಗಾಧ ನೀರಿರುತ್ತಿದ್ದು, ಪ್ರಸಕ್ತ ಹೂಳು ತುಂಬಿ ನೀರಿನ ಮಟ್ಟ ತಗ್ಗಿದ್ದು, ಅಕ್ಕಪಕ್ಕದ ದರೆ ಕುಸಿದು ಕೆರೆ ಸಂಕುಚಗೊಂಡಿದೆ. ಕೆರೆ ಬದಿಕಟ್ಟಿ ಹೂಳು ತೆಗೆದರೆ ಕೆರೆಯಲ್ಲಿ ನೀರು ಸಂಗ್ರಹದ ಜತೆ ಪರಿಸರದ ಬಾವಿಗಳ ನೀರಿನ ಮಟ್ಟ ಕೂಡಾ ಹೆಚ್ಚಲಿದೆ. ಬೀಜೂರು ಗ್ರಾಮದಲ್ಲಿರುವ ನಿರಾಶ್ರಿತ ತಾಣಗಳ ಅಭಿವೃದ್ಧಿ ಪಡಿಸಿಕೊಂಡರೆ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗುತ್ತದೆ. ಹಾಗೆ ಗೋಮಾಳದಲ್ಲಿರುವ ಕೆರೆ ಅಭಿವೃದ್ಧಿ ಮಾಡಿದರೆ ಅಂರ್ತಜಲ ಮಟ್ಟ ಕೂಡಾ ವೃದ್ಧಿಸಲಿದೆ.
| ನಾರಾಯಣ, ಯಕ್ಷಗಾನ ಕಲಾವಿದ, ಬಿಜೂರು

ಹಿಂದಿನವರು ನೀರಿನ ಸೆಲೆ ಹಾಗೂ ಜಾನುವಾರುಗಳಿಗೆ ನೀರಿಗಾಗಿ ನಿರ್ಮಿಸಿದ ಕೆರೆ ಅವಜ್ಞೆಗೆ ಒಳಗಾಗುತ್ತಿದೆ. ಕೆರೆ ಹೂಳೆತ್ತಿ ಅಭಿವೃದ್ಧಿ ಪಡಿಸಬೇಕು. ಕೆರೆ ಸುತ್ತ ಕಲ್ಲುಕಟ್ಟಿ ಬದಿ ಕುಸಿಯದಂತೆ ಮಾಡಬೇಕು. ಕೆರೆಯಲ್ಲೇ ಬಾವಿ ತೆಗೆದಿದ್ದು, ಬಾವಿ ಕೆಲಸ ಸಂಪೂರ್ಣ ಮಾಡಿ, ಶುದ್ಧಿಕರಿಸಿ ಕುಡಿಯುವ ನೀರು ಪೂರೈಕೆ ಮಾಡಬೇಕು.

| ಶಂಕರ ಗಾಣಿಗ ಬಿಜೂರು, ಕೃಷಿಕ 

ವಿಡಿಯೋ ನ್ಯೂಸ್

VIDEO| ಇಂದಿರಾ ಜೈಸಿಂಗ್​ ಅಂತಹವರನ್ನು ನಿರ್ಭಯಾ ಅಪರಾಧಿಗಳ ಜತೆ ಜೈಲಿನ...

ನವದೆಹಲಿ: ಹಿರಿಯ ವಕೀಲೆ ಇಂದಿರಾ ಜೈಸಿಂಗ್​ ಅವರನ್ನು ನಿರ್ಭಯಾ ಪ್ರಕರಣದ ಅಪರಾಧಿಗಳ ಜತೆ ಜೈಲಿನಲ್ಲಿಡಬೇಕು ಎಂದು ನಟಿ ಕಂಗನಾ ರಣಾವತ್​ ಆಕ್ರೋಷ ವ್ಯಕ್ತಪಡಿಸಿದ್ದಾರೆ. ನಿರ್ಭಯಾ ಪ್ರಕರಣವನ್ನು ಸಂತ್ರಸ್ಥೆ ತಾಯಿ ಆಶಾದೇವಿ ಅವರು ಕ್ಷಮಿಸಬೇಕು ಎಂಬ...

VIDEO| ಪ.ಬಂಗಾಳದಲ್ಲಿ ಮೂರೇ ವರ್ಷ ಹಿಂದೆ 165 ಕೋಟಿ ರೂ....

ಬಂಕುರಾ: ಪಶ್ಚಿಮ ಬಂಗಾಳದ ಬಂಕುರಾದ ಸಾರೆಂಗಾದಲ್ಲಿ ಕೇವಲ ಮೂರೇ ವರ್ಷ ಹಿಂದ 165 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಓವರ್ ಹೆಡ್ ಟ್ಯಾಂಕ್ ಒಂದು ಬುಧವಾರ ಅಪರಾಹ್ನ ಕುಸಿದು ಬಿದ್ದಿದೆ....

VIDEO| ಗಗನಯಾನಕ್ಕೆ ವ್ಯೋಮಮಿತ್ರಾ; ಇಸ್ರೋದಿಂದ ರೋಬಾಟ್ ಅನಾವರಣ, ವರ್ಷಾಂತ್ಯಕ್ಕೆ ಪ್ರಯಾಣ

ಬೆಂಗಳೂರು: ಭಾರತದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಕಾರ್ಯಕ್ರಮ ಗಳಲ್ಲೊಂದಾದ ಮಾನವಸಹಿತ ಗಗನಯಾನಕ್ಕೆ ಪೂರ್ವಭಾವಿಯಾಗಿ ಪ್ರಯಾಣ ಬೆಳೆಸಲಿರುವ ರೋಬಾಟ್ ‘ವ್ಯೋಮಮಿತ್ರಾ’ವನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಬುಧವಾರ ಬೆಂಗಳೂರಿನಲ್ಲಿ ಅನಾವರಣಗೊಳಿಸಿದೆ. ಖಾಸಗಿ ಹೋಟೆಲ್​ನಲ್ಲಿ ‘ಮಾನವಸಹಿತ ಗಗನಯಾನ ಮತ್ತು ಅನ್ವೇಷಣೆ ಕಾರ್ಯಕ್ರಮ’...

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...