ಬೆಂಗಳೂರು: ಎರಡೂ ಬಾರಿ ಕ್ಷಮಾಪಣೆ ಕೋರಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಪತ್ರ ಬರೆದಿದ್ದರೂ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರನ್ನು 13ನೇ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ವೀಕ್ಷಕ ವಿವರಣೆಗಾರರ ತಂಡದಿಂದ ಕೈಬಿಡಲಾಗಿದೆ. ಸೆ.19 ರಿಂದ ಯುಎಇಯಲ್ಲಿ ಆರಂಭಗೊಳ್ಳಲಿರುವ ಐಪಿಎಲ್ ಟೂರ್ನಿಗೆ 7 ಮಂದಿಯ ವೀಕ್ಷಕರ ವಿವರಣೆಗಾರರ ಹೆಸರನ್ನು ಅಂತಿಮಗೊಳಿಸಿದ್ದು, ಸಂಜಯ್ ಮಂಜ್ರೇಕರ್‌ಗೆ ಕೊಕ್ ನೀಡಲಾಗಿದೆ. ಬಿಸಿಸಿಐ ನೀಡುವ ಮಾರ್ಗಸೂಚಿಯನ್ನು ತಪ್ಪದೇ ಪಾಲಿಸಲಾಗುವುದು ಎಂದು ಬಿಸಿಸಿಐಗೆ ಮಂಜ್ರೇಕರ್ ಕ್ಷಮಾಪಣಾ ಪತ್ರದಲ್ಲಿ ಹೇಳಿದ್ದರು.
ಇದನ್ನೂ ಓದಿ: VIDEO: ಲೀಗ್‌ನಿಂದ ಹೊರಬಿದ್ದ ಬಾರ್ಬಡೊಸ್ ಟ್ರಿಡೆಂಟ್ಸ್, ಸೇಂಟ್ ಕೀಟ್ಸ್
ಮಾಜಿ ಕ್ರಿಕೆಟಿಗರಾದ ಸುನೀಲ್ ಗಾವಸ್ಕರ್, ಎಲ್.ಶಿವರಾಮಕೃಷ್ಣನ್, ಮುರಳಿ ಕಾರ್ತಿಕ್, ದೀಪ್ ದಾಸ್ ಗುಪ್ತಾ, ರೋಹನ್ ಗಾವಸ್ಕರ್, ಹರ್ಷ ಬೋಗ್ಲೆ ಹಾಗೂ ಅಂಜುಂ ಚೋಪ್ರ ಹೆಸರನ್ನು ವೀಕ್ಷಕ ವಿವರಣೆಗಾರರ ತಂಡಕ್ಕೆ ಸೇರ್ಪಡಿಸಲಾಗಿದೆ. ಟೂರ್ನಿ ನೇರ ಪ್ರಸಾರದ ಹಕ್ಕುಹೊಂದಿರುವ ಸ್ಟಾರ್ ಇಂಡಿಯಾದ ಮೂಲಗಳ ಪ್ರಕಾರ, ಮಂಜ್ರೇಕರ್ ಹೆಸರನ್ನು ಪಟ್ಟಿಯಲ್ಲಿ ಸೇರಿಸುವ ಇರಾದೆಯಲ್ಲಿದೆ ಎನ್ನಲಾಗಿದೆ. ಅಲ್ಲದೆ, ಪ್ರಾದೇಶಿಕ ಭಾಷೆಗಳಿಂದ 90 ಕ್ಕೂ ಹೆಚ್ಚು ವೀಕ್ಷಕ ವಿವರಣೆಗಾರರು ಇರಲಿದ್ದಾರೆ. ವೀಕ್ಷಕರ ವಿವರಣೆಗಾರರ ತಂಡವನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಲಾಗಿದ್ದು, ದುಬೈ ಹಾಗೂ ಅಬುಧಾಬಿಯಲ್ಲಿ ಕಾರ್ಯ ನಿರ್ವಹಿಸಲಿವೆ. 2019ರ ಏಕದಿನ ವಿಶ್ವಕಪ್ ಟೂರ್ನಿ ವೇಳೆ ಭಾರತದ ಆಲ್ರೌಂಡರ್ ರವೀಂದ್ರ ಜಡೇಜಾ ಕುರಿತು ಮಂಜ್ರೇಕರ್ ಆಕ್ಷೇಪಾರ್ಹವಾಗಿ ಮಾತನಾಡಿದ್ದರು. ಬಳಿಕ ಬಿಸಿಸಿಐ ಮಂಜ್ರೇಕರ್ ಅವರನ್ನು ವೀಕ್ಷಕ ವಿವರಣೆಗಾರ ತಂಡದಿಂದ ಕೈಬಿಟ್ಟಿತ್ತು.
ಇದನ್ನೂ ಓದಿ: WWE ಖ್ಯಾತಿಯ ಡ್ವೇನ್ ಜಾನ್ಸನ್ ಕುಟುಂಬಕ್ಕೆ ಕರೊನಾ!
90 ವೀಕ್ಷಕ ವಿವರಣೆಗಾರರು, ಅಲ್ಲದೆ, ಎಲ್ಲ ಭಾಷೆಗಳಿಗೂ ಲಭ್ಯವಾಗುವಂತೆ 7 ವೀಕ್ಷಕರ ವಿವರಣೆಗಾರರ ತಂಡ ಕಾರ್ಯನಿರ್ವಹಿಸಲಿದೆ. ಅಲ್ಲದೆ, ಪ್ರತಿದಿನ 18 ಗಂಟೆಗಳ ಕಾಲ ನೇರ ಪ್ರಸಾರ, ವಿಶೇಷ ಕಾರ್ಯಕ್ರಮಗಳು ಪ್ರಸಾರವಾಗಲಿದೆ ಎಂದು ಸ್ಟಾರ್ ಸ್ಪೋರ್ಟ್ಸ್ ಮುಖ್ಯಸ್ಥರು ಹೇಳಿಕೊಂಡಿದ್ದಾರೆ. ಭಾರತದಲ್ಲಿಯೇ 55 ಕೋಟಿ ವೀಕ್ಷಕರು ಲೀಗ್ ವೀಕ್ಷಿಸುವುಂತೆ ಮಾಡುವುದೇ ಗುರಿ ಎಂದು ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಹೇಳಿಕೊಂಡಿದೆ.
ಐಪಿಎಲ್‌ನಿಂದ ಹರ್ಭಜನ್ ಸಿಂಗ್ ಔಟ್, ಚೆನ್ನೈ ಸೂಪರ್‌ಕಿಂಗ್ಸ್‌ಗೆ ಮತ್ತೊಂದು ಹೊಡೆತ