ಪ್ರಯೋಜನಕ್ಕಿಲ್ಲದ ಕಿಂಡಿ ಅಣೆಕಟ್ಟು

Latest News

ಸರ್ಕಾರಿ ಸ್ವಾಮ್ಯದ ಕಂಪನಿಗಳ ಖಾಸಗೀಕರಣ ವಿರೋಧಿಸಿ ಲೋಕಸಭೆ ಸ್ಪೀಕರ್ ಪೀಠದ ಎದುರು ಕಾಂಗ್ರೆಸ್​ ಪ್ರತಿಭಟನೆ

ನವದೆಹಲಿ: ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್​ ಲಿಮಿಟೆಡ್​ (ಬಿಪಿಸಿಎಲ್​) ಸೇರಿ ಕೆಲ ಸರ್ಕಾರಿ ಸ್ವಾಮ್ಯದ ಕಂಪನಿಗಳ ಖಾಸಗೀಕರಣ ಮತ್ತು ಚುನಾವಣಾ ಬಾಂಡ್​ ವಿತರಣೆಯನ್ನು ಬಹುದೊಡ್ಡ...

ಮಾಜಿ ಪ್ರಧಾನಿ ರಾಜೀವ್​ ಗಾಂಧಿ ಹಂತಕ ರಾಬರ್ಟ್​ ಪಯಾಸ್​ಗೆ ಒಂದು ತಿಂಗಳ ಪರೋಲ್​

ಚೆನ್ನೈ: ಮಾಜಿ ಪ್ರಧಾನ ಮಂತ್ರಿ ರಾಜೀವ್​ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ರಾಬರ್ಟ್ ಪಯಾಸ್​ಗೆ ಮದ್ರಾಸ್​ ಹೈಕೋರ್ಟ್​ ಗುರುವಾರ 30 ದಿನಗಳ ಪರೋಲ್​...

ಡಿಕೆಶಿ ಗೆ ಹುಬ್ಬಳ್ಳಿಯಲ್ಲಿ ಭರ್ಜರಿ ಸ್ವಾಗತ ನೀಡಿದ ಅಭಿಮಾನಿಗಳು

ವಿಜಯವಾಣಿ ಸುದ್ದಿಜಾಲ, ಹುಬ್ಬಳ್ಳಿ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿ.ಕೆ. ಶಿವಕುಮಾರ ಅವರಿಗೆ ನಗರದಲ್ಲಿ ಗುರುವಾರ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಭರ್ಜರಿ ಸ್ವಾಗತಿಸಿದರು.ಗೋಕುಲ ರಸ್ತೆ ವಿಮಾನ...

ನಾಳೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಸರ್ಜರಿಗೆ ಒಳಗಾಗುತ್ತಿದ್ದಾರೆ ನಟ, ನೇತಾರ ಕಮಲ್ ಹಾಸನ್

ಚೆನ್ನೈ: ಮಕ್ಕಳ್ ನೀದಿ ಮೈಯ್ಯಮ್(ಎಂಎನ್​ಎಂ) ಪಕ್ಷ ಸ್ಥಾಪಕ ನಟ ಕಮಲ್ ಹಾಸನ್ ನಾಳೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಮುಖ ಸರ್ಜರಿಗೆ ಒಳಗಾಗಲಿದ್ದಾರೆ ಎಂದು...

ರಕ್ಷಣಾ ಸಮಿತಿಗೆ ಸಂಸದೆ ಪ್ರಗ್ಯಾ ಸಿಂಗ್​ ಠಾಕೂರ್​ ಆಯ್ಕೆ: ಇದು ದೇಶಕ್ಕೆ ಮಾಡಿದ ಅಪಮಾನವೆಂದ ಕಾಂಗ್ರೆಸ್​

ನವದೆಹಲಿ: ಮಾಲೆಗಾಂವ್​ ಸ್ಪೋಟ(2008) ಪ್ರಕರಣದ ಆರೋಪಿಯಾಗಿರುವ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್​ ಠಾಕೂರ್​, ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ನೇತೃತ್ವದ 21 ಸದಸ್ಯರ...

ಶ್ರೀಪತಿ ಹೆಗಡೆ ಹಕ್ಲಾಡಿ ಕಬ್ಬಿನಾಲೆ
ಸರ್ಕಾರದ ಜನಪರ ಯೋಜನೆ ಬದ್ಧತೆ, ಸಾಧಕ ಬಾಧಕಗಳ ಅರಿವಿಲ್ಲದೆ ಯೋಜನೆ ಅನುಷ್ಠಾನ ಮಾಡಿದರೆ ಏನಾಗುತ್ತದೆ ಎಂಬುದಕ್ಕೆ ಕಬ್ಬಿನಾಲೆ ಸ್ವಯಂಚಾಲಿತ ಕಿಂಡಿ ಅಣೆಕಟ್ಟು ಉದಾಹರಣೆ. ನಶಿಸುತ್ತಿರುವ ಕೃಷಿ ಭೂಮಿಗಾಗಿ ನಿರ್ಮಿಸಿದ ಕಬ್ಬಿನಾಲೆ ಕಿಂಡಿ ಅಣೆಕಟ್ಟು ಪ್ರಯೋಜನಕ್ಕೆ ಬರುತ್ತಿಲ್ಲ.

ಬೈಂದೂರು ತಾಲೂಕು ಹಳ್ಳಿಹೊಳೆ ಗ್ರಾಮದ ಕಬ್ಬಿನಾಲೆಯಲ್ಲಿ ಹಸಲ ಜನಾಂಗದ 20 ಕುಟುಂಬ ವಾಸ ಮಾಡುತ್ತಿದೆ. ಇಲ್ಲಿನ ಹೆಚ್ಚಿನವರು ಸಣ್ಣ ಹಿಡುವಳಿದಾರರು. ಕೃಷಿಗೆ ನೀರಿನ ಸೌಲಭ್ಯ ನೀಡುವ ಇರಾದೆಯಿಂದ 1.70 ಕೋಟಿ ರೂ. ಎಸ್‌ಟಿ ಅನುದಾನದಲ್ಲಿ ಕ್ರಷರ್ ಕಿಂಡಿ ಅಣೆಕಟ್ಟು ಎರಡು ವರ್ಷದ ಹಿಂದೆ ಸಣ್ಣ ನೀರಾವರಿ ಇಲಾಖೆ ನಿರ್ಮಿಸಿತ್ತು. ಮೊದಲ ವರ್ಷ ಗೇಟ್‌ಗೆ ಬಾಗಿಲು ಹಾಕಿದ್ದು, ಕಳೆದ ಬೇಸಿಗೆಯಲ್ಲಿ ಅಣೆಕಟ್ಟು ಬಂದ್ ಮಾಡಲೇ ಇಲ್ಲ. ಕಿಂಡಿ ಅಣೆಕಟ್ಟಿನಿಂದ ಪಂಪ್ ಮೂಲಕ ಹಸಲ ಜನಾಂಗದ ಜಮೀನಿಗೆ ನೀರುಣಿಸಲು ಮೋಟಾರ್ ಕೂಡ ಅಳವಡಿಸಿಲ್ಲ. ಸರ್ಕಾರ 14 ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್ ಲೇನ್ ಸಂಪರ್ಕ ಕಲ್ಪಿಸುವ ಯೋಜನೆಗೆ ಅಸ್ತು ಎಂದಿದ್ದು, ಟೆಂಡರ್ ಕೂಡ ಆಗಿದೆ. ಈ ವರ್ಷವಾದರೂ ತಮ್ಮ ಹೊಲಕ್ಕೆ ನೀರು ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಅಲ್ಲಿನ ಜನ.

ಚಕ್ರಾ ನದಿ ದಾಟಲು ಕಾಲುಸಂಕ: ಕಬ್ಬಿನಾಲೆ ಎಂಬ ಪುಟ್ಟ ಊರು ಅತ್ತ ಶಿವಮೊಗ್ಗಕ್ಕೂ ಸೇರದೆ, ಇತ್ತ ಉಡುಪಿ ಜಿಲ್ಲೆಗೂ ಸೇರದ ತ್ರಿಶಂಕು ಸ್ಥಿತಿಯಲ್ಲಿದ್ದು, ಅಭಿವೃದ್ಧಿಗೆ ಗಡಿ ಸಮಸ್ಯೆಯೇ ತೊಡಕಾಗುತ್ತಿದೆ. ಕಬ್ಬಿನಾಲೆ ಜನರಿಗೆ ಚಕ್ರಾ ನದಿ ಹೇಗೆ ಜೀವನದಿಯೋ ಹಾಗೆ ಸಮಸ್ಯೆಯೂ ಹೌದು. ಹಿಂದೆ ಕಬ್ಬಿನಾಲೆ ಜನರು ಮಳೆಗಾಲದಲ್ಲಿ ಕಾಲುಸಂಕದ ಮೂಲಕ ಚಕ್ರಾ ನದಿ ದಾಟಿದರೆ, ಬೇಸಿಗೆಯಲ್ಲಿ ನದಿ ಹಾದು ದಡ ಸೇರುತ್ತಿದ್ದರು. ಕಿಂಡಿ ಅಣೆಕಟ್ಟಾಗಿದ್ದರಿಂದ ಅನುಗಾಲವೂ ಸಂಕದ ಮೇಲೆ ದಾಟುವ ಸ್ಥಿತಿ ಇದೆ. ಅದಕ್ಕೆ ಕಬ್ಬಿನಾಲೆ ವಾಸಿಗಳು ಕಿಂಡಿ ಅಣೆಕಟ್ಟು ಎರಡೂ ಬದಿಯಲ್ಲಿ ಕಾಲುಸಂಕ ಹಾಕಿ ಆಚೆ ಈಚೆ ದಾಟುತ್ತಾರೆ. ಮಳೆ ಹೆಚ್ಚಿದ್ದರೆ, ಕಿಂಡಿ ಅಣೆಕಟ್ಟಿನ ನೀರು ಜಾರು ಗೋಡೆಯಿಂದ ಧುಮ್ಮಿಕ್ಕುತ್ತದೆ. ಕಾಲುಸಂಕ ದಾಟಿ ನೀರು ಹಾದು ದಡ ಸೇರಬೇಕು.

ಕಬ್ಬಿನಾಲೆ ಬಳಿ ಚಕ್ರ ನದಿಗೆ ನಿರ್ಮಿಸಿದ ಕ್ರಷರ್ ಗೇಟ್ ನಿರ್ಮಾಣದ ವರ್ಷ ಮಾತ್ರ ಕಿಂಡಿಗೆ ಗೇಟ್ ಹಾಕಿದ್ದು, ಕಳೆದ ವರ್ಷ ಗೇಟ್ ಬಂದ್ ಮಾಡಲೇ ಇಲ್ಲ. ಕಬ್ಬಿನಾಲೆಯಲ್ಲಿರುವ ಹಸಲ ಜನಾಂಗ ಕೃಷಿಗಾಗಿ ಎಸ್‌ಟಿ ಅನುದಾನದಲ್ಲಿ ಸಣ್ಣ ನೀರಾವರಿ ಇಲಾಖೆ ಅಣೆಕಟ್ಟು ನಿರ್ಮಿಸಿತ್ತು. ಗೇಟ್ ಕಬ್ಬಿಣದ ಬಾಗಿಲು ಬೆಂಡಾಗಿದ್ದು, ಕಿಂಡಿ ಸಂಧಿನಲ್ಲಿ ಕೂರದೆ, ಬಾಗಿಲು ಹಾಕಲು ಆಗಲಿಲ್ಲ. ಮಳೆಗಾಲದ ಅನಂತರ ಬೆಂಡಾದ ಕಿಂಡಿ ಅಣೆಕಟ್ಟಿನ ಬಾಗಿಲು ಸರಿಪಡಿಸಬೇಕು. ಇಲ್ಲದಿದ್ದರೆ ದೊಡ್ಡ ಮೊತ್ತದಲ್ಲಿ ನಿರ್ಮಿಸಿದ ಅಣೆಕಟ್ಟು ಕಿಲುಬು ಕಾಸಿನ ಪ್ರಯೋಜನಕ್ಕೂ ಬಾರದಂತಾಗುತ್ತದೆ.
ದಿನೇಶ್ ಎಡಿಯಾಳ ಸದಸ್ಯ, ಹಳ್ಳಿಹೊಳೆ ಗ್ರಾಪಂ

ಕಬ್ಬಿನಾಲೆ ಕ್ರಷರ್ ಗೇಟ್ ಕಬ್ಬಿಣದ ಹಲಗೆ ಸಂಪೂರ್ಣ ಮೇಲಕ್ಕೆ ಎತ್ತದಿರುವುದರಿಂದ ಮಳೆಗಾಲದ ನೀರಿಗೆ ಮರಮಟ್ಟು ಕೊಚ್ಚಿ ಬಂದು ಗೇಟ್ ಬಾಗಿಲಿಗೆ ಬಡಿದು ಬೆಂಡಾಗಿದೆ. ತಕ್ಷಣ ಬೆಂಡಾದ ಹಲಗೆ ದುರಸ್ತಿ ಮಾಡಿ, ಗೇಟ್ ಹಾಕುವ ವ್ಯವಸ್ಥೆ ಮಾಡಲಾಗುವುದು. ಕಬ್ಬಿನಾಲೆ ಹಸಲ ಜನಾಂಗಕ್ಕೆ ನೀರು ಪೂರೈಕೆ ಹಿನ್ನೆಲೆಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಿದ್ದು, ಮೋಟಾರ್ ಅಳವಡಿಕೆಗೆ 14 ಲಕ್ಷ ರೂ. ವೆಚ್ಚದಲ್ಲಿ ಹೊಸ ವಿದ್ಯುತ್ ಸಂಪರ್ಕಕ್ಕೆ ಅನುಮೋದನೆ ಸಿಕ್ಕಿದೆ. ಟೆಂಡರ್ ಕೂಡ ಆಗಿದೆ. ಈ ಬಾರಿ ಅಣೆಕಟ್ಟು ಹಲಗೆ ಜೋಡಿಸಿ, ಮೋಟರ್ ಮೂಲಕ ನೀರು ಕೊಡಲಾಗುತ್ತದೆ.
ಅಲ್ವಿನ್ ಸಹಾಯಕ ಇಂಜಿನಿಯರ್ ಸಣ್ಣ ನೀರಾವರಿ ಇಲಾಖೆ ಬೈಂದೂರು

- Advertisement -

Stay connected

278,645FansLike
573FollowersFollow
611,000SubscribersSubscribe

ವಿಡಿಯೋ ನ್ಯೂಸ್

VIDEO| ಡಿಆರ್​ಐ ಅಧಿಕಾರಿಗಳ ದಾಳಿ ವೇಳೆ 6ನೇ ಮಹಡಿಯಿಂದ ಕೆಳಗೆ...

ಕೋಲ್ಕತ: ಪಶ್ಚಿಮ ಬಂಗಾಳದ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್​ಐ) ಅಧಿಕಾರಿಗಳು ಬುಧವಾರ ಮಧ್ಯಾಹ್ನ ಕೇಂದ್ರ ಕೋಲ್ಕತದ ಬೆಂಟಿಂಕ್ ಸ್ಟ್ರೀಟ್​ನಲ್ಲಿನ ಖಾಸಗಿ ಕಚೇರಿಯೊಂದಕ್ಕೆ ದಾಳಿ ನಡೆಸಿದ್ದ ವೇಳೆ ಕಟ್ಟಡದ ಆರನೇ ಮಹಡಿಯಿಂದ ನೋಟಿನ...

VIDEO| ಹಾಡುಗಳ ಮೂಲಕವೇ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರದ...

ಬೆಂಗಳೂರು: ಪೋಸ್ಟರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರತಂಡ ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಿಕೊಂಡಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ದತ್ತಣ್ಣ, ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯಾ...

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ರಸ್ತೆಯಲ್ಲಿ ಎಂಬಿಎ ವಿದ್ಯಾರ್ಥಿನಿಯ ವಿಭಿನ್ನ ನೃತ್ಯ; ಇದು ಮನರಂಜನೆಗೆ...

ಇಂದೋರ್​: ವಾಹನ ಸವಾರರಿಗೆ ಟ್ರಾಫಿಕ್​ ನಿಯಮಗಳನ್ನು ಅರ್ಥ ಮಾಡಿಸುವುದು ಟ್ರಾಫಿಕ್​ ಪೊಲೀಸರಿಗೆ ದೊಡ್ಡ ಸಾಹಸವೇ ಸರಿ. ಬೈಕ್​ ಸವಾರರು ಹೆಲ್ಮೆಟ್​ ಧರಿಸುವುದಿಲ್ಲ, ಕಾರು ಚಾಲಕರು ಸೀಟ್​ ಬೆಲ್ಟ್​ ಹಾಕಿಕೊಂಡಿರುವುದಿಲ್ಲ...ಅದರೊಟ್ಟಿಗೆ ಬೇಕಾಬಿಟ್ಟಿ ಚಾಲನೆ ಬೇರೆ....

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...

VIDEO| ಜೆಎನ್​ಯು ವಿದ್ಯಾರ್ಥಿಗಳ ಹೆಸರಿನಲ್ಲಿ ವೈರಲ್​ ಆಗಿದ್ದ ವಿಡಿಯೋದ ಅಸಲಿಯತ್ತು...

ನವದೆಹಲಿ: ಪಾಕಿಸ್ತಾನದ ಲಾಹೋರ್​​ನಲ್ಲಿ ನಡೆದಿದ್ದ ಫೈಜ್​ ಸಾಹಿತ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಕೂಗಿದ್ದ "ಆಜಾದಿ" ಘೋಷಣೆಯ ವಿಡಿಯೋವನ್ನು ದೆಹಲಿಯ ಜವಹರ್​ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್​ಯು)ದ ವಿದ್ಯಾರ್ಥಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಶೇರ್​ ಮಾಡಲಾಗಿದೆ. "ಜೆಎನ್​ಯು...

VIDEO| ಮೀಮ್ಸ್​ ವಿಡಿಯೋ ಹರಿಬಿಡುವ ಮೂಲಕ ಸೋದರ ರಮೇಶ್​ ಜಾರಕಿಹೊಳಿಗೆ...

ಬೆಳಗಾವಿ: ಗೋಕಾಕ್​ ಕ್ಷೇತ್ರದ ಉಪಚುನಾವಣೆಯ ಕದನ ತೀವ್ರ ಕುತೂಹಲ ಮೂಡಿಸಿದೆ. ಸಹೋದರರ ನಡುವಿನ ಜಿದ್ದಾಜಿದ್ದಿಯೇ ಅದಕ್ಕೆ ನೇರ ಕಾರಣವಾಗಿದೆ. ಕಾಂಗ್ರೆಸ್​ಗೆ ಗುಡ್​ಬೈ ಹೇಳಿ ಬಿಜೆಪಿ ಸೇರಿಕೊಂಡಿರುವ ಸೋದರ ರಮೇಶ್​ ಜಾರಕಿ...