ಟಾಟಾ ನ್ಯಾನೋ ಕಾರುಗಳ ಉತ್ಪಾದನೆ ಈ ವರ್ಷ ಏನೂ ಇರಲಿಲ್ಲ;ಈ ಒಂಬತ್ತು ತಿಂಗಳ ಅವಧಿಯಲ್ಲಿ ಮಾರಾಟವಾದ ಕಾರುಗಳ ಸಂಖ್ಯೆ ಎಷ್ಟಿರಬಹುದು?

ನವದೆಹಲಿ: ಪ್ರಸಕ್ತ ವರ್ಷದ ಒಂಬತ್ತು ತಿಂಗಳ ಅವಧಿಯಲ್ಲಿ ಟಾಟಾ ನ್ಯಾನೋ ಕಾರುಗಳ ಉತ್ಪಾದನೆಯೇ ಇರಲಿಲ್ಲ.ದೇಶದ ಅತಿ ಚಿಕ್ಕ ಕಾರು ಎಂದು ಸದ್ದು ಮಾಡಿದ್ದ ಈ ಕಾರಿನ ಉತ್ಪಾದನೆ ಸ್ಥಗಿತದ ವಿಚಾರ ಕೂಡ ಬಹಳ ಸುದ್ದಿಯಾಗಿತ್ತು. ಬಾರಿ ಬೇಡಿಕೆ ಸೃಷ್ಟಿಸಿದ್ದ ಈ ಕಾರಿನ ಮಾರಾಟ ಕಾಲಾನುಕ್ರಮದಲ್ಲಿ ಇಳಿಕೆಯಾಗುತ್ತ ಬಂದಿತ್ತು.

ಇದರಂತೆ,ನಾನ್ಯೋ ಕಾರಿನ ಅಪ್​ಗ್ರೇಡೆಡ್​ ಮಾದರಿಯನ್ನೂ ಟಾಟಾ ಮಾರುಕಟ್ಟೆಗೆ ಪರಿಚಯಿಸಿತ್ತು.ಆದಾಗ್ಯೂ ಹೆಚ್ಚು ಪ್ರಯೋಜನವಾಗಿರಲಿಲ್ಲ. ಕಂಪನಿ ರೆಗುಲೇಟರಿ ಅಥಾರಿಟಿಗೆ ಟಾಟಾ ಮೋಟಾರ್ಸ್​ ಸಲ್ಲಿಸಿರುವ ದಾಖಲೆಗಳ ಪ್ರಕಾರ,ನ್ಯಾನೋ ಕಾರು BS-VI ಎಮಿಷನ್​ ನಿಯಮಗಳಿಗೆ ಅನುಗುಣವಾದ ಸೌಲಭ್ಯಗಳನ್ನು ಹೊಂದಿಲ್ಲ.ಕಳೆದ ಒಂಬತ್ತು ತಿಂಗಳ ಅವಧಿಯಲ್ಲಿ ಒಂದೇ ಒಂದು ಕಾರನ್ನೂ ಕಂಪನಿ ಉತ್ಪಾದಿಸಿಲ್ಲ. ಆದರೆ,ಈ ಅವಧಿಯಲ್ಲಿ ಒಂದೇ ಒಂದು ಕಾರು ಮಾತ್ರ ಮಾರಾಟವಾಗಿದೆ. ಅದೂ ಫೆಬ್ರವರಿ ತಿಂಗಳಿನಲ್ಲಿ ಮಾರಾಟವಾಗಿತ್ತು.

ಟಾಟಾ ನ್ಯಾನೋ ಕಾರನ್ನು ಕಂಪನಿ 2008ರ ಜನವರಿಯಲ್ಲಿ ಅಟೋ ಎಕ್ಸ್​ಪೋ ಒಂದರಲ್ಲಿ ಅನಾವರಣಗೊಳಿಸಿತ್ತು.ಮಾರುಕಟ್ಟೆಯಲ್ಲಿ ಇದು ಬಹಳ ನಿರೀಕ್ಷೆಯನ್ನು ಹುಟ್ಟಿಸಿತ್ತು.2009ರ ಮಾರ್ಚ್​ ತಿಂಗಳಲ್ಲಿ ನ್ಯಾನೋ ಕಾರು ಮಾರುಕಟ್ಟೆಗೆ ಬಿಡುಗಡೆಯಾಗಿತ್ತು.2018ರ ಜನವರಿ – ಸೆಪ್ಟೆಂಬರ್ ಅವಧಿಯಲ್ಲಿ ಟಾಟಾ ನ್ಯಾನೋ ಕಾರು ಉತ್ಪಾದನೆ ಪ್ರಮಾಣ 297 ಆಗಿತ್ತು. ಪ್ರಾದೇಶಿಕ ಮಾರುಕಟ್ಟೆಯಲ್ಲಿ 299 ಕಾರು ಮಾರಾಟವಾಗಿತ್ತು. (ಏಜೆನ್ಸೀಸ್​) 

Leave a Reply

Your email address will not be published. Required fields are marked *