ಜೆಡಿಎಸ್‌ನಿಂದ ಯಾರೂ ಸಂಪರ್ಕಿಸಿಲ್ಲ, ಕಾಂಗ್ರೆಸ್‌ ನನಗೆ ಮೋಸ ಮಾಡಿಲ್ಲ ಎಂದ ಸುಮಲತಾ

ಮಂಡ್ಯ: ನನಗೆ ಜೆಡಿಎಸ್ ಪಕ್ಷಕ್ಕೆ ಆಹ್ವಾನ ನೀಡಿಲ್ಲ. ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ನಾನು ಅಭ್ಯರ್ಥಿಯಾಗುವುದು ಅವರಿಗೆ ಇಷ್ಟವಿರಲಿಲ್ಲ ಎಂದು ಸುಮಲತಾ ಅಂಬರೀಷ್‌ ತಿಳಿಸಿದರು.

ಮೇಲುಕೋಟೆಯಲ್ಲಿ ಮಾತನಾಡಿದ ಅವರು, ಸಂಧಾನಕ್ಕೆ ಸುಮಲತಾ ಒಪ್ಪಿಲ್ಲವೆಂಬ ಸಚಿವ ಡಿ.ಸಿ.ತಮ್ಮಣ್ಣ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಅಂಬಿ ಅಣ್ಣನ ಮಗನನ್ನು ಸಂಪರ್ಕಿಸಿದ್ದಾರೆ. ಮೊದಲೇ ಅವರು ನಮ್ಮ ಪಕ್ಷದವರಲ್ಲ ಅಂದಿದ್ದರು. ಅವರಿಗೆ ನಾನು ಅಭ್ಯರ್ಥಿಯಾಗುವ ಇಷ್ಟವಿರಲಿಲ್ಲ. ನನಗೆ ಜೆಡಿಎಸ್ ಪಕ್ಷಕ್ಕೆ ಆಹ್ವಾನ ನೀಡಿಲ್ಲ. ಎರಡು ದಿನಗಳ ಹಿಂದೆ ಸಿಎಂ ನನ್ನ ಬಗ್ಗೆ ಮಾತ‌ನಾಡದಂತೆ ಹೇಳಿದ್ದಾರೆ. ಆದರೂ ಯಾಕೆ ಮಾತನಾಡುತ್ತಿದ್ದಾರೆ ಗೊತ್ತಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷ ನನಗೆ ಮೋಸ ಮಾಡಿಲ್ಲ. ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮೋಸವಾಗುತ್ತಿದೆ. ಈ ಹಿಂದೆ ಒಂದು ದಿನಾಂಕ ಹೇಳಿದ್ದೆ. ಅದರಂತೆಯೇ ನಾನು ಆ ದಿನ ತೀರ್ಮಾನ ಹೇಳುತ್ತೇನೆ. ನನ್ನ ಜತೆ ಜನರಿದ್ದಾರೆ. ಅಂಬರೀಷ್‌ರ ಜನ ಸಂಪಾದನೆಯಂತೆ ಅವರ ಮೂಲಕ ಜನರ ಬಳಿಯೇ ಹೋಗುತ್ತೇನೆ.

ಪಾಂಡವಪುರ ತಾಲೂಕಿನ ಮೇಲುಕೋಟೆಗೆ ಭೇಟಿ ನೀಡಿದ್ದ ಸುಮಲತಾ ಅಂಬರೀಷ್‌ ಅವರು ಚಲುವನಾರಾಯಣಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ತೆರೆದ ವಾಹನದ ಮೂಲಕ ರೋಡ್ ಷೋ ನಡೆಸಿದರು. ಸುಮಲತಾಗೆ ರಾಕ್​​ಲೈನ್ ವೆಂಕಟೇಶ್ ಸೇರಿ ಹಲವರು ಸಾಥ್ ನೀಡಿದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *