Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ತೆಂಗಿನ ಎಣ್ಣೆ ವಿಷ ಅಲ್ಲ ಕೇಂದ್ರದಿಂದ ಸ್ಪಷ್ಟೀಕರಣ

Saturday, 15.09.2018, 2:03 AM       No Comments

ನವದೆಹಲಿ: ತೆಂಗಿನ ಎಣ್ಣೆ ವಿಷಕಾರಿ ಎಂದು ಹಾರ್ವರ್ಡ್ ವಿವಿ ಪ್ರಾಧ್ಯಾಪಕಿ ಕೆರಿನ್ ಮಿಷೆಲ್ಸ್ ಹೇಳಿರುವ ವಿಡಿಯೋ ಇತ್ತೀಚೆಗೆ ಯೂಟ್ಯೂಬ್​ನಲ್ಲಿ ಹರಿದಾಡಿ ಭಾರಿ ವಿವಾದ ಸೃಷ್ಟಿಸಿದ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯ ಆಯುಕ್ತ ಡಾ. ಬಿ.ಎನ್. ಶ್ರೀನಿವಾಸ್ ಮೂರ್ತಿ ಸ್ಪಷ್ಟನೆ ನೀಡಿದ್ದಾರೆ. ಅಮೆರಿಕದ ಬಾಸ್ಟನ್​ನಲ್ಲಿನ ಹಾರ್ವರ್ಡ್ ಟಿ.ಎಚ್. ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್​ನ ಡೀನ್ ಡಾ. ಮಿಷೆಲ್. ಎ. ವಿಲಿಯಮ್ಸ್​ಗೆ ತೆಂಗಿನ ಎಣ್ಣೆಯ ಉಪಯೋಗಗಳ ಬಗ್ಗೆ ಅವರು ಪತ್ರ ಬರೆದಿದ್ದಾರೆ. ಕೆರಿನ್ ಮಿಷೆಲ್ಸ್ ಈ ಇನ್​ಸ್ಟಿಟ್ಯೂಟ್​ನಲ್ಲಿ ಪ್ರಾಧ್ಯಾಪಕಿಯಾಗಿದ್ದಾರೆ. ‘ಮಿಷೆಲ್ಸ್ ಹೇಳಿಕೆಗೆ ಯಾವುದೇ ಸಮರ್ಥನೀಯ ಆಧಾರಗಳಿಲ್ಲ. ಗೂಗಲ್​ನಲ್ಲಿ ತೆಂಗಿನ ಎಣ್ಣೆ ಉಪಯೋಗಗಳ ಬಗ್ಗೆ ಶೋಧ ನಡೆಸಿದರೆ 1.91 ಕೋಟಿ ಅಭಿಪ್ರಾಯಗಳು ಮತ್ತು 4.11 ಲಕ್ಷ ಸಂಶೋಧಕರ ಪ್ರಬಂಧಗಳು ಸಿಗುತ್ತವೆ. ಹೃದಯ ಸಮಸ್ಯೆಗೂ ತೆಂಗಿನ ಎಣ್ಣೆ ಸೇವನೆಗೂ ನೇರವಾಗಿ ಸಂಬಂಧವಿರುವ ಬಗ್ಗೆ ಯಾವುದೇ ಪ್ರಬಲ ಹಾಗೂ ವೈಜ್ಞಾನಿಕ ಸಾಕ್ಷ್ಯಗಳು ಲಭ್ಯವಿಲ್ಲ’ ಎಂದು ವಿವರಿಸಿದ್ದಾರೆ. ಮಿಷೆಲ್ಸ್​ಗೆ ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ನೀವು ಸೂಚಿಸುತ್ತೀರಿ ಎಂಬ ವಿಶ್ವಾಸವಿದೆ ಎಂದು ಪತ್ರದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *

Back To Top