28.5 C
Bengaluru
Monday, January 20, 2020

ಅರಣ್ಯ ರಕ್ಷಕರಿಗೆ ಇಲ್ಲ ರಕ್ಷಣೆ…?

Latest News

ವಿಪಕ್ಷ ನಾಯಕ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಲಿ: ಜಿ. ಪರಮೇಶ್ವರ್

ಬೆಂಗಳೂರು: ವಿಪಕ್ಷ ನಾಯಕ ಸ್ಥಾನ ಮತ್ತು ಕಾಂಗ್ರಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಿರಲಿ ಎಂಬ ಅಭಿಪ್ರಾಯವನ್ನು ಹಿರಿಯ ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ್...

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಗುರುತು ಪತ್ತೆ

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಚಿತ್ರ ಸಿಸಿಟಿವಿಯಲ್ಲಿ ಸೆರೆಯಾಗಿದೆ.ವಿಮಾನ ನಿಲ್ದಾಣದಲ್ಲಿರುವ ಸಿಸಿಟಿವಿಯಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ದೃಶ್ಯ ಪತ್ತೆಯಾಗಿದೆ.ಶಂಕಿತ...

ವಸತಿ ಸಹಾಯಧನ ಹೆಚ್ಚಳ ಕೋರಿ ಪ್ರಧಾನಿ ಬಳಿ ರಾಜ್ಯದ ನಿಯೋಗ : ವಸತಿ ಸಚಿವ ವಿ.ಸೋಮಣ್ಣ

ಬೆಂಗಳೂರು: ವಿಧಾನ ಸೌಧ ಕೊಠಡಿಯಲ್ಲಿ ಬೆಂಗಳೂರು ನಗರ ವಸತಿ ಯೋಜನೆ ಕುರಿತು ಸಂಸದ, ಶಾಸಕರ ಸಭೆಯಲ್ಲಿ ಸೋಮವಾರ ಈ ವಿಷಯ ತಿಳಿಸಿದರು.ಕೇಂದ್ರ ಸಹಾಯಧನ...

ಜೂಜುಕೋರರ ಗಡಿಪಾರು ಖಚಿತ: ಎಸ್‌ಪಿ ವಂಶಿಕೃಷ್ಣ ಎಚ್ಚರಿಕೆ

ಪಾವಗಡ: ಮಟ್ಕಾ ಮತ್ತು ಇಸ್ಪೀಟು ಆಡುವವರನ್ನು ಮತ್ತು ಆಡಿಸುವವರನ್ನು ಗಡಿಪಾರು ವಾಡಲು ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತುಮಕೂರು ಜಿಲ್ಲಾ ಎಸ್‌ಪಿ ಡಾ.ಕೆ.ವಂಶಿಕೃಷ್ಣ...

ವಿಶ್ವಶಾಂತಿಗೆ ಸಂತರ ಮಾರ್ಗದರ್ಶನ ಅಗತ್ಯ: ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ತುಮಕೂರು: ವಿಶ್ವವೇ ಸಂಕಷ್ಟದ ಸನ್ನಿವೇಶದಲ್ಲಿದ್ದು ಜನರ ಭಯ ತೊಲಗಿಸಲು ಸುಖ-ಶಾಂತಿ ನೆಲೆಸಲು ಸಂತರ ಮಾರ್ಗದರ್ಶನ ಅಗತ್ಯವಿದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ಸಿದ್ಧಗಂಗಾ...

ಹಾವೇರಿ/ಹಿರೇಕೆರೂರ: ‘ನಮಗೆ ರಕ್ಷಣೆ ಕೊಡಿ ಇಲ್ಲವೇ ಕಡ್ಡಾಯ ರಜೆ ಕೊಡಿ’ ಎಂದು ಹಿರೇಕೆರೂರ ತಾಲೂಕು ಪ್ರಾದೇಶಿಕ ಅರಣ್ಯ ವಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಜೂ. 16ರಂದು ಹಿರೇಕೆರೂರ ಪ್ರಾದೇಶಿಕ ಅರಣ್ಯ ವಲಯದ ವ್ಯಾಪ್ತಿಯ ದೂದಿಹಳ್ಳಿಯಲ್ಲಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ದೂದಿಹಳ್ಳಿ ಗ್ರಾಮದ ತಿಮ್ಮಪ್ಪ ಕಾರಗಿ ಎಂಬುವರು ಟ್ರ್ಯಾಕ್ಟರ್ ಮೂಲಕ ಗಿಡಗಳನ್ನು ಕಡಿದು ಅರಣ್ಯ ಅತಿಕ್ರಮಣ ಮಾಡುತ್ತಿದ್ದರು. ಆಗ ಅಲ್ಲಿಗೆ ಹೋದ ಉಪವಲಯ ಅರಣ್ಯಾಧಿಕಾರಿ ವಿ.ಬಿ. ಮೊಹಿತೆ ಹಾಗೂ ಸಿಬ್ಬಂದಿಯನ್ನು ನೋಡಿದ ಆರೋಪಿಗಳಲ್ಲಿ ಕೆಲವರು ಓಡಿಹೋಗಿದ್ದಾರೆ. ತಿಮ್ಮಪ್ಪ ಕಾರಗಿ ಎಂಬಾತ ಸಿಕ್ಕಿಬಿದ್ದಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿ ವೈದ್ಯಕೀಯ ತಪಾಸಣೆಗಾಗಿ ಹಿರೇಕೆರೂರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಆಸ್ಪತ್ರೆಗೆ ಆರೋಪಿ ಪರವಾಗಿ 100ರಿಂದ 150 ಜನರು ನುಗ್ಗಿ ಅರಣ್ಯಾಧಿಕಾರಿ ವಿ.ಬಿ. ಮೊಹಿತೆ ಹಾಗೂ ಸಿಬ್ಬಂದಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ, ಜೀವಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಕುರಿತು ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳ ಬಂಧನವಾಗಿಲ್ಲ:ಪ್ರಕರಣ ನಡೆದು ನಾಲ್ಕು ದಿನಗಳಾದರೂ ಆರೋಪಿಗಳನ್ನು ಬಂಧಿಸದೇ ಇರುವುದರಿಂದ ಅರಣ್ಯ ಸಿಬ್ಬಂದಿ ರೋಸಿ ಹೋಗಿದ್ದಾರೆ. ಹೀಗಾಗಿ ‘ಆರೋಪಿಗಳನ್ನು ಕೂಡಲೆ ಬಂಧಿಸಬೇಕು. ತಮಗೆ ರಕ್ಷಣೆ ಕೊಡಬೇಕು ಇಲ್ಲವೇ ಸಾಮೂಹಿಕವಾಗಿ ಕಡ್ಡಾಯ ರಜೆ ಮೇಲೆ ತೆರಳಲು ಅನುಮತಿ ನೀಡಬೇಕು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ, ಹಿರೇಕೆರೂರ ಪ್ರಾದೇಶಿಕ ಅರಣ್ಯ ವಲಯದ 18 ಸಿಬ್ಬಂದಿ ಮನವಿ ಮಾಡಿಕೊಂಡಿದ್ದಾರೆ.

ಕೆಲ ಸೌಲಭ್ಯಕ್ಕೂ ಬೇಡಿಕೆ: ಪೊಲೀಸ್ ಇಲಾಖೆಯಂತೆ ಅರಣ್ಯ ಇಲಾಖೆಯ ಪ್ರಕರಣಗಳಲ್ಲಿ ಐಪಿಸಿ ಕಲಂಗಳನ್ನು ಬಳಸಲು ಅನುಮತಿ ನೀಡಬೇಕು. ಹಿರೇಕೆರೂರ ಪ್ರಾದೇಶಿಕ ಅರಣ್ಯ ವಲಯದ ಪ್ರತಿಯೊಂದು ಬೀಟ್​ಗೂ ರಕ್ಷಣಾ ಕ್ಯಾಂಪ್​ಗಳನ್ನು ಮಂಜೂರು ಮಾಡಬೇಕು. ಅರಣ್ಯ ಸಿಬ್ಬಂದಿ ಮೇಲೆ ನಡೆಯುವ ಹಲ್ಲೆಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ಆತ್ಮರಕ್ಷಣೆಗಾಗಿ ಮ್ಯಾನ್ ಹ್ಯಾಂಡ್ಲಿಂಗ್​ಗೆ ಅಧಿಕಾರ ನೀಡಬೇಕು. ಹಿರೇಕೆರೂರ ವಲಯದಲ್ಲಿ ಆಗಿರುವ ಅತಿಕ್ರಮಣ ಪ್ರಕರಣಗಳಲ್ಲಿ ಮೇಲಧಿಕಾರಿಗಳು ವಿಶೇಷವಾಗಿ ಕಾಳಜಿ ವಹಿಸಬೇಕು. ಇಲ್ಲವಾದರೆ ಅರಣ್ಯ ರಕ್ಷಣೆ ಹಾಗೂ ಅರಣ್ಯ ಭೂಮಿ ಉಳಿಸಲು ಸಾಧ್ಯವಿಲ್ಲ. ಹಿರೇಕೆರೂರ ವಲಯಕ್ಕೆ ಹೆಚ್ಚುವರಿಯಾಗಿ ಆರ್​ಎಫ್​ಒ, ಎಫ್​ಜಿ ಮತ್ತು ಎಫ್​ಡಬ್ಲ್ಯೂಗಳನ್ನು ನೇಮಿಸಬೇಕು. ಬೀಟ್​ಗಳಲ್ಲಿ ಹಗಲು, ರಾತ್ರಿ ಸಂಚಾರಕ್ಕೆ ವಾಹನ ನೀಡಬೇಕು. ವಲಯದಲ್ಲಿರುವ ಶಾಖೆ ಮತ್ತು ಗಸ್ತುಗಳನ್ನು ಪುನರ್ ವಿಂಗಡಿಸಬೇಕು. ಆಧುನಿಕ ಶಸ್ತ್ರಾಸ್ತ್ರಗಳನ್ನು ನೀಡಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.

ಅಧಿಕಾರ ವಹಿಸಿಕೊಂಡು ನಾಲ್ಕು ದಿನಗಳಾಗಿವೆ. ಹಿರೇಕೆರೂರ ವಲಯದಲ್ಲಿ ನಡೆದ ಘಟನೆಯ ಕುರಿತು ಎಸ್​ಪಿಯವರೊಂದಿಗೆ ರ್ಚಚಿಸಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಆರೋಪಿಗಳ ಪತ್ತೆಗೆ ಭರವಸೆ ನೀಡಿದ್ದಾರೆ. ಶೀಘ್ರವೇ ಬಂಧಿಸುವ ವಿಶ್ವಾಸವಿದೆ. ಸಿಬ್ಬಂದಿಯ ಬೇಡಿಕೆಗಳನ್ನು ಪರಿಶೀಲಿಸಿದ್ದೇನೆ. ನಮ್ಮ ವ್ಯಾಪ್ತಿಯಲ್ಲಿನ ಬೇಡಿಕೆಗಳನ್ನು ಈಡೇರಿಸಲು ಕ್ರಮ ವಹಿಸುತ್ತೇನೆ. ಇನ್ನುಳಿದ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುತ್ತೇನೆ. ಸಿಬ್ಬಂದಿಗೂ ಅಭಯ ನೀಡಿದ್ದು, ಯಾರೂ ಕಡ್ಡಾಯ ರಜೆ ಮೇಲೆ ಹೋಗುವ ನಿರ್ಧಾರ ಕೈಗೊಳ್ಳುವುದಿಲ್ಲ.
| ಎನ್.ಇ. ಕ್ರಾಂತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾವೇರಿವಿಡಿಯೋ ನ್ಯೂಸ್

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...