More

    ಉಡುಪಿ ನಗರಕ್ಕೆ ನೀರು ಅಭಾವ ಭೀತಿ, ವಲಯವಾರು ಪೂರೈಕೆ

    ಉಡುಪಿ: ನಗರಸಭಾ ವ್ಯಾಪ್ತಿಯಲ್ಲಿ ನೀರಿನ ಅಭಾವ ಆರಂಭವಾಗುವ ಲಕ್ಷಣ ಗೋಚರಿಸಿದೆ. ಬೇಸಿಗೆಯಲ್ಲಿ ನೀರು ಪೂರೈಕೆಗೆ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ಮಾ.10ರಿಂದಲೇ ದಿನಕ್ಕೆ ಆರು ಗಂಟೆಯಂತೆ ಸಮಯ ನಿಗದಿಗೊಳಿಸಿ, ಮೂರು ವಲಯಗಳಾಗಿ ವಿಂಗಡಿಸಿ ನೀರು ಪುರೈಕೆ ಮಾಡಲು ನಗಸಭೆ ನಿರ್ಧರಿಸಿದೆ.
    ಸ್ವರ್ಣ ನದಿ ಬಜೆ ಡ್ಯಾಂನಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ನೀರು ಕಡಿಮೆಯಾದಲ್ಲಿ ರೇಶನಿಂಗ್ ಮಾಡಿ (ನೀರಿನ ಲಭ್ಯತೆ ಮೇರೆಗೆ ದಿನ ಬಿಟ್ಟು ದಿನ, ಎರಡು ದಿನಕ್ಕೊಮ್ಮೆ) ನೀರು ಪೂರೈಸಬೇಕಾಗುತ್ತದೆ. ಕಳೆದ ಬಾರಿ ಇದರಿಂದ ಸಾಕಷ್ಟು ಕಡೆಗಳಿಗೆ ನೀರು ಪೂರೈಕೆಯಲ್ಲಿ ಏರುಪೇರು ಸಂಭವಿಸಿದೆ. ಈಗಲೇ ವಲಯವಾಗಿ ವಿಂಗಡಿಸಿ ನೀರು ಪೂರೈಕೆ ಮಾಡುವುದರಿಂದ ಈ ಸಮಸ್ಯೆ ಉದ್ಬವಿಸುವುದಿಲ್ಲ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ. ಅಲ್ಲದೆ ಎತ್ತರದ ಪ್ರದೇಶಗಳಿಗೆ ಕೆಲವು ಕಡೆ ನೀರು ಸರಿಯಾಗಿ ಬರುತ್ತಿಲ್ಲ ಎಂದು ಸಾರ್ವಜನಿಕರಿಂದ ದೂರು ಬಂದಿದ್ದು, ವಲಯ ವಿಂಗಡಿಸಿ ನೀರು ಪೂರೈಸುವುದು ಇದಕ್ಕೆ ಉತ್ತಮ ಪರಿಹಾರ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಬಜೆ ಡ್ಯಾಂನಲ್ಲಿ ಒಳಹರಿವು ಫೆಬ್ರವರಿಯಲ್ಲೇ ನಿಂತಿದೆ. ಸದ್ಯಕ್ಕೆ ಬಜೆ ಡ್ಯಾಂನಲ್ಲಿ 5.64 ಮೀಟರ್ ನೀರಿದ್ದು, ಕಳೆದ ವರ್ಷ ಈ ಸಮಯದಲ್ಲಿ 4.9 ಮೀಟರ್ ಇತ್ತು. ಕಳೆದ ತಿಂಗಳು ಬಜೆ ಡ್ಯಾಂ ಲೀಕೇಜ್‌ಗಳನ್ನು ಸರಿಪಡಿಸಲಾಗಿದೆ. ಮಲ್ಪೆಯಿಂದ ಮುಳುಗುತಜ್ಞರನ್ನು ಕರೆಸಿ ಡ್ಯಾಂ ತಳಭಾಗದಲ್ಲಿ ಮರಳು ಚೀಲಗಳನ್ನು ಇರಿಸಿ ಸಣ್ಣಪುಟ್ಟ ಸೋರಿಕೆ ನಿಲ್ಲಿಸಿದ್ದೇವೆ ಎಂದು ನಗರಸಭೆ ಇಂಜಿನಿಯರ್ ಮೋಹನ್‌ರಾಜ್ ವಿಜಯವಾಣಿಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts