ಮಾನವೀಯತೆ ಇಲ್ಲದ ಪ್ರಗತಿ ಬೇಡ: ಉದ್ಘೋಷಕ ಡಾ.ಮೈಸೂರು ಉಮೇಶ್

blank

ಮೈಸೂರು: ನಾಗಾಲೋಟದಲ್ಲಿ ಇಂದು ಪ್ರಗತಿ ಆಗುತ್ತಿದೆ. ಮಾನವೀಯತೆ ಮರೆಯಾಗುತ್ತಿದೆ ಎಂದು ಮೈಸೂರು ಆಕಾಶವಾಣಿಯ ಹಿರಿಯ ಉದ್ಘೋಷಕ ಡಾ.ಮೈಸೂರು ಉಮೇಶ್ ಹೇಳಿದರು.
ಎಂ.ಎಂ.ಕೆ. ಮತ್ತು ಎಸ್.ಡಿ.ಎಂ. ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾಲೇಜು ವಾರ್ಷಿಕೋತ್ಸವದಲ್ಲಿ ಮಾತನಾಡಿ, ವಿದ್ಯಾರ್ಥಿನಿಯರು ಜ್ಞಾನದ ಹೊಂಬೆಳಕಿಗಾಗಿ ಹಾತೊರೆಯಬೇಕು, ಬೆಳಕಿನತ್ತ ಸಾಗಲು ಜ್ಞಾನ ಬೇಕು. ಒಳಿತನ್ನು ಸಾಧಿಸುವ ನಿಟ್ಟಿನಲ್ಲಿ ನಿಷ್ಠೆಯಿಂದ ದುಡಿಯಬೇಕು. ಎಲ್ಲವೂ ಉದ್ಯಮವಾಗುತ್ತಿರುವ ಈ ಭ್ರಮಾಲೋಕದಲ್ಲಿ ಇಂದು ದೃಶ್ಯಕ್ಕೆ ಮಾರುಹೋಗಿದ್ದೇವೆ. ಅದು ಸಂಸ್ಕೃತಿಯನ್ನು ನುಂಗಿ ಹಾಕುತ್ತಿದೆ. ಧನದಾಹಿಗಳು ಎಲ್ಲ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ. ಹಾಗಾಗಿ ನಮ್ಮ ಸಾಂಸ್ಕೃತಿಕ ಬೇರುಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಮೊಬೈಲ್ ಬಳಕೆ ಪ್ರಜ್ಞಾಪೂರ್ವಕವಾಗಿರಬೇಕೇ ಹೊರತು ವ್ಯಾಮೋಹವಾಗಬಾರದು. ಬದಲಾಗಿ ಮನುಷ್ಯತ್ವದ ನಿಜವಾದ ಹಂಬಲ ಗೌರವವನ್ನು ನಾವು ಕಲಿಯಬೇಕು. ಮಾನವೀಯತೆಯನ್ನು ಬೆಳೆಸದ ಪ್ರಗತಿ ನಮಗೆ ಬೇಡ ಎಂದರು.
ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎನ್.ಭಾರತಿ ಮಾತನಾಡಿ, ಪ್ರಕೃತಿಯೇ ನಮಗೆ ಮಾದರಿ, ಕೋಶಾವಸ್ಥೆಯಲ್ಲಿರುವ ನೀವು ಪ್ರಯತ್ನ ಮಾಡಿ ಪ್ರತಿಫಲ ಗಳಿಸಬೇಕು. ಜ್ಞಾನ, ತಿಳಿವಳಿಕೆ, ಸೇವೆ ಮತ್ತು ಪರಿಶ್ರಮ ಜೀವನದ ಮೆಟ್ಟಿಲುಗಳು ಎಂದು ಅಭಿಪ್ರಾಯಪಟ್ಟರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ನಯನಕುಮಾರಿ ಮಾತನಾಡಿ, ಮಾನವೀಯ ಮೌಲ್ಯಗಳಿಂದ ಗುಣಾತ್ಮಕ ಪ್ರಗತಿ ಸಾಧ್ಯ, ಓದುವುದರ ಜತೆಗೆ ಜೀವನದಲ್ಲಿ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಹಿರಿಯರಿಗೆ ಗೌರವ, ಕಿರಿಯರಿಗೆ ಪ್ರೀತಿ ತೋರಿಸುವ ಗುಣ ಬೆಳೆಸಿಕೊಳ್ಳಿ. ಚೆನ್ನಾಗಿ ಓದಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಕೀರ್ತಿ ತರಬೇಕೆಂದು ಹೇಳಿದರು.
ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ.ಓ.ಎಲ್.ಸುಮಾ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಸುಪ್ರಜ್ಞ ಜೈನ್, ಕಾರ್ಯದರ್ಶಿ ಪಲ್ಲವಿ ಇತರರು ಇದ್ದರು.

Share This Article

ಐಸ್​​ಕ್ಯೂಬ್​​ನಿಂದ ಮುಖಕ್ಕೆ ಮಸಾಜ್ ಮಾಡಿದ್ರೆ ನಿಮ್ಮ ಸೌಂದರ್ಯ ಹೆಚ್ಚುತ್ತದೆ! ತಜ್ಞರು ಏನು ಹೇಳುತ್ತಾರೆ? Ice cube Remedy

Ice cube Remedy : ಮುಖ ಸುಂದರವಾಗಿ ಕಾಣಲು ಅನೇಕ ಜನರು ವಿವಿಧ ಸಲಹೆಗಳನ್ನು ಅನುಸರಿಸುತ್ತಾರೆ.…

ಈ ನಕ್ಷತ್ರದಲ್ಲಿ ಹುಟ್ಟಿದ ಗಂಡಸರು ತಮ್ಮ ಪತ್ನಿಯರನ್ನು ರಾಜಕುಮಾರಿಯಂತೆ ನೋಡಿಕೊಳ್ಳುತ್ತಾರೆ! Birth of Stars

Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…

ಕಲ್ಲಂಗಡಿ ಹಣ್ಣು ತಿಂದು ಸಿಪ್ಪೆ ಬಿಸಾಡ್ತೀರಾ? ಹಣ್ಣಿನ ಸಿಪ್ಪೆ ತಿಂದ್ರೆ ಪುರುಷರಿಗೆ ಆ ಸಾಮರ್ಥ್ಯ ಹೆಚ್ಚಾಗುವುದು! watermelon

watermelon: ಬೇಸಿಗೆ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು  ಕಲ್ಲಂಗಡಿ ಹಣ್ಣು. ನಾವು ಕಲ್ಲಂಗಡಿ ಹಣ್ಣುಗಳನ್ನು…