17.8 C
Bengaluru
Wednesday, January 22, 2020

ರೈಲ್ವೆ ನಿಲ್ದಾಣಕ್ಕೆ ದಾರಿ ಯಾವುದಯ್ಯ?

Latest News

ಕರ್ನಾಟಕ ಕುಸ್ತಿ ಹಬ್ಬಫೆ. 15ರಿಂದ

ಧಾರವಾಡ: ಫೆ. 15ರಿಂದ 18ರವರೆಗೆ ನಗರದಲ್ಲಿ ಕರ್ನಾಟಕ ಕುಸ್ತಿ ಹಬ್ಬ ಆಯೋಜಿಸಲಾಗುವುದು. ಅಂತಾರಾಷ್ಟ್ರೀಯ ಕುಸ್ತಿಪಟುಗಳು ಸೇರಿ ಸುಮಾರು 2,000ಕ್ಕೂ ಹೆಚ್ಚು ಕುಸ್ತಿಪಟುಗಳು, ತರಬೇತಿದಾರರು...

ಊರೆಲ್ಲ ಕೊಳ್ಳೆ ಹೊಡೆದ ಮೇಲೆ…

ಲಕ್ಷ್ಮೇಶ್ವರ: ‘ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರು’ ಎಂಬಂತೆ ರೈತರೆಲ್ಲ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಶೇಂಗಾ ಮಾರಾಟ ಮಾಡಿದ...

ಮುರುಘಾಮಠದ ಕಾರ್ಯ ನಾಡಿಗೆ ಮಾದರಿ

ಧಾರವಾಡ: ಜ್ಞಾನ, ದಾಸೋಹ ಸೇವೆಯಲ್ಲಿ ಮುರುಘಾಮಠದ ಮೃತ್ಯುಂಜಯ ಅಪ್ಪಗಳ ಹಾಗೂ ಮಹಾಂತಪ್ಪಗಳ ಕೊಡುಗೆ ಸ್ಮರಣೀಯ. ಅವರ ಆಶಯದಂತೆ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಶ್ರೀಮಠವನ್ನು...

ಶರಣರಿಂದ ಸಾಮಾಜಿಕ ನ್ಯಾಯ

ಬ್ಯಾಡಗಿ: 12ನೇ ಶತಮಾನದಿಂದಲೂ ಶಿವಶರಣರು ಸಾಮಾಜಿಕ ಮೌಢ್ಯತೆ ಹಾಗೂ ಧೋರಣೆಗಳ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಸರ್ವರಿಗೂ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದು...

ಗಾಳಿಪಟ ಉತ್ಸವಕ್ಕೆ ತೆರೆ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪೋಷಿತ ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ನಗರದ ಕುಸುಗಲ್ಲ ರಸ್ತೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ...

< ಮಾರ್ಗಸೂಚಿ ಸ್ಟಾೃಂಡ್‌ನಲ್ಲಿದೆ ಜಾತ್ರೆ ಬ್ಯಾನರ್ | ಹೊಸ ಪ್ರಯಾಣಿಕರಿಗೆ ನಗರ ಸುತ್ತುವ ಭಾಗ್ಯ>

|ಹರೀಶ್ ಮೋಟುಕಾನ ಮಂಗಳೂರು
ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣಕ್ಕೆ ಹೊಸದಾಗಿ ಬರುವ ಪ್ರಯಾಣಿಕರು ಅವರಿವರಲ್ಲಿ ವಿಚಾರಿಸುತ್ತ ಎಲ್ಲೆಂದರೆಲ್ಲ್ಲಿ ಸುತ್ತಾಡಬೇಕಾದ ಸ್ಥಿತಿ. ಸಮರ್ಪಕ ಮಾರ್ಗಸೂಚಿ ನಿರ್ವಹಣೆ ಇಲ್ಲದೇ ಇದ್ದು, ನಾಮಫಲಕ ತೆಗೆದಿಟ್ಟು ಅದರಲ್ಲಿ ಜಾತ್ರೆ, ಉತ್ಸವಗಳ ಬ್ಯಾನರ್ ರಾರಾಜಿಸುತ್ತಿವೆ.

ಮಂಗಳೂರಿನಿಂದ ಕೇರಳ, ಮುಂಬೈ, ನವದೆಹಲಿ, ಬೆಂಗಳೂರು ಮೊದಲಾದ ಕಡೆಗೆ ರೈಲುಗಳು ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣ ಮೂಲಕವೇ ಸಂಚರಿಸಬೇಕು. ಹೆಚ್ಚಿನ ಪ್ರಯಾಣಿಕರು ಮಂಗಳೂರು ಜಂಕ್ಷನ್ ಮೂಲಕವೇ ಪ್ರಯಾಣಿಸುತ್ತಾರೆ. ಆದರೆ ನಗರದಿಂದ ಹೊರ ವಲಯದಲ್ಲಿರುವ ನಿಲ್ದಾಣಕ್ಕೆ ಹೋಗುವುದೇ ಪ್ರಯಾಸ.

ಪಂಪ್‌ವೆಲ್‌ನಿಂದ ಪಡೀಲ್ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಂಪ್‌ವೆಲ್‌ನಿಂದ ಅರ್ಧ ಕಿ.ಮೀ ದೂರ ಸಾಗಿದಾಗ ಬಲಗಡೆಯ ರಸ್ತೆಯಲ್ಲಿ ಸಂಚರಿಸಬೇಕು. ಹೊಸದಾಗಿ ಬರುವ ಪ್ರಯಾಣಿಕರಿಗಾಗಿ ಇಲ್ಲಿ ಮಾರ್ಗಸೂಚಿ ಅಳವಡಿಸಲಾಗಿತ್ತು. ಒಂದು ಮಾರ್ಗಸೂಚಿ ತುಕ್ಕು ಹಿಡಿದು ರಸ್ತೆಗೆ ವಾಲಿದ್ದು, ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿ ನಿಂತಿದೆ. ಇದನ್ನು ಸರಿಪಡಿಸಲು ಯಾರು ಮುಂದಾಗಿಲ್ಲ.

ಮಾರ್ಗಸೂಚಿಯಲ್ಲಿ ಬ್ಯಾನರ್: ಇನ್ನೊಂದು ಮಾರ್ಗಸೂಚಿಯನ್ನು ಮಂಗಳೂರು ರೋಟರಿ ಕ್ಲಬ್‌ನವರು ಸುಸಜ್ಜಿತವಾಗಿ ಅಳವಡಿಸಿದ್ದರು. ಆ ಮಾರ್ಗಸೂಚಿಯನ್ನು ತೆಗೆದು ನೆಲದಲ್ಲಿಟ್ಟು ಅದರ ಸ್ಟಾೃಂಡ್‌ಗೆ ಬ್ಯಾನರ್ ಕಟ್ಟಿದ್ದಾರೆ. ಒಂದು ಉತ್ಸವ ಕಳೆದ ತಕ್ಷಣ ಇನ್ನೊಂದು ಸಂಘಟಕರು ಹೊಸದಾಗಿ ಬ್ಯಾನರ್ ಕಟ್ಟುತ್ತಾರೆ. ಈ ಪ್ರಕ್ರಿಯೆ ನಿರಂತರ ನಡೆಯುತ್ತಲೇ ಇದೆ. ಮಾರ್ಗಸೂಚಿ ಕಾಣುವುದೇ ಇಲ್ಲ. ಪಡೀಲ್ ಮೂಲಕ ಜಂಕ್ಷನ್ ರೈಲ್ವೆ ನಿಲ್ದಾಣಕ್ಕೆ ತೆರಳಲು ಮಾರ್ಗವಿದೆ. ಪಂಪ್‌ವೆಲ್‌ನಿಂದ ಹೋಗುವವರಿಗೆ ದೂರವಾಗುತ್ತದೆ. ಅಲ್ಲಿಯೂ ಸರಿಯಾದ ಮಾರ್ಗಸೂಚಿ ಇಲ್ಲ. ಮಳೆಗಾಲದಲ್ಲಿ ಕೆಸರುಮಯವಾಗುವುದರಿಂದ ಈ ರಸ್ತೆಯಲ್ಲಿ ಸಾಗುವುದು ದೊಡ್ಡ ಸವಾಲು. ಈ ಬಗ್ಗೆ ಎಲ್ಲರೂ ಮೌನ ವಹಿಸಿರುವುದರಿಂದ ಅವ್ಯವಸ್ಥೆ ಹಾಗೆಯೇ ಉಳಿದುಕೊಂಡಿದೆ.

ಆಟೋ ದುಬಾರಿ: ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣಕ್ಕೆ ನಗರದಿಂದ ಆಟೋ ಚಾಲಕರು ದುಬಾರಿ ದರ ಪಡೆದುಕೊಳ್ಳುತ್ತಾರೆ. ಮೀಟರ್ ದರದಲ್ಲಿ ಆಟೋ ಚಾಲಕರು ಬರಲು ಒಪ್ಪುವುದಿಲ್ಲ. ರೈಲ್ವೆ ನಿಲ್ದಾಣದಿಂದಲೂ ನಗರಕ್ಕೆ ಬರಬೇಕಾದರೆ ಅಲ್ಲಿನ ಆಟೋ ಚಾಲಕರು ಹೇಳಿದ್ದೇ ದರ. ಅಲ್ಲಿಂದ ಬರಲು ಹಾಗೂ ಹೋಗಲು ಇನ್ಯಾವುದೇ ವ್ಯವಸ್ಥೆ ಇಲ್ಲದೇ ಇರುವುದರಿಂದ ದುಬಾರಿ ದರ ನೀಡಿ ಪ್ರಯಾಣಿಸಬೇಕಾದ ಅನಿವಾರ್ಯತೆ ಪ್ರಯಾಣಿಕರದ್ದು. ಹಲವು ಬಾರಿ ಪ್ರಿಪೇಯ್ಡಿ ಆಟೋ ಕೇಂದ್ರ ಆರಂಭಿಸಲಾಗಿದ್ದರೂ ಕೆಲವೇ ದಿನಗಳಲ್ಲಿ ಅವು ಸ್ಥಗಿತಗೊಂಡಿವೆ.

ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣಕ್ಕೆ ಹೋಗುವಲ್ಲಿ ಮಾರ್ಗಸೂಚಿ ಅವಶ್ಯ. ಈಗಿರುವ ಮಾರ್ಗಸೂಚಿಯನ್ನು ತೆಗೆದು ನೆಲದಲ್ಲಿಟ್ಟು ಸ್ಟಾೃಂಡ್‌ನಲ್ಲಿ ಬ್ಯಾನರ್ ಕಟ್ಟುತ್ತಿರುವುದು ಖಂಡನೀಯ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಹೊಸದಾಗಿ ಬರುವ ಪ್ರಯಾಣಿಕರಿಗೆ ಇದರಿಂದ ತೊಂದರೆಯಾಗುತ್ತಿದೆ.
| ಜಿ.ಕೆ.ಭಟ್ ಸಾಮಾಜಿಕ ಕಾರ್ಯಕರ್ತರು

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...