18.5 C
Bangalore
Monday, December 16, 2019

ಕೊರಗರ ಮನೆಗೆ ಸಿಗದ ಮರಳು

Latest News

‘ದಿಶಾ ರೈಡ್ ಆಂಡ್ ವಾಕ್’ ಜಾಗೃತಿ ಜಾಥಾ

ಹುಬ್ಬಳ್ಳಿ: ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಆಶ್ರಯದಲ್ಲಿ ಇಲ್ಲಿನ ತೋಳನಕೆರೆಯಿಂದ ಬಿವಿಬಿ ಇಂಜಿನಿಯರಿಂಗ್ ಕಾಲೇಜ್​ವರೆಗೆ ಭಾನುವಾರ ಬೆಳಗ್ಗೆ ‘ದಿಶಾ ರೈಡ್ ಆಂಡ್ ವಾಕ್’ ಘೋಷಣೆಯೊಂದಿಗೆ...

‘ಆಟೋ ರಿಕ್ಷಾ ರನ್’

ಹುಬ್ಬಳ್ಳಿ: ಕನ್ಯಾಕುಮಾರಿಯಿಂದ ಅಹಮದಾಬಾದ್​ವರೆಗೆ ‘ಆಟೋ ರಿಕ್ಷಾ ರನ್’ ಹಮ್ಮಿಕೊಂಡಿರುವ ಇಂಗ್ಲೆಂಡಿನ ‘ಸೇವಾ ಯುಕೆ’ ಸಂಸ್ಥೆಯ ಅನಿವಾಸಿ ಭಾರತೀಯರು ಭಾನುವಾರ ಬೆಳಗ್ಗೆ ಹುಬ್ಬಳ್ಳಿಯಿಂದ ಗೋವಾದ...

ಗೀತೆ ಅಧ್ಯಯನದಿಂದ ಜೀವನ ಸುಖಮಯ

ಧಾರವಾಡ: ಗೀತೆ ದೀಪ ಸ್ವರೂಪ. ಅಜ್ಞಾನದ ಅಂಧಕಾರವನ್ನು ಕಳೆದು ಸುಜ್ಞಾನವನ್ನು ನೀಡುವುದು. ಸತ್ಸಂಗ ಮತ್ತು ಜ್ಯೋತಿ ಎರಡೂ ನಮ್ಮ ಜೀವನದಲ್ಲಿ ಪ್ರಧಾನ ಪಾತ್ರ...

ಸ್ವಾಮಿಯೇ ಶರಣಂ ಅಯ್ಯಪ್ಪ

ಹುಬ್ಬಳ್ಳಿ: ನಗರದ ಶಿರೂರು ಪಾರ್ಕ್ ಅಯ್ಯಪ್ಪ ಸ್ವಾಮಿ ದೇಗುಲದ ಮಾಲಾಧಾರಿಗಳು ಹಾಗೂ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ ವತಿಯಿಂದ ನಗರದಲ್ಲಿ ಭಾನುವಾರ ಅಯ್ಯಪ್ಪ...

ದೇಶದಲ್ಲಿ ಹೆಚ್ಚುತ್ತಿದೆ ನಿರುದ್ಯೋಗ ಸಮಸ್ಯೆ

ಮೈಸೂರು: ಬಂಡವಾಳಶಾಯಿಗಳ ಪರ ಆಡಳಿತ ನಡೆಸುತ್ತಿರುವ ಸರ್ಕಾರಗಳು, ದುಡಿಯುವ ವರ್ಗವನ್ನು ಕಡೆಗಣಿಸಿವೆ. ಇದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದ್ದು, ಸಾಕಷ್ಟು ಕಾರ್ಖಾನೆಗಳು ಬಾಗಿಲು...

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಸ್ವಚ್ಛ ಕುಂದಾಪುರಕ್ಕಾಗಿ ದಿನವಿಡೀ ಶ್ರಮಿಸುವ ಪುರಸಭೆ ಪೌರ ಕಾರ್ಮಿಕರು ವಾಸಿಸುವ ಅಂಬೇಡ್ಕರ್ ಕಾಲನಿಯಲ್ಲಿ ಹೊಸ ಮನೆ ನಿರ್ಮಿಸುವ ಕನಸು ಕಟ್ಟಿ ಹಳೇ ಮನೆ ಕೆಡವಿ ಚಿಕ್ಕ ಶೆಡ್‌ನಲ್ಲಿ ಬದುಕುತ್ತಿರುವ ಕೊರಗ ಕುಟುಂಬಗಳ ಬದುಕು ಶೋಚನೀಯ ಸ್ಥಿತಿಯಲ್ಲಿದೆ.
ಹಕ್ಕುಪತ್ರ, ಅನುದಾನ ಇತ್ಯಾದಿ ಸಂಕಷ್ಟಗಳ ಮಧ್ಯೆ ಹೊಸ ಮನೆ ನಿರ್ಮಾಣಕ್ಕೆ ಮುಂದಡಿಯಿಟ್ಟು ಮೂರು ವರ್ಷ ಕಳೆದರೂ ಮನೆ ಇನ್ನೂ ಪೂರ್ಣವಾಗಿಲ್ಲ. ಮರಳು ಬಿಕ್ಕಟ್ಟು ಇದಕ್ಕೆ ಪ್ರಮುಖ ಕಾರಣ. ಅಂಬೇಡ್ಕರ್ ಕಾಲನಿಯಲ್ಲಿ 28 ಮನೆಗಳಿವೆ. ಕುಂದಾಪುರದಲ್ಲಿ ಮರಳು ತೆಗೆಯಲು ಪರವಾನಗಿ ಇಲ್ಲದಿರುವುದು ಕೊರಗ ಮನೆಗಳ ನಿರ್ಮಾಣಕ್ಕೆ ತೊಡಕುಂಟು ಮಾಡುತ್ತಿದೆ. ದುಬಾರಿ ಮರಳು ವಿಕ್ರಯಿಸಿ, ಮನೆ ಸಂಪೂರ್ಣ ಮಾಡುವ ತಾಕತ್ತು ಇವರಿಗಿಲ್ಲ. ಕೆಐಆರ್‌ಡಿಎಲ್ ಮೂಲಕ ವಾರಾಹಿ ನದಿಯಲ್ಲಿ ಮರಳು ತೆಗೆಯಲು ಪರವಾನಗಿ ಸಿಕ್ಕಿದ್ದು, ಖಾಸಗಿಯವರು ಸಬ್ ಕಾಂಟ್ರಾಕ್ಟ್ ಮೂಲಕ ನಿಯಮ ಮೀರಿ ಬ್ಲಾಕ್‌ನಲ್ಲಿ ಮರಳು ಮಾರಾಟ ಮಾಡುತ್ತಿರುವುದರಿಂದ ಬಡವರಿಗೆ ಸಿಗುತ್ತಿಲ್ಲ. ಮನೆ ಪೂರ್ಣ ಮಾಡಲು ಸಹಕರಿಸದಿದ್ದರೆ ಕುಟುಂಬ ಸಮೇತ ಜಿಲ್ಲಾಧಿಕಾರಿ ಪಡಸಾಲೆಯಲ್ಲಿ ಠಿಕಾಣಿ ಹೂಡಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

ಮೊನ್ನೆ ಮೊನ್ನೆ ಸಿಕ್ಕಿದ ಹಕ್ಕುಪತ್ರ: ಪೌರ ಕಾರ್ಮಿಕರು ಅಂಬೇಡ್ಕರ್ ಕಾಲನಿಯಲ್ಲಿ ದೀರ್ಘಕಾಲದಿಂದ ವಾಸಿಸುತ್ತಿದ್ದಾರೆ. ಕಾಲನಿಯಲ್ಲಿ 300ರಷ್ಟು ಜನರಿದ್ದಾರೆ. ಒಂದೊಂದು ಮನೆಯಲ್ಲಿ ಒಂದೆರಡು ಕುಟುಂಬ ವಾಸ್ತವ್ಯವಿದೆ. ಇವರಿಗೆ ಹಕ್ಕುಪತ್ರ ಸಿಗದ ಬಗ್ಗೆ ವಿಜಯವಾಣಿ ವರದಿ ಪ್ರಕಟಿಸಿದ ಅನಂತರ ಅಂದಿನ ತಹಸೀಲ್ದಾರ್ ಜಿ.ಎಂ.ಬೋರ್ಕರ್ ಕಂದಾಯ ಅಧಿಕಾರಿಗಳ ಜತೆ ಭೇಟಿ ನೀಡಿ ಹಕ್ಕುಪತ್ರದ ಭರವಸೆ ನೀಡಿದ್ದರು. ದಸಂಸ ಮುಖಂಡರೂ ಹಕ್ಕುಪತ್ರ ನೀಡುವಂತೆ ಒತ್ತಡ ಹಾಕಿದ್ದರು. ಸದ್ಯ ಕಾಲನಿ ವಾಸಿಗಳಿಗೆ ಹಕ್ಕುಪತ್ರ ಸಿಕ್ಕಿದ್ದು ನಿರಾಳರಾಗಿದ್ದಾರೆ. ಕುಂದಾಪುರ ಪುರಸಭೆ ಎಂಟನೇ ವಾರ್ಡ್ ಪ್ರತಿನಿಧಿ ಗೀತಾ ಜತೆ ವಿಜಯವಾಣಿ ನಡೆಸಿದ ‘ನಿಮ್ಮೊಂದಿಗೆ ನಾವು’ ಪಾದಯಾತ್ರೆಯಲ್ಲಿ ಪೌರ ಕಾರ್ಮಿಕರ ಕಾಲನಿ ವಾಸಿಗಳ ಬದುಕಿನ ಚಿತ್ರಣ ತೆರೆದಿಟ್ಟಿತ್ತು.

ಕುಂದಾಪುರದಲ್ಲಿ ಮರಳೇ ಸಿಗೋದಿಲ್ಲ. ಬ್ಲಾಕ್‌ನಲ್ಲಿ ಮರಳು ಯುನಿಟ್‌ಗೆ 4,5 ಸಾವಿರ ರೂ. ತೆಗೆದುಕೊಳ್ಳುತ್ತಿದ್ದು, ಬಡವರು ಕೊಳ್ಳುವುದಾದರೂ ಹೇಗೆ? ನಮ್ಮ ಮನೆ ಸ್ಲ್ಯಾಬ್ ಆಗಿ ಗಿಲಾಯಿ ಮಾತ್ರ ಬಾಕಿಯಿದೆ. ಮರಳು ಸಮಸ್ಯೆಯಿಂದ ಈ ವರ್ಷವೂ ಹೊಸ ಮನೆ ಪ್ರವೇಶ ಮಾಡಲು ಆಗುವುದಿಲ್ಲ. ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ವಶಪಡಿಸಿಕೊಂಡ ಮರಳು ನಮಗೆ ನೀಡುವ ಮೂಲಕ ಮನೆ ಸಂಪೂರ್ಣ ಮಾಡಲು ಸಹಕಾರ ನೀಡಬೇಕು.
ರಾಧಾ ಕಾಲನಿ ನಿವಾಸಿ

ಕುಂದಾಪುರ ಸ್ವಚ್ಛವಾಗಿಡಲು ಹೆಣಗುತ್ತಿರುವ ನಮ್ಮ ಕಾಲನಿ ಅವ್ಯವಸ್ಥೆಯ ಆಗರವಾಗಿದ್ದು, ಹೊಸ ಮನೆ ಕನಸೂ ಹೈರಾಣು ಮಾಡಿದೆ. ಮೊದಲು ಹಕ್ಕಪತ್ರ ಇಲ್ಲ ಎಂದು ಮನೆ ಮಂಜೂರಾಗುವುದು ತಡವಾಯಿತು. ಹಕ್ಕುಪತ್ರ, ಅನುದಾನ ಸಿಕ್ಕಿದ ಅನಂತರ ಮರಳಿಲ್ಲದೆ ಮನೆ ನಿರ್ಮಾಣ ಕೆಲಸ ಅರ್ಧಕ್ಕೆ ನಿಂತಿದೆ. ಶೆಡ್‌ನಲ್ಲಿ ಮಕ್ಕಳ ಜತೆ ಕಷ್ಟದಲ್ಲೇ ದಿನ ಕಳೆಯಬೇಕು. ಮರಳು ವ್ಯವಸ್ಥೆ ಮಾಡಿ, ಒಳಚರಂಡಿ ಸಂಪೂರ್ಣ ಮಾಡಬೇಕು. ಮಳೆಗಾಲದೊಳಗೆ ಮನೆ ಸಂಪೂರ್ಣ ಆಗಲು ಸಹಕಾರ ನೀಡದಿದ್ದರೆ ಮಿನಿ ವಿಧಾನಸೌಧದಲ್ಲೇ ನಾವು ಉಳಿಯಬೇಕಾಗುತ್ತದೆ.
ಪಲ್ಲವಿ ಖಾಸಗಿ ಆಸ್ಪತ್ರೆ ಸಿಬ್ಬಂದಿ

ಹೊಸ ಮನೆ ಕಟ್ಟಡಕ್ಕಾಗಿ ಹಳೇ ಮನೆ ಅಳಿದಿದ್ದು, ಶೆಡ್‌ನಲ್ಲಿ ಕುಟುಂಬದ ಎಲ್ಲ ಸದಸ್ಯರೊಂದಿಗೆ ಕಳೆಯಬೇಕಾಗಿದೆ. ಕಳೆದ ಮಳೆಗಾಲದಲ್ಲಿ ಶೆಡ್‌ನೊಳಗೆ ನೀರು ನುಗ್ಗಿ ರಾತ್ರಿ ಜಾಗರಣೆ ಮಾಡಿದ್ದೂ ಇದೆ. ಮಣ್ಣಿನ ನೆಲವಾಗಿದ್ದರಿಂದ ಶೆಡ್‌ನೊಳಗೆ ಒರತೆಯೆದ್ದು, ಮಲಗುವುದಕ್ಕೂ ಕಷ್ಟ. ಮರಳು ಸಿಕ್ಕರೆ ಮನೆ ಪೂರ್ಣ ಮಾಡಲು ಸಾಧ್ಯ. ಇಲ್ಲದಿದ್ದರೆ ಮಳೆಗಾಲದಲ್ಲಿ ಶೆಡ್ ಕುಸಿದು ಅವಘಡ ಸಂಭವಿಸಿದರೆ ಅದಕ್ಕೆ ಜಿಲ್ಲಾಡಳಿತವೇ ಹೊಣೆ.
ವಸಂತಿ ಹಿರಿಯ ಮಹಿಳೆ ಅಂಬೇಡ್ಕರ್ ಕಾಲನಿ ಕುಂದಾಪುರ

ಮರಳು ನೀತಿ, ಅನುದಾನ ಬಿಡುಗಡೆ ವಿಳಂಬದಿಂದ ಮನೆ ಪೂರ್ಣವಾಗದೆ ಅರ್ಧಕ್ಕೆ ನಿಂತಿದೆ. ಕಾಲನಿಯಲ್ಲಿ 15 ಮನೆ ನಿರ್ಮಾಣವಾಗುತ್ತಿದ್ದು, ಎರಡು ಮನೆ ಫೌಂಡೇಶನ್ ಬಿಟ್ಟು ಮುಂದಕ್ಕೆ ಹೋಗಿಲ್ಲ. ಏಳು ಮನೆ ಗೋಡೆ ಲಿಂಟಲ್ ಕೆಲಸ ಮುಗಿದಿದ್ದು, ಸ್ಲ್ಯಾಬ್ ಹಾಕಲು ಮರಳು ಇಲ್ಲದೆ ಕಾಮಗಾರಿ ನಿಂತಿದೆ.
ನಾಗರಾಜ್ ಅಧ್ಯಕ್ಷ, ಪೌರ ಕಾರ್ಮಿಕ ಸಂಘಟನೆ, ಕುಂದಾಪುರ.

Stay connected

278,753FansLike
588FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...