ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿಶ್ವ ವಿದ್ಯಾಲಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಮುಂದಿನ ತಿಂಗಳಿಂದ ನಿವೃತ್ತರಿಗೆ ಪಿಂಚಣಿ ನೀಡಲು ಅನುದಾನ ಇಲ್ಲ ಎಂದು ಕವಿವಿ ಪ್ರಭಾರ ಕುಲಪತಿ ಪ್ರೊ. ಜಯಶ್ರೀ ಎಸ್. ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕವಿವಿಯಲ್ಲಿ ಸುಮಾರು 1800 ಜನ ನಿವೃತ್ತರಿಗೆ ಪಿಂಚಣಿ ನೀಡಬೇಕು. ಪ್ರತಿ ತಿಂಗಳು 8 ರಿಂದ 9 ಕೋಟಿ ರೂ.ದಂತೆ ವಾರ್ಷಿಕವಾಗಿ 126 ಕೋಟಿ ರೂ. ಪಿಂಚಣಿಗೆ ಹಣ ಬೇಕಿದೆ. ಆದರೆ ಸರ್ಕಾರ ಪ್ರಸಕ್ತವಾಗಿ 70 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. ಉಳಿದ ಹಣವನ್ನು ಕವಿವಿ ಆಂತರಿಕ ಆರ್ಥಿಕ ಸಂಪನ್ಮೂಲದಿಂದ ನೀಡುವಂತೆ ಹೇಳುತ್ತಿದೆ. ಆದರೆ ಇದು ಕಷ್ಟ ಸಾಧ್ಯ. ಹೀಗಾಗಿ ಮುಂದಿನ ತಿಂಗಳಿಂದ ಪಿಂಚಣಿ ನೀಡಲು ಹಣವಿಲ್ಲ ಎಂದರು.
ಕವಿವಿ ಸಿಬ್ಬಂದಿ ವೇತನ ಎಚ್ಆರ್ಎಂಸ್ ಮೂಲಕ ಆಗುತ್ತಿದೆ. ಸರ್ಕಾರದಿಂದ ಅನುದಾನ ಸಮಯಕ್ಕೆ ಸರಿಯಾಗಿ ಸಿಗದ ಕಾರಣ ಪಿಂಚಣಿ ನೀಡುವುದು ಸೇರಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ನಮ್ಮ ವಿಶ್ವ ವಿದ್ಯಾಲಯ ಹಳೇಯದ್ದಾಗಿದ್ದರಿಂದ ನಿವೃತ್ತರ ಸಂಖ್ಯೆ ಹೆಚ್ಚಿದೆ. ಇದೇ ಸ್ಥಿತಿ ಮೈಸೂರು ವಿಶ್ವ ವಿದ್ಯಾಲಯದಲ್ಲೂ ಇದೆ. ಉಳಿದ ವಿವಿಗಳಿಗೆ ಅನುದಾನ ಕೊರತೆ ಎದುರಾಗಿಲ್ಲ ಎಂದರು.
ಬೆಳಗು ಪಠ್ಯದ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಜಯಶ್ರೀ ಎಸ್., ಈಗಾಗಲೇ ಪಠ್ಯದಲ್ಲಿನ ವಿವಾದಿತ ಪಾಠವನ್ನು ಕೈ ಬಿಡಲಾಗಿದೆ. ತಪ್ಪಿತಸ್ಥರ ಮೇಲೆ ಕ್ರಮಕ್ಕೆ ರಚಿಸಿದ ಸಮಿತಿಯಿಂದ ಸಂಬಂಧಿಸಿದವರಿಗೆ ನೋಟಿಸ್ ಸಹ ನೀಡಲಾಗಿತ್ತು. ಅವರಿಂದ ವಿವರಣೆ ಬಂದಿದ್ದು, ಮುಂದಿನ ದಿನಗಳಲ್ಲಿ ಅಗತ್ಯ ಕ್ರಮವಹಿಸಲಾಗುವುದು ಎಂದರು.
ಪಿಂಚಣಿ ನೀಡಲು ಇಲ್ಲ ಅನುದಾನ

You Might Also Like
ಬೆಣ್ಣೆಯಂತೆ ಕೊಬ್ಬು ಕರಗಬೇಕೆ; ಉತ್ತಮ ಫಲಿತಾಂಶಕ್ಕಾಗಿ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ | Health Tips
ಕೆಲವರು ಹೊರಗೆ ಊಟ ಮಾಡಿದ ನಂತರವೂ ತೆಳ್ಳಗಿರುತ್ತಾರೆ. ಯಾವುದೇ ಜಿಮ್ ಅಥವಾ ವ್ಯಾಯಾಮವನ್ನೂ ಮಾಡುವುದಿಲ್ಲ. ಏಕೆಂದರೆ…
ಶೀತ & ಜ್ವರವಿದ್ದಾಗ ಹುಳಿ ಮೊಸರು ಸೇವಿಸಬಹುದೇ?; ಇಲ್ಲಿದೆ ಉಪಯುಕ್ತ ಮಾಹಿತಿ | Health Tips
ಶೀತ ಮತ್ತು ಜ್ವರದ ಚಿಕಿತ್ಸೆಯ ಜತೆಗೆ ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಮೊಸರು ಸೇವಿಸದಿರುವುದು…
ವೇಜ್, ನಾನ್ವೆಜ್ ಖಾದ್ಯ ‘ಟೊಮ್ಯಾಟೋ’ ಇಲ್ಲದೆ ಆಗೋದೆ ಇಲ್ವಾ? ಹೆಚ್ಚು Tomato ತಿನ್ನುವ ನಿಮಗಾಗಿ ಈ ಸುದ್ದಿ!
Tomato : ನಾವು ನಮ್ಮ ದೈನಂದಿನ ಅಡುಗೆಗಳಲ್ಲಿ ಟೊಮ್ಯಾಟೋವನ್ನು ಬಳಸುತ್ತೇವೆ. ಟೊಮ್ಯಾಟೋಗಳನ್ನು ಕರಿ, ಗ್ರೇವಿ, ಸೂಪ್…