ಒಳಚರಂಡಿಯಿಂದ ಕೆಟ್ಟೋಯ್ತು ರಸ್ತೆ!

Latest News

ಸಂಗನಬಸವ ಶಾಲೆಯಲ್ಲಿ ವಿಜ್ಞಾನ ಪ್ರದರ್ಶನ

ವಿಜಯಪುರ: ಇಲ್ಲಿನ ಹೊರವಲಯ ಕವಲಗಿಯಲ್ಲಿರುವ ಸಂಗನಬಸವ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ಶುಕ್ರವಾರ ಅಂತರ್ ಶಾಲಾ ವಿಜ್ಞಾನ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಎಸ್‌ಆರ್ ಪಿಯು ಕಾಲೇಜಿನ...

ಪುಟ್ನಂಜ ನಾಯಕಿಯ ಹೊಸ ಪ್ರಯತ್ನ: ಕಾಮಾಕ್ಷಿಯಾಗಿ ಬಂದ ಸ್ವಾತಿಮುತ್ತು ಮೀನ

ಬೆಂಗಳೂರು: ಒಂದು ಕಾಲದಲ್ಲಿ ಸಿನಿಪ್ರಿಯರ ಮನ ಗೆದ್ದ ನಟಿ ಮೀನಾ ಕರುನಾಡಿನಲ್ಲಿ ಮಾತ್ರವಲ್ಲದೆ, ಇಡೀ ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ‘ಪುಟ್ನಂಜ’,...

17-11-2019ರಿಂದ 23-11-2019ರವರೆಗೆ

ಮೇಷ: ನಿಮ್ಮ ನಿರೀಕ್ಷೆಗಳು ತುಂಬಾ ಇವೆ. ಆದರೆ ಬುಧನ ಜತೆಗಿನ ನಿಮ್ಮ ರಾಶ್ಯಾಧಿಪ ಕುಜನ ಸಂಯೋಜನೆಯಿಂದಾಗಿ ಹಲವು ಮಹತ್ವದ ವಿಷಯಗಳು ನಿಮ್ಮ ನಿರೀಕ್ಷೆಯ...

ನಿತ್ಯ ಭವಿಷ್ಯ: ಈ ರಾಶಿಯವರಿಗೆ ಕೈಯಲ್ಲಿ ಏನೂ ಹಣವಿಲ್ಲ, ಏನು ಮಾಡುವುದು ಎಂಬ ದೊಡ್ಡ ಚಿಂತೆ ಪವಾಡಸದೃಶವಾಗಿ ದೂರವಾಗಲಿದೆ

ಮೇಷ: ಬರೀ ಗಾಳಿಯೊಡನೆ ಗುದ್ದಾಡಿ ಕೈ ನೋವು ಮಾಡಿಕೊಳ್ಳುವಂತಹ ಯುದ್ಧಕ್ಕಾಗಿನ ತಯಾರಿಯನ್ನು ಬಿಡಿ. ಶುಭಸಂಖ್ಯೆ: 2 ವೃಷಭ: ಬಹಳ ಹಿಂದೆ ಪ್ರಾರಂಭಿಸಿದ ಕೆಲಸವೊಂದು ಸದ್ಯದಲ್ಲೇ...

ರಾಷ್ಟ್ರಪತಿ ಆಳ್ವಿಕೆ ರಾಜಕೀಯ ಅಸ್ತ್ರ: ಯಾರ ಕಾಲದಲ್ಲಿ ಹೆಚ್ಚು ಬಳಕೆ ಎಂಬುದರ ಮಾಹಿತಿ ಇಲ್ಲಿದೆ

ಮಹಾರಾಷ್ಟ್ರದಲ್ಲಿ ಯಾವುದೇ ಪಕ್ಷ ಅಥವಾ ಮೈತ್ರಿಕೂಟ ಸರ್ಕಾರ ರಚಿಸಲು ವಿಫಲವಾದ್ದರಿಂದ ಅಲ್ಲಿ ಇತ್ತೀಚೆಗಷ್ಟೇ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲಾಗಿದೆ. ರಾಷ್ಟ್ರಪತಿ ಆಳ್ವಿಕೆ ಏಕೆ...

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಸುಂದರ ಕುಂದಾಪುರ ಎಂಬ ಪದಪುಂಜಕ್ಕೆ ಮೆರುಗು ನೀಡುವ ನಿಟ್ಟಿನಲ್ಲಿ ಆರಂಭಿಸಿದ ಒಳಚರಂಡಿ ಯೋಜನೆ(ಯುಜಿಡಿ) ಜನರ ಪಾಲಿಗೆ ಮುಳುವಾಗುತ್ತದೆ ಎಂದು ಯಾರೊಬ್ಬರು ಎಣಿಸಿರಲಿಕ್ಕಿಲ್ಲ! ಪ್ರಸಕ್ತ ಕುಂದಾಪುರ ನಗರವನ್ನೊಮ್ಮೆ ಸುತ್ತಿ ಬಂದರೆ ಯುಜಿಡಿ ಕರ್ಮಕಾಂಡ ಅನಾವರಣಗೊಳ್ಳುತ್ತದೆ.
ಕುಂದಾಪುರದಲ್ಲಿ ಇರುವ ಎರಡು ಮುಖ್ಯರಸ್ತೆ, ಚಿಕ್ಕನಸಾಲು ರಸ್ತೆ, ಸೂರ‌್ನಳ್ಳಿ ರಸ್ತೆ, ಚರ್ಚ್ ರಸ್ತೆ, ಫೆರ‌್ರಿ ರಸ್ತೆ ಬಿಟ್ಟರೆ ಮತ್ತೆಲ್ಲವೂ ನಗರದ ಒಳಗೆ ಬರುತ್ತವೆ. ಹೆಚ್ಚಿನ ಎಲ್ಲ ರಸ್ತೆಗಳು ಸರ್ವಋತು. ಇನ್ನುಳಿದ ರಸ್ತೆಗಳು ಡಾಂಬರು ಕಂಡಿವೆ. ನಗರದ ರಸ್ತೆ, ತ್ಯಾಜ್ಯ ನಿರ್ವಹಣೆ, ದಿನದ ೨೪ ಗಂಟೆ ಕುಡಿಯುವ ನೀರು ಪೂರೈಕೆ ಹಿನ್ನೆಲೆಯಲ್ಲಿ ಕುಂದಾಪುರ ಪುರಸಭೆಗೆ ಬೆಸ್ಟ್ ಪುರಸಭೆ ಎಂಬ ಅವಾರ್ಡ್ ಕೂಡ ಸಿಕ್ಕಿತ್ತು. ಪ್ರಸಕ್ತ ಯುಜಿಡಿ ಕಾಮಗಾರಿಯಿಂದ ಕುಂದಾಪುರದ ಈ ಪ್ರಶಸ್ತಿಯ ಗರಿಗೆ ಕಪ್ಪುಬಣ್ಣ ಬಳಿಯಲ್ಪಟ್ಟಿದೆ.

ರಸ್ತೆ ಕಟ್ಟಿಂಗ್‌ನಿಂದ ಸಮಸ್ಯೆ: ಪ್ರಸಕ್ತ ಕುಂದಾಪುರದ ಯಾವ ರಸ್ತೆಗಳೂ ಸರಿಯಿಲ್ಲ. ಕುಡಿಯುವ ನೀರು ಪೂರೈಕೆ, ಯುಜಿಡಿ ಕಾಮಗಾರಿ ಪೈಪ್‌ಲೈನ್, ಮ್ಯಾನ್‌ಹೋಲ್ ನಿರ್ಮಾಣಕ್ಕಾಗಿ ರಸ್ತೆ ಕಟ್ಟಿಂಗ್ ಮಾಡಿದ್ದೇ ಚಿತ್ರಣ ಬದಲಾಗಲು ಕಾರಣ. ಕೆಲವೆಡೆ ರಸ್ತೆಗಳ ಮಧ್ಯೆ ಕಟ್ಟಿಂಗ್ ಮಾಡಿದರೆ, ಮತ್ತೆ ಕೆಲವೆಡೆ ರಸ್ತೆ ಬದಿ ಕೊರೆದು ತೆಗೆಯಲಾಗಿದೆ. ಕೆಲವು ಮ್ಯಾನ್‌ಹೋಲ್ ರಸ್ತೆ ಮಧ್ಯದಲ್ಲಿ ಬಂದರೆ ಮತ್ತೆ ಕೆಲವು ಕಡೆ ರಸ್ತೆ ಬದಿ ಅಳವಡಿಸಲಾಗಿದೆ. ಕಟ್ಟಿಂಗ್ ಮಾಡಿದ ರಸ್ತೆ ಪ್ಯಾಚ್‌ವರ್ಕ್ ಮಾಡಿದ್ದರೂ ಸಂಪೂರ್ಣ ಎದ್ದು ಹೋಗಿದೆ. ಮ್ಯಾನ್‌ಹೋಲ್ ಕೆಲವೆಡೆ ರಸ್ತೆಗಿಂತ ಎತ್ತರಕ್ಕಿದ್ದರೆ, ಮತ್ತೆ ಕೆಲವು ರಸ್ತೆ ಆಳಕ್ಕೆ ಇಳಿಯುತ್ತದೆ. ವೇಗವಾಗಿ ಬರುವ ವಾಹನಗಳಿಗೆ ಮ್ಯಾನ್‌ಹೋಲ್ ಹೊಂಡ ಗುರುತಿಸಲು ವಿಫಲವಾಗಿ ನಿಯಂತ್ರಣ ತಪ್ಪುವುದಲ್ಲದೆ, ವಾಹನ ಬಿಡಿಭಾಗಗಳು ಕಳಚಿ ಬೀಳುತ್ತಿವೆ. ದ್ವಿಚಕ್ರ ವಾಹನ ಸವಾರರು ಪಲ್ಟಿ ಹೊಡೆದು, ಆಸ್ಪತ್ರೆ ಸೇರುತ್ತಿದ್ದಾರೆ.
ಯುಜಿಡಿ ಕಾಮಗಾರಿ ಆರಂಭಗೊಂಡಿದ್ದ ವೇಳೆ, ಪುರಸಭೆ ನಿವಾಸಿಗಳು ಇನ್ನೇನು ತ್ಯಾಜ್ಯ ನೀರು ಹರಿಯುವುದು ತಪ್ಪಿ ನೆಮ್ಮದಿಯಾಗಿ ಇರಬಹುದು ಎಂಬ ಕನಸು ಕಂಡಿದ್ದರು. ಆ ಕನಸು ಸದ್ಯಕ್ಕಂತೂ ನನಸಾಗುವ ಲಕ್ಷಣಗಳಿಲ್ಲ.

ಮೂರು ವರ್ಷಗಳಿಂದ ಕಾಮಗಾರಿ: ಕೇಂದ್ರ ಸರ್ಕಾರದ ಗ್ರಾಮಾಭಿವೃದ್ಧಿ ಇಲಾಖೆ ಮೂಲಕ ಯೋಜನೆ ಜಾರಿ(ಯುಐಡಿಎಸ್‌ಎಸ್‌ಎಂಟಿ). ಯುಜಿಡಿ ಕಾಮಗಾರಿಗೆ ಒಟ್ಟು ಅನುದಾನ ೪೮.೧೪ ಕೋಟಿ, ಒಟ್ಟು ವೆಟ್‌ವೆಲ್ ೫, ೪ಕ್ಕೆ ಇನ್ನೂ ಜಾಗ ಗುರುತಿಸಿಲ್ಲ! ಪೈಪ್‌ಲೈನ್ ಉದ್ದ ೩೯.೫೭ ಕಿ.ಮೀ. ಒಟ್ಟು ಮ್ಯಾನ್‌ಹೋಲ್ ೧೪೬೫, ವೆಟ್‌ವೆಲ್‌ಗೆ ಇನ್ನೂ ಸಿಆರ್‌ಜೆಡ್ ಎನ್‌ಒಸಿ ಸಿಕ್ಕಿಲ್ಲ. ಕರ್ನಾಟಕ ನಗರ ನೀರು ಸರಬರಾಜು ಯೋಜನೆ ಮತ್ತು ಒಳಚರಂಡಿ ಅಭಿವೃದ್ಧಿ ಯೋಜನೆ(ಕೆಯುಡಬ್ಲುೃ ಎಸ್‌ಎಫ್‌ಡಿ) ಕುಡಿಯುವ ನೀರು ಯೋಜನೆಗೆ ಒಟ್ಟು ಹಣ ೮.೧೪ ಕೋಟಿ ರೂ. ಕೋಡಿ ಮತ್ತು ಹಳೇಕೋಟೆಯಲ್ಲಿ ಎರಡು ಓವರ್‌ಹೆಡ್ ಟ್ಯಾಂಕ್ ನಿರ್ಮಾಣ. ಮೂರು ವರ್ಷದಿಂದ ಕಾಮಗಾರಿ ನಡೆಯುತ್ತಿದ್ದು, ಪ್ರಸಕ್ತ ಕಾಮಗಾರಿ ನಿಂತಿದೆ. ಎಲ್ಲ್ಲ ರಸ್ತೆಗಳು ಪೈಪ್‌ಲೈನ್ ಹಾಗೂ ವೆಟ್‌ವೆಲ್ ನಿರ್ಮಾಣ ಹೆಸರಲ್ಲಿ ಹಾನಿಗೊಂಡಿವೆ. ರಸ್ತೆ ಕತ್ತಿರಿಸಿದಲ್ಲಿ ಪ್ಯಾಚ್ ಹಾಕಿದ್ದರಿಂದ ಸ್ವರೂಪವೇ ಬದಲಾಗಿದೆ. ಕೆಲವು ಮ್ಯಾನ್ ಹೋಲ್ ಒಡೆದುಹೋಗಿ ಕಬ್ಬಿಣದ ಸರಳುಗಳು ಹೊರ ಇಣುಕುತ್ತಿವೆ.

ಸರ್ವಋತು ರಸ್ತೆಗಳನ್ನು ಕಟ್ಟಿಂಗ್ ಮಾಡಿ, ಪ್ಯಾಚ್ ಹಾಕಿರುವುದು ಹಾಗೂ ರಸ್ತೆಯಲ್ಲಿ ಜೋಡಿಸಿದ ಚೇಂಬರ್‌ಗಳು ರಸ್ತೆ ಸಮತಟ್ಟಿಗೆ ಸರಿಯಾಗಿಲ್ಲ. ಯುಜಿಡಿ ಹಾಗೂ ಕುಡಿಯುವ ನೀರು ಯೋಜನೆ ಪೈಪ್‌ಲೈನ್ ಅಳವಡಿಕೆಗಾಗಿ ರಸ್ತೆ ಕಟ್ ಮಾಡುವುದು ಅನಿವಾರ್ಯ. ಆದರೂ ಗುಣಮಟ್ಟ ಕಾಯ್ದುಕೊಳ್ಳಲು ವಿಫಲವಾಗಿದೆ. ಈ ಬಗ್ಗೆ ಸಂಬಂಧಿತ ಗುತ್ತಿಗೆದಾರರ ಇಂಜಿನಿಯರ್ ಹಾಗೂ ಕಾಮಗಾರಿ ಅನುಷ್ಠಾನ ಮಾಡಿದ ಇಲಾಖೆ ಇಂಜಿನಿಯರ್ ಗಮನಕ್ಕೆ ತಂದಿದ್ದು, ಅವರು ಪರಿಶೀಲನೆ ಮಾಡಿ ಆಗಿರುವ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ. ಮಳೆಗಾಲದ ಅನಂತರ ಚೇಂಬರ್ ಜೋಡಣೆಯಾದ ರಸ್ತೆಗಳನ್ನು ಹಿಂದಿನಂತೆ ನಿರ್ಮಿಸಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಗೋಪಾಲಕೃಷ್ಣ ಶೆಟ್ಟಿ ಮುಖ್ಯಾಧಿಕಾರಿ, ಪುರಸಭೆ ಕುಂದಾಪುರ.

ಪುರಸಭೆಯ ಪ್ರತಿ ಸಾಮಾನ್ಯ ಸಭೆಯಲ್ಲೂ ಯುಜಿಡಿ ಕಾಮಗಾರಿ ಗುಣಮಟ್ಟದ ಬಗ್ಗೆ ಚರ್ಚೆ ನಡೆಸಿದ್ದು ಬಿಟ್ಟರೆ ಪ್ರಯೋಜನ ಸಿಕ್ಕಿಲ್ಲ. ಇಷ್ಟು ದೊಡ್ಡ ಯೋಜನೆ ಕಾರ‌್ಯರೂಪಕ್ಕೆ ತರಬೇಕಿದ್ದರೆ ಎಚ್ಚರಿಕೆ ವಹಿಸಬೇಕಿತ್ತು. ಆದರೆ ಗುತ್ತಿಗೆದಾರರ ಬೇಜವಾಬ್ದಾರಿಗೆ ಕುಂದಾಪುರ ನಾಗರಿಕರು ಬೆಲೆ ತೆರಬೇಕಾಗಿದೆ. ಒಂದು ಉತ್ತಮ ಯೋಜನೆ ಈ ರೀತಿ ವೇಸ್ಟ್ ಆಗುತ್ತಿರುವುದು ಬೇಸರದ ಸಂಗತಿ. ಎಲ್ಲೆಲ್ಲಿ ಯುಜಿಡಿ ಕಾಮಗಾರಿ ನಡೆದು, ರಸ್ತೆ ಹಾಳು ಮಾಡಿದ್ದಾರೋ ಅವೆಲ್ಲವನ್ನೂ ಮರು ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ಪ್ರತಿಭಟನೆ ಬಿಸಿ ಮುಟ್ಟಿಸಬೇಕಾಗುತ್ತದೆ.
ರಾಜೇಶ್ ಕಾವೇರಿ ಮಾಜಿ ಉಪಾಧ್ಯಕ್ಷ, ಪುರಸಭೆ ಕುಂದಾಪುರ.

- Advertisement -

Stay connected

278,504FansLike
569FollowersFollow
608,000SubscribersSubscribe

ವಿಡಿಯೋ ನ್ಯೂಸ್

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....