ವಿಜಯ ಬ್ಯಾಂಕ್ ಸಿಬ್ಬಂದಿ, ಗ್ರಾಹಕರು ನಿರಾಳ

Latest News

ಬಿ.ಆರ್.ಅಂಬೇಡ್ಕರ್ ಸಂಘಗಳ ಒಕ್ಕೂಟದಿಂದ ಪ್ರತಿಭಟನೆ

ಚಾಮರಾಜನಗರ: ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ರಾಜ್ಯ ಬಿಜೆಪಿ ಸರ್ಕಾರ ಅಗೌರವ ತೋರಿದೆ ಎಂದು ಆರೋಪಿಸಿ ಚಂದಕವಾಡಿ ಹೋಬಳಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಘಗಳ ಒಕ್ಕೂಟದ ವತಿಯಿಂದ ಭಾನುವಾರ...

ಪಕ್ಷಾಂತರಿಗಳ ವಿರುದ್ಧ ಆಕ್ರೋಶ

ಮೈಸೂರು: ಪಕ್ಷಾಂತರಿಗಳ ವಿರುದ್ಧ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನಗರದ ರೈಲ್ವೆ ನಿಲ್ದಾಣದ ಬಳಿ ಭಾನುವಾರ ಪ್ರತಿಭಟನೆ ನಡೆಸಿದರು. ಪಕ್ಷಾಂತರಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು...

ನಗರದಲ್ಲಿ ಪೊರಕೆ ಹಿಡಿದು ಪ್ರತಿಭಟನೆ

Whispers and protests in the city ಚಾಮರಾಜನಗರ: ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿಲ್ಲ ಎಂದು ಶಿಕ್ಷಣ ಇಲಾಖೆಯು...

ಸುಪ್ರೀಂ ಕೋರ್ಟ್​ ನ್ಯಾಯಾಧೀಶ ಎಸ್​​. ಅಬ್ದುಲ್ ನಜೀರ್ ಅವರಿಗೆ Z ಕೆಟಗರಿ ಭದ್ರತೆ

ನವದೆಹಲಿ: ಅಯೋಧ್ಯೆ ರಾಮಜನ್ಮಭೂಮಿ ಪ್ರಕರಣದ ತೀರ್ಪು ನೀಡಿದ ಪೀಠದಲ್ಲಿದ್ದ ನ್ಯಾಯಾಧೀಶ ಎಸ್​​.ಅಬ್ದುಲ್ ನಜೀರ್​ ಅವರಿಗೆ "Z" ಕೆಟಗರಿ ಭದ್ರತೆ ನೀಡಲು ಕೇಂದ್ರ ಸರ್ಕಾರ...

ಸಂಘಗಳಿಗೆ ಸಾಲ ಪ್ರಮಾಣ ಕಡಿತ

ಶೃಂಗೇರಿ: ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಶೇ.22ರಷ್ಟು ರೈತರು ಸಾಲ ಸೌಲಭ್ಯ ಪಡೆಯುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ದಿಕ್ಕಿನಲ್ಲಿ ಆಲೋಚಿಸಿ...

 ವೇಣುವಿನೋದ್ ಕೆ.ಎಸ್. ಮಂಗಳೂರು
ಸದ್ಯಕ್ಕಂತೂ ಯಾವುದೇ ಶಾಖೆಯ ಮುಚ್ಚುಗಡೆ ಭೀತಿ ಇರದ ಸಿಬ್ಬಂದಿ.. ಎಂದಿನಂತೆಯೇ ಕಾರ್ಯವೆಸಗುವ ವ್ಯವಸ್ಥೆ… ಸಾಲ ವಿತರಣೆಯಲ್ಲಿ ಒಂದಿಷ್ಟು ಬದಲಾವಣೆ… ಉಭಯ ಬ್ಯಾಂಕ್ ಗ್ರಾಹಕರು ಪರಸ್ಪರ ಬ್ಯಾಂಕ್ ಶಾಖೆಗಳಿಗೆ ಹೋಗುವುದಕ್ಕೆ ಇನ್ನೂ ಕೆಲ ತಿಂಗಳು ಬೇಕು…
ಬ್ಯಾಂಕ್ ಆಫ್ ಬರೋಡಾದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಮೂಲದ ವಿಜಯ ಬ್ಯಾಂಕ್ ವಿಲೀನಗೊಂಡು ಒಂದು ತಿಂಗಳು ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ವಿಜಯ ಬ್ಯಾಂಕ್ ಕೆಲವು ಶಾಖೆಗಳಿಗೆ ಹೋಗಿ ಪರಿಶೀಲಿಸಿದಾಗ ಕಂಡು ಬಂದ ವಿಚಾರಗಳಿವು.

ಏಪ್ರಿಲ್ 1ರಿಂದ ಬ್ಯಾಂಕ್ ಆಫ್ ಬರೋಡಾ ಆಗಿ ಬದಲಾಗಿರುವ ವಿಜಯ ಬ್ಯಾಂಕ್ ಇನ್ನೂ ಆ ಬ್ಯಾಂಕ್‌ನ ಸಂಸ್ಕೃತಿಗೆ ಸೇರಿ ಹೋಗಿಲ್ಲ. ವಿಲೀನದ ಪ್ರಾರಂಭದ ದಿನಗಳಲ್ಲಿ ಬ್ಯಾಂಕ್ ಸೇವೆಗಳ ಬಗ್ಗೆ ಆತಂಕಿತರಾಗಿದ್ದ ಗ್ರಾಹಕರಂತೂ ಪೂರ್ತಿ ನಿರಾಳರಾಗಿದ್ದಾರೆ.

ಸಾಫ್ಟ್‌ವೇರ್ ಬದಲಾಗಿಲ್ಲ: ವಿಜಯ ಬ್ಯಾಂಕ್‌ನ ಮೊದಲಿನ ಸಾಫ್ಟ್‌ವೇರ್‌ನಲ್ಲಿ ಇನ್ನೂ ಹೆಚ್ಚು ಬದಲಾವಣೆ ಮಾಡಿಲ್ಲ. ಹಾಗಾಗಿ ಸದ್ಯಕ್ಕೆ ಬ್ಯಾಂಕ್ ಆಫ್ ಬರೋಡಾದ ಗ್ರಾಹಕರು ವಿಜಯ ಬ್ಯಾಂಕ್‌ಗೆ, ಅಥವಾ ಪ್ರತಿಕ್ರಮದಲ್ಲೂ ಬಂದು ಬ್ಯಾಂಕಿಂಗ್ ಮಾಡಲಾಗುತ್ತಿಲ್ಲ. ಇದಕ್ಕೆ ಇನ್ನೂ ಕೆಲವು ತಿಂಗಳುಗಳೇ ಬೇಕಾಗಬಹುದು.

ವಿಜಯ ಬ್ಯಾಂಕ್ ಬರೋಡಾ ಬ್ಯಾಂಕ್ ಆಗಿದೆ ಎಂದು ಆ ಬ್ಯಾಂಕ್‌ನ ಗ್ರಾಹಕರು ನಮ್ಮಲ್ಲಿಗೆ ಬರುತ್ತಾರೆ, ಅವರನ್ನು ನಾವು ವಿಚಾರ ಸ್ಪಷ್ಟಪಡಿಸಿ, ಸದ್ಯಕ್ಕೆ ಅವರ ಶಾಖೆಗೇ ತೆರಳುವಂತೆ ಸೂಚಿಸುತ್ತೇವೆ ಎನ್ನುತ್ತಾರೆ ವಿಜಯ ಬ್ಯಾಂಕ್ ಸಿಬ್ಬಂದಿ.

ಸಾಲ ನೀಡಿಕೆ ಕ್ಲಿಷ್ಟಕರ: ವಿಜಯ ಬ್ಯಾಂಕ್ ಬರೋಡಾ ಬ್ಯಾಂಕ್ ಆಗಿ ಬದಲಾದ ಬಳಿಕ ಸಿಬ್ಬಂದಿಗೆ ಎಲ್ಲರಿಗೂ ಏಕಕಾಲದಲ್ಲಿ ತರಬೇತಿ ನೀಡುವುದು ಸಾಧ್ಯವಾಗಿಲ್ಲ. ಗುಂಪುಗಳನ್ನಾಗಿ ಮಾಡಿ ಅವರಿಗೆ ಬರೋಡಾ, ಮುಂಬೈ, ಬೆಂಗಳೂರುಗಳಲ್ಲಿ ಆಗಾಗ ತರಬೇತಿ ನೀಡಲಾಗುತ್ತಿದೆ. ಬ್ಯಾಂಕ್ ಆಫ್ ಬರೋಡಾದ ಕಾರ್ಯಚಟುವಟಿಕೆಗಳ ಮಾದರಿ ವ್ಯತ್ಯಾಸವಿರುವುದರಿಂದ ಅದರಲ್ಲೂ ಸಾಲ ನೀಡಿಕೆಯ ವಿನ್ಯಾಸ ಸಾಕಷ್ಟು ಭಿನ್ನವಾಗಿರುವುದರಿಂದ ಕಷ್ಟವಾಗುತ್ತದೆ ಎನ್ನುತ್ತಾರೆ ಸಿಬ್ಬಂದಿ. ನಮ್ಮ ಗ್ರಾಹಕರು ಸಾಲ ಕೇಳಿಕೊಂಡು ಬರುವಾಗ ಮೊದಲು ಸುಲಭವಾಗಿ ಸಾಲ ನೀಡಲಾಗುತ್ತಿತ್ತು, ಈಗ ಬರೋಡಾ ಬ್ಯಾಂಕ್‌ನ ಸಾಲ ನೀಡಿಕೆ ವ್ಯವಸ್ಥೆ ಅರಿತುಕೊಂಡು ನೀಡುತ್ತೇವೆ ಎಂದರು.

ಸಿಬ್ಬಂದಿ ಖುಷ್: ಎರಡೂ ಬ್ಯಾಂಕ್ ರಾಷ್ಟ್ರೀಕೃತವಾದ್ದರಿಂದ ವೇತನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ ಇತರ ಭತ್ಯೆಗಳು ಬ್ಯಾಂಕ್ ಆಫ್ ಬರೋಡಾದಲ್ಲಿ ಸಾಕಷ್ಟಿದ್ದವು, ಅವುಗಳನ್ನೇ ಈಗ ವಿಜಯ ಬ್ಯಾಂಕ್ ಸಿಬ್ಬಂದಿಗೂ ಕೊಡಲಾರಂಭಿಸಿದ್ದು ಇದು ಸಿಬ್ಬಂದಿ ಖುಷಿಗೆ ಕಾರಣ.
ಪೆಟ್ರೋಲ್ ಭತ್ಯೆ ಪ್ರಮಾಣ ಹೆಚ್ಚಿಸಲಾಗಿದೆ, ಗ್ಯಾಸ್ ಸಿಲಿಂಡರ್ ಭತ್ಯೆ ಹೊಸದಾಗಿ ನೀಡುತ್ತಿದ್ದಾರೆ, ಕಾಫಿ ಭತ್ಯೆ ಕೊಡುತ್ತಿದ್ದಾರೆ, ಇದೆಲ್ಲವೂ ಉತ್ತಮ ಬೆಳವಣಿಗೆ ಎಂದು ಸಿಬ್ಬಂದಿ ತಿಳಿಸುತ್ತಾರೆ.

ಲಾಂಛನ ಸದ್ಯಕ್ಕೆ ಅಬಾಧಿತ: ಶಾಖೆಗಳ ಹೊರಗೆ ಬೋರ್ಡ್‌ಗಳಲ್ಲಿ ವಿಜಯ ಬ್ಯಾಂಕ್‌ನ ಲಾಂಛನವಿನ್ನೂ ಇದೆ, ವಿಜಯ ಬ್ಯಾಂಕ್ ಫಲಕದ ಕೆಳಗೆ ನೌ ಬ್ಯಾಂಕ್ ಆಫ್ ಬರೋಡಾ ಎಂಬ ಚಿಕ್ಕ ಅಕ್ಷರದ ಒಕ್ಕಣೆ ಸೇರಿಕೊಂಡಿದೆ. ಎಷ್ಟು ಸಮಯ ಇದು ಹೀಗೆಯೇ ಮುಂದುವರಿಯುತ್ತದೆ ಎನ್ನುವ ಬಗ್ಗೆ ಸ್ಥಳೀಯವಾಗಿ ಯಾವುದೇ ಅಧಿಕಾರಿಗಳಿಗೂ ಮಾಹಿತಿ ಇಲ್ಲ, ಇದಕ್ಕೆ ನಮ್ಮ ಪ್ರಧಾನ ಕಚೇರಿಯನ್ನೇ ಸಂಪರ್ಕಿಸಿ ಎನ್ನುತ್ತಾರೆ. ಉಳಿದಂತೆ ಶಾಖೆಯಲ್ಲಿ ಪವರ್ ಆಫ್ ತ್ರೀ (ವಿಜಯ, ಬರೋಡಾ ಮತ್ತು ದೆನಾ ಬ್ಯಾಂಕ್ ಮೂರರ ವಿಲೀನ ಕುರಿತು) ಎನ್ನುವ ಒಕ್ಕಣೆಯ ಪ್ರದರ್ಶಿಕೆಗಳು ಕಾಣುತ್ತವೆ.

- Advertisement -

Stay connected

278,541FansLike
570FollowersFollow
609,000SubscribersSubscribe

ವಿಡಿಯೋ ನ್ಯೂಸ್

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....