ನೀವಿದ್ದಾಗ ನಾನು ಸೋಲ್ತೀನಾ? ನೋ ವೇ, ಚಾನ್ಸೇ ಇಲ್ಲ: ಅಂಬಿ ಡೈಲಾಗ್‌ ಹೇಳಿದ ಸುಮಲತಾ

ಮಂಡ್ಯ: ಮಗನನ್ನು ಗೆಲ್ಲಿಸಿದರೆ ಮಾತ್ರ ಮಂಡ್ಯ ಅಭಿವೃದ್ಧಿ ಎನ್ನುತ್ತಾರೆ. ಮಗ ಸೋತರೆ ಇವರಿಗೆ ಮಂಡ್ಯದ ಜನ ಬೇಡವಾ? ಮಗನಿಗೋಸ್ಕರ ಇವರಿಗೆ ಮಂಡ್ಯದ ಜನ ಬೇಕಾ? ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ವಾಗ್ಧಾಳಿ ನಡೆಸಿದರು.

ಕೆ. ಆರ್. ಪೇಟೆಯ ಸೋಮನಹಳ್ಳಿಯಲ್ಲಿ ಮಾತನಾಡಿ, ಏಳೆಂಟು ಶಾಸಕರು, ಮಿನಿಸ್ಟರ್​​ಗಳು ಯಾಕೆ ಬೇಕು? ಇದಕ್ಕೆಲ್ಲ ತಕ್ಕ ಉತ್ತರ ಕೊಡುವ ಕಾಲ ಬಂದಿದೆ. ಅಕ್ರಮವಾಗಿ ಹಣ ಮಾಡಿದವರಿಗೆಲ್ಲ ತಕ್ಕಶಾಸ್ತಿ ಕಾದಿದೆ. ಇಡಿ, ಐಟಿಯಿಂದ ರೇಡ್ ಆಗಿರೋದನ್ನು ನೋಡಿದ್ದೀರಿ. ಅಕ್ರಮವಾಗಿ ಸಾವಿರಾರು ಕೋಟಿ ಹಣ ಮಾಡಿದವರಿಗೆಲ್ಲ ಶಾಸ್ತಿ ಕಾದಿದೆ. ಕೇಂದ್ರ ಸರ್ಕಾರ ಈ ತರಹದವರನ್ನು ನೋಡುತ್ತಿದ್ದಾರೆ ಎಂದು ಪರೋಕ್ಷವಾಗಿ ಡಿಕೆಶಿ ವಿರುದ್ಧ ಗುಡುಗಿದರು.

ಅವತ್ತು ಇಲ್ಲೊಂದು ಘಟನೆಯಾಗಿದ್ದನ್ನು ಕೇಳಿ ಬೇಜಾರಾಯ್ತು. ಅವರೆಲ್ಲ ಬೇಕು ಎಂದೇ ಇದನ್ನೆಲ್ಲ ಮಾಡುತ್ತಿದ್ದಾರೆ. ಮಗನಿಗೋಸ್ಕರ ಇವರಿಗೆ ಮಂಡ್ಯದ ಜನರು ಬೇಕಾ? ಹಾಗಾದರೆ ಏಳೆಂಟು ಜನ ಶಾಸಕರು, ಸಚಿವರು ಯಾಕೆ ಬೇಕು? ಇದಕ್ಕೆಲ್ಲ ತಕ್ಕ ಉತ್ತರ ಕೊಡುವ ಕಾಲ ಬಂದಿದೆ. ನಿಜವಾದ ಜೋಡೆತ್ತುಗಳು, ಕಳ್ಳೆತ್ತುಗಳು ಯಾರು ಎನ್ನುವುದು ಗೊತ್ತಾಗುತ್ತದೆ ಎಂದರು.

ನನ್ನ ಪರವಾಗಿ ರೈತಸಂಘ, ಬಿಜೆಪಿ, ಎಲ್ಲ ಸಂಘಟನೆಗಳು ನಿಂತಿವೆ. ನನ್ನ ಪರ ಯಶ್, ದರ್ಶನ್, ನನ್ನ ಮಗ ಅಭಿಷೇಕ್ ಇದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ನನ್ನ ಜತೆ ನೀವಿದ್ದೀರ. ನೀವಿದ್ದಾಗ ನಾನು ಸೋಲ್ತೀನಾ..? ನೋ ವೇ ಚಾನ್ಸೇ ಇಲ್ಲ ಎಂದು ಅಂಬರೀಷ್‌ ಅವರ ಡೈಲಾಗ್‌ ಹೊಡೆದರು.

ಸುಮಲತಾ ಮಾತಿನ ವೇಳೆ ಡಿ ಬಾಸ್ ಎಂದು ಕೂಗಿದ ಅಭಿಮಾನಿಗಳನ್ನು ಸುಮ್ಮನಿರಿಸಿ ಡಿ ಬಾಸ್ ಎಂಬ ಕೂಗು ಇವತ್ತು ನನಗೆ ಬೇಡ. ಏ.18ರ ಮತದಾನದ ದಿನದಂದು ಬೇಕು ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)

2 Replies to “ನೀವಿದ್ದಾಗ ನಾನು ಸೋಲ್ತೀನಾ? ನೋ ವೇ, ಚಾನ್ಸೇ ಇಲ್ಲ: ಅಂಬಿ ಡೈಲಾಗ್‌ ಹೇಳಿದ ಸುಮಲತಾ”

Leave a Reply

Your email address will not be published. Required fields are marked *