ಇಂಗ್ಲಿಷ್ ಕಲಿತ ಶೇ.47 ಮಂದಿಗೆ ಉದ್ಯೋಗವೇ ಇಲ್ಲ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಭಿಮತ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದಲ್ಲಿ ಕನ್ನಡ ಜಾಗೃತ ಪರಿಷತ್​ನಿಂದ ಆಯೋಜಿಸಿದ್ದ ಆಯ್ಕೆ ಮತ್ತು ಅವಕಾಶ ವಂಚಿತರಿಗೆ ಒತ್ತಾಸೆ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಿವೃತ್ತ ಕನ್ನಡ ಪ್ರಾಧ್ಯಾಪಕ ಎಚ್.ಎಸ್.ನಾರಪ್ಪ, ಮೇಜರ್ ಎಸ್.ಮಹಾಬಲೇಶ್ವರ್, ರುಮಾಲೆ ನಾಗರಾಜ್, ನಗರಸಭಾ ಸದಸ್ಯ ತ.ನ.ಪ್ರಭುದೇವ್, ಹಿರಿಯ ಕನ್ನಡಪರ ಹೋರಾಟಗಾರ ಜಿ.ಸತ್ಯನಾರಾಯಣ್, ಕನ್ನಡ ಜಾಗೃತ ಪರಿಷತ್ ಟ್ರಸ್ಟ್​ನ ಗೌರವ ಅಧ್ಯಕ್ಷೆ ಕೆ.ಸುಲೋಚನಮ್ಮ, ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ ನಾಯಕ್, ಜಾಗೃತ ಪರಿಷತ್ ಪ್ರಧಾನ ಕಾರ್ಯದರ್ಶಿ ಡಿ.ಪಿ.ಆಂಜನೇಯ ಇದ್ದರು.

ಇದನ್ನೂ ಓದಿ: ಜನತಾ ನ್ಯಾಯಾಲಯದಲ್ಲಿ ಜಂಗಿಕುಸ್ತಿ: ಅರಮನೆ ನಗರಿಯಲ್ಲಿ ಕೈ ಜನಾಂದೋಲನ, ಇಂದು ದೋಸ್ತಿ ಪಾದಯಾತ್ರೆ ಸಮಾರೋಪ

ಆಯ್ಕೆ ಮತ್ತು ಅವಕಾಶ ವಂಚಿತರಿಗೆ ಒತ್ತಾಸೆ ಎಂಬ ಹೆಸರಿನಲ್ಲಿ ಸರ್ಕಾರಿ, ಅನುದಾನಿತ ಪ್ರೌಢ ಶಾಲೆಗಳಲ್ಲಿ ಎಸ್​ಎಸ್​ಎಲ್​ಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕನ್ನಡ ಜಾಗೃತ ಪರಿಷತ್ ವತಿಯಿಂದ ನಗದು ಪುರಸ್ಕಾರ ನೀಡಿ ಗೌರವಿಸುತ್ತಿರುವುದು ಅನುಕರಣೀಯ. ಜಾತಿ, ಧರ್ಮ ಮೀರಿ ಇಂಥ ಕಾರ್ಯಕ್ರಮಗಳು ನಡೆಯಬೇಕಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.

ನಗರದ ಕನ್ನಡ ಜಾಗೃತ ಪರಿಷತ್ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಆಯ್ಕೆ ಮತ್ತು ಅವಕಾಶ ವಂಚಿತರಿಗೆ ಒತ್ತಾಸೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಒಂದು ಸಾವಿರ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಿದ್ದರು. ಈಗ ಕೂಡ ಇಂಗ್ಲಿಷ್ ಶಾಲೆಗಳನ್ನು ತೆರೆಯಲು ಮನವಿ ಸಲ್ಲಿಸಲಾಗಿದೆ. ಅಧಿಕಾರಿ ಗಣದಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಿದೆ. ಶೇ.50ಕ್ಕಿಂತಲೂ ಹೆಚ್ಚು ಪಾಲಕರಲ್ಲಿ ಇಂಗ್ಲಿಷ್ ವ್ಯಾಮೋಹವಿದೆ. ಆದರೆ ಇಂಗ್ಲಿಷ್ ಕಲಿತರೆ ಮನೆಗೆ ಬಂದು ಯಾರೂ ಉದ್ಯೊಗ ಕೊಡುವುದಿಲ್ಲ. ಇಂಗ್ಲಿಷ್ ಕಲಿತ ಶೇ.47 ಮಂದಿಗೆ ಉದ್ಯೋಗವೇ ಇಲ್ಲ. ಇದಕ್ಕೆ ಪ್ರತಿಭೆ ಬೇಕು, ಕೌಶಲಗಳು ಬೇಕು. ಇದನ್ನು ಕಲಿಸುವುದರತ್ತ ಎಲ್ಲರ ಗಮನವಿರಬೇಕು. ಆದರೆ, ಯಾರಿಗೂ ಈ ಬಗ್ಗೆ ಲಕ್ಷ್ಯವೇ ಇಲ್ಲದಾಗಿದೆ ಎಂದರು.

ಇದನ್ನೂ ಓದಿ: ಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್‌ಗೆ ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿ

ನಿವೃತ್ತ ಪ್ರಾಧ್ಯಾಪಕ ಡಾ.ಎ.ಒ.ಆವಲಮೂರ್ತಿ ಮಾತನಾಡಿ, ಇಂಗ್ಲಿಷ್​ನಿಂದ ಮಾತ್ರ ಬದುಕು ಸಮೃದ್ಧಿ ಎಂಬುದು ದೊಡ್ಡ ಸುಳ್ಳು. ಆದರೆ, ಅದನ್ನೇ ನಿಜ ಎಂದುಕೊಂಡಿದ್ದೇವೆ. ನಮ್ಮ ಶಾಲೆಗಳಲ್ಲಿ ಬಾಯಿಪಾಠದ ಸಂಸ್ಕೃತಿ ತೊಲಗಬೇಕು, ವಿದ್ಯಾರ್ಥಿಗಳನ್ನು ವಿವೇಚನಾಶಾಲಿಗಳನ್ನಾಗಿಸಬೇಕು ಎಂದರು.

ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನೆಲದ ಮಕ್ಕಳಿಗೆ ಕೆಲಸ ಎಂಬ ಅಭಿಯಾನವನ್ನು ದಶಕಗಳ ಹಿಂದೆಯೇ ಆರಂಭಿಸಲಾಗಿತ್ತು. ಈಗ ರಾಜ್ಯ ಸರ್ಕಾರ ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಮೀಸಲು ಕಲ್ಪಿಸಲು ಮುಂದಾಗಿದೆ. ಬಂಡವಾಳವೇ ಇಲ್ಲದ ಕನ್ನಡ ಪಕ್ಷ ನಗರಸಭೆಯಲ್ಲಿ ಬಲಿಷ್ಠವಾಗಿತ್ತು. ಈಗ ಜನಪ್ರತಿನಿಧಿಗಳು, ಸರ್ಕಾರಿ ನೌಕರ ವರ್ಗ, ಜನತೆಯ ನಡುವೆ ಮುರಿದು ಬಿದ್ದ ಸಂಪರ್ಕ ಸೇತುವೆಗಳನ್ನು ಎಲ್ಲರೂ ದುರಸ್ತಿ ಮಾಡಬೇಕಾಗಿದೆ – ಕೆ.ವೆಂಕಟೇಶ್, ಕನ್ನಡ ಜಾಗೃತ ಪರಿಷತ್ ಅಧ್ಯಕ್ಷ

ಅನುಮಾನ ಬೇಡ ಇದು ಅವರದ್ದೇ ಕೈವಾಡ: ಶೇಖ್ ಹಸೀನಾ ಪುತ್ರ

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…