ನನ್ನ ಆಡಳಿತಾವಧಿಯಲ್ಲಿ ಗಲಭೆಗಳಿರಲಿಲ್ಲ, ಆದರೆ ಮೋದಿ ಅವಧಿಯಲ್ಲಿ ಗಲಭೇಗಳೇ ತುಂಬಿವೆ: ಮಾಯಾವತಿ

ಲಖನೌ: ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಉತ್ತರ ಪ್ರದೇಶದಲ್ಲಿ ಯಾವುದೇ ಗಲಭೆಗಳಾಗಿರಲಿಲ್ಲ. ಆದರೆ ನರೇಂದ್ರ ಮೋದಿಯವರ ಆಡಳಿತಾವಧಿ ತುಂಬ ಹಿಂಸಾಚಾರವೇ ತುಂಬಿದ್ದು, ಸಾರ್ವಜನಿಕ ಕಚೇರಿಯನ್ನು ಮುನ್ನಡೆಸಲು ಅವರು ಅಸಮರ್ಥರು ಎಂದು ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಕಿಡಿಕಾರಿದ್ದಾರೆ.

ಮೋದಿಯವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಅವರು ಬಿಜೆಪಿ ಮತ್ತು ದೇಶದ ಕೋಮುವಾದಕ್ಕೆ ಕಪ್ಪು ಚುಕ್ಕೆಯಾಗಿದ್ದರು. ಅವರು ದೀರ್ಘಕಾಲದವರೆಗೆ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದರು, ನಾನು ಕೂಡ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದೆ. ಆದರೆ ನನ್ನ ಆಡಳಿತಾವಧಿಯಲ್ಲಿ ಉತ್ತರ ಪ್ರದೇಶದಲ್ಲಿ ಯಾವುದೇ ಗಲಭೆ ಮತ್ತು ಅರಾಜಕತೆ ಉಂಟಾಗಿಲ್ಲ ಎಂದು ಹೇಳಿದ್ದಾರೆ.

ಸಾರ್ವಜನಿಕ ಹಿತಾಸಕ್ತಿಗಳ ವಿಚಾರ ಬಂದಾಗ ನನ್ನ ಸರ್ಕಾರ ಸೂಕ್ತವಾಗಿತ್ತು. ಆದರೆ ಬಿಜೆಪಿ ಸರ್ಕಾರ ಯೋಗ್ಯವಲ್ಲ. ಪ್ರಧಾನ ಮಂತ್ರಿಯಾಗಿ ಮೋದಿ ಅಡಳಿತಾವಧಿಯಲ್ಲಿ ಮತ್ತು ಮುಖ್ಯಮಂತ್ರಿಯಾಗಿದ್ದ ಅವರ ಆಡಳಿತಾವಧಿಯಲ್ಲಿ ಕೇವಲ ಹಿಂಸಾಚಾರವೇ ತುಂಬಿದೆ. ಅವರು ಸಾರ್ವಜನಿಕ ಕಚೇರಿಯನ್ನು ಹಿಡಿದಿಟ್ಟುಕೊಳ್ಳಲು ಅಸಮರ್ಥರು ಎಂದು ದೂರಿದರು.

ನಾಲ್ಕು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಬಿಎಸ್‌ಪಿ ನಾಯಕಿ, 1995 ರಿಂದ 1997, 2002 ರಿಂದ 2003 ಮತ್ತು 2007 ರಿಂದ 2012 ರವರೆಗೆ ಉತ್ತರ ಪ್ರದೇಶದ ಚುಕ್ಕಾಣಿ ಹಿಡಿದಿದ್ದರು.

ಬಿಎಸ್‌ಪಿ ಎಂದರೆ ಬೆಹನ್‌ಜಿ ಕೀ ಸಂಪತ್ತಿ ಪಾರ್ಟಿ ಎಂದು ಪ್ರಧಾನಿ ಮೋದಿ ಜರಿದಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಬಿಎಸ್‌ಪಿಯ ರಾಜ್ಯಾಧ್ಯಕ್ಷೆಯಾಗಿ ಏನನ್ನೇ ಮಾಡಿದ್ದರೂ ಅದು ಹಿತೈಷಿಗಳು ಮತ್ತು ಸಮಾಜವೇ ನೀಡಿದ್ದು, ಸರ್ಕಾರದಿಂದ ಮುಚ್ಚಿಡುವಂತದ್ದು ಏನೂ ಇಲ್ಲ. ಆದರೆ ಸದ್ಯ ಅಧಿಕಾರದಲ್ಲಿರುವ ಸರ್ಕಾರವು ಕಾರ್ಪೆಟ್‌ ಅಡಿಯಲ್ಲಿ ಎಲ್ಲವನ್ನು ಉಲ್ಲಂಘಿಸುತ್ತದೆ ಮತ್ತು ಭ್ರಷ್ಟ ಸದಸ್ಯರನ್ನೇ ಬಿಜೆಪಿ ಹೊಂದಿದೆ. ದೇಶದ ಅತೀ ಭ್ರಷ್ಟರೆಲ್ಲರೂ ಪಕ್ಷದ ಭಾಗವಾಗಿದ್ದಾರೆ ಎಂಬುದನ್ನು ಇಡೀ ದೇಶಕ್ಕೇ ತಿಳಿದಿದೆ ಎಂದರು.

ಉತ್ತರ ಪ್ರದೇಶದ 13 ಲೋಕಸಭಾ ಕ್ಷೇತ್ರಗಳಿಗೆ ಮೇ 19 ರಂದು ಕೊನೆ ಮತ್ತು ಏಳನೇ ಹಂತದ ಚುನಾವಣೆ ನಡೆಯಲಿದ್ದು, ಮೇ 23ಕ್ಕೆ ಫಲಿತಾಂಶ ಹೊರಬೀಳಲಿದೆ. (ಏಜೆನ್ಸೀಸ್)

Leave a Reply

Your email address will not be published. Required fields are marked *