ಏಷ್ಯಾ ಖಂಡದ ಧಾರ್ಮಿಕ ಕ್ಷೇತ್ರಗಳ ಮೇಲೆ ಕೊರೊನಾ ಕರಿನೆರಳು: ಫಿಲಿಪೈನ್ಸ್​​ನಲ್ಲಿ ಒಬ್ಬರಿಗೊಬ್ಬರು ಶೇಕ್​ಹ್ಯಾಂಡ್​ ಮಾಡುವಂತಿಲ್ಲ!

ಮನಿಲಾ: ಚೀನಾದಲ್ಲಿ ಮೃತ್ಯುಕೂಪ ನಿರ್ಮಿಸಿರುವ ಮಾರಕ ಕೊರೊನಾ ವೈರಸ್(COVID-19)​ ವಿಶ್ವದಾದ್ಯಂತ ಇನ್ನಿಲ್ಲದ ಭೀತಿಯನ್ನು ಸೃಷ್ಟಿ ಮಾಡಿದೆ. ಇದೀಗ ಕೊರೊನಾ ಕರಿನೆರಳು ಏಷ್ಯಾ ಖಂಡದ ಅನೇಕ ಧಾರ್ಮಿಕ ಕ್ಷೇತ್ರಗಳ ಮೇಲೆ ಬಿದ್ದಿದ್ದು, ಶೇಕ್​ಹ್ಯಾಂಡ್ ಸೇರಿದಂತೆ ಅನೇಕ ನಿರ್ಬಂಧಗಳೊಂದಿಗೆ ಕೆಲವು ಭಾಗಗಳಲ್ಲಿ ಮಂದಿರ, ಮಸೀದಿ ಹಾಗೂ ಚರ್ಚ್​ಗಳನ್ನು ಮುಚ್ಚಲಾಗಿದೆ.

ಸದಾ ಜನರಿಂದ ತುಂಬಿ ತುಳುಕುತ್ತಿದ್ದ ಫಿಲಿಪೈನ್ಸ್​ನ ಪ್ರಖ್ಯಾತ ಕ್ಯಾಥೋಲಿಕ್​ ಚರ್ಚ್​ ಅಕ್ಷರಶಃ ಸ್ತಬ್ಧವಾಗಿದೆ. ಕೊರೊನಾ ಹರಡದಂತೆ ತಡೆಯಲು ಪಾರ್ಥನೆಗಾಗಿ ಚರ್ಚ್​ಗೆ ಆಗಮಿಸುವರು ಒಬ್ಬರಿಗೊಬ್ಬರು ಶೇಕ್​ಹ್ಯಾಂಡ್​ ಮಾಡುವುದಾಗಲಿ ಅಥವಾ ಸ್ಪರ್ಶಿಸದಂತೆ ಅಲ್ಲಿನ ಬಿಷಪ್​ ಮನವಿ ಮಾಡಿದ್ದಾರೆ.

ಇನ್ನು ಚೀನಾದ ಹಾಂಗ್​ಕಾಂಗ್​ನಲ್ಲೂ ಇದನ್ನೇ ಅನುಸರಿಸಲಾಗಿದೆ. ಅಲ್ಲದೆ, ಸುಮಾರು ಎರಡು ವಾರಗಳು ಕಾಲ ಸಾರ್ವಜನಿಕವಾಗಿ ಒಟ್ಟಾಗಿ ಸೇರುವುದನ್ನು ನಿಷೇಧಿಸಲಾಗಿದ್ದು, ಚರ್ಚ್​ಗೆ ಆಗಮಿಸುವ ಬದಲು ಆನ್​ಲೈನ್​ ಮೂಲಕವೇ ವೀಕ್ಷಿಸಿ ಎಂದು ಇಲ್ಲಿನ ಕ್ಯಾಥೋಲಿಕ್​ ಚರ್ಚ್​ನ ಬಿಷಪ್​ ಕಾರ್ಡಿನಲ್​ ಜಾನ್​ ಹಾನ್​ ಟಾಂಗ್​ ತಿಳಿಸಿದ್ದಾರೆ.

ಚೀನಾದ ಮುಖ್ಯ ಪ್ರದೇಶಗಳಲ್ಲಿ ಬೌದ್ಧ ಮಂದಿರ, ಕ್ರಿಶ್ಚಿಯನ್​ ಚರ್ಚ್​ ಮತ್ತು ಮುಸ್ಲಿಂ ಮಸೀದಿಗಳನ್ನು ಜನವರಿ 29ರಿಂದಲೂ ಮುಚ್ಚಲಾಗಿದೆ. ಧಾರ್ಮಿಕ ಆಚರಣೆ ವೇಳೆ ಜನರು ಒಟ್ಟಾಗಿ ಒಂದೆಡೆ ಸೇರುವುದರಿಂದ ವೈರಸ್​ ಹೆಚ್ಚಾಗಿ ಹರಡಲಿದೆ ಎಂಬ ಮುಂಜಾಗ್ರತ ಕ್ರಮವಾಗಿ ಈ ರೀತಿ ಮಾಡಲಾಗಿದೆ.

ಈ ರೀತಿಯ ನಿರ್ಬಂಧದಿಂದಾಗಿ ಏಷ್ಯಾ ಖಂಡದ ಅನೇಕ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಭಾರಿ ಕ್ಷೀಣಿಸಿದೆ. ಅದಕ್ಕೆ ಉದಾಹರಣೆಯಾಗಿ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಜಪಾನ್​ನ ಬೌದ್ಧ ಮಂದಿರ ಮತ್ತು ಶಿಂಟೋ ದೇವಾಲಯಗಳಿಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗಿದೆ. ಅಲ್ಲದೆ, ಫಿಲಿಪೈನ್ಸ್​, ಥಾಯ್ಲೆಂಡ್​, ದಕ್ಷಿಣ ಕೊರಿಯಾ, ಸಿಂಗಪೊರ್​ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಧಾರ್ಮಿಕ ಕ್ಷೇತ್ರಗಳ ಚಟುವಟಿಕೆಗೆ ಕೊರೊನಾ ಬ್ರೇಕ್​ ಹಾಕಿದೆ.

ಧಾರ್ಮಿಕ ಕ್ಷೇತ್ರಗಳು ಮಾತ್ರವಲ್ಲದೆ, ಶಾಪಿಂಗ್​ ಮಾಲ್​ಗಳು, ಸಿನಿಮಾ ಥಿಯೇಟರ್​ಗಳು ಮತ್ತು ಪಾರ್ಕ್​ಗಳಲ್ಲಿಯೂ ಜನರು ಒಟ್ಟಾಗಿ ಸೇರದಂತೆ ನಿರ್ಬಂಧ ಹೇರಲಾಗಿದೆ. ಒಟ್ಟಾರೆ, ಕೊರೊನಾ ಚೀನಾ ಸೇರಿದಂತೆ ಏಷ್ಯಾ ಖಂಡದ ಬಹುತೇಕ ಕಡೆ ಅಘೋಷಿತ ಬಂದ್​ ವಾತಾವರಣ ನಿರ್ಮಾಣ ಮಾಡಿದೆ. (ಏಜೆನ್ಸೀಸ್​)

Share This Article

A. P. J. Abdul Kalam ಅವರ ಈ ಟ್ರಿಕ್ಸ್​​ಗಳನ್ನು ವಿದ್ಯಾರ್ಥಿಗಳು ಓದುವಾಗ ಮಿಸ್​ ಮಾಡ್ದೆ ಅನುಸರಿಸಿ

ಮಿಸೈಲ್ ಮ್ಯಾನ್ ಎಂದೇ ಖ್ಯಾತರಾಗಿರುವ ಭಾರತದ ಮಹಾನ್ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್…

ಹೊಳೆಯುವ ಮುತ್ತಿನಂತಹ ಹಲ್ಲುಗಳಿಗೆ ಈ ಟಿಪ್ಸ್ ಫಾಲೋ ಮಾಡಿ..! Home Remedies

ಬೆಂಗಳೂರು: ಪ್ರತಿಯೊಬ್ಬರೂ ತಮ್ಮ ಹಲ್ಲುಗಳು ಮುತ್ತಿನಂತೆ ಬಿಳಿ ಮತ್ತು ಹೊಳೆಯುವಂತೆ ಕಾಣಬೇಕೆಂದು ಬಯಸುತ್ತಾರೆ. ಏಕೆಂದರೆ.. ನಮ್ಮ…

ಮೊದಲು ತಲೆಗೆ ನೀರು ಹಾಕ್ತೀರಾ? ಸ್ನಾನ ಮಾಡುವ ಸರಿಯಾದ ವಿಧಾನ ಯಾವುದು? ಇಲ್ಲಿದೆ ಉಪಯುಕ್ತ ಮಾಹಿತಿ | Bathing

Bathing: ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು…