22.5 C
Bangalore
Friday, December 13, 2019

ಚಲನೆ ನಿಲ್ಲಿಸಿದ ಚಕ್ರಾ ನದಿ!

Latest News

ಅಜ್ಞಾನದ ಕತ್ತಲೆ ಕಳೆಯುವುದೇ ಕಾರ್ತಿಕೋತ್ಸವ

ಶಿರಹಟ್ಟಿ: ಅಂತರಂಗದ (ಅಜ್ಞಾನದ) ಕತ್ತಲೆ ಹೋಗಲಾಡಿಸಿ ಜ್ಞಾನದ ಅರಿವು ಪಡೆಯುವುದೇ ಕಾರ್ತಿಕೋತ್ಸವದ ಮೂಲ ಉದ್ದೇಶವಾಗಿದೆ ಎಂದು ವರವಿ ಮಠದ ಶ್ರೀ ವಿರೂಪಾಕ್ಷ ಸ್ವಾಮಿಗಳು...

ಜಾತ್ರೆಯ ಯಶಸ್ಸಿಗೆ ಸಹಕರಿಸಿ

ಮುಂಡರಗಿ: ಮನುಷ್ಯನು ಬದುಕಿನಲ್ಲಿ ಸೇವಾ ಮನೋಭಾವ ಹೊಂದಿ ಉತ್ತಮ ವಿಚಾರ ಚಿಂತನೆಗಳ ಮೂಲಕ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಜಗದ್ಗುರು ಅನ್ನದಾನೀಶ್ವರ...

ಅಧ್ಯಾತ್ಮ ಸಾರ್ವತ್ರಿಕರಣವಾಗಲಿ

ಗದಗ: ಎಲ್ಲರಲ್ಲಿಯೂ ದೇವರಿದ್ದಾನೆ ಜತೆಗೆ ದೈವತ್ವದ ಕಿಡಿ ಇದೆ. ಎಲ್ಲರೂ ಒಂದೇ ಎಂದು ತಿಳಿಯಬೇಕು, ವಿಭಿನ್ನತೆಯಲ್ಲಿ ಏಕತೆ ಕಾಣುವುದೇ ನಿಜವಾದ ಧರ್ಮ. ಅಧ್ಯಾತ್ಮ...

ಮಾನವರು ದ್ವೇಷ, ಅಸೂಯೆ ಬಿಡಲಿ

ಚಾಮರಾಜನಗರ: ಶ್ರೀಕೃಷ್ಣ ಪ್ರತಿಷ್ಠಾನದಿಂದ ಮೊಸರು ಮಡಕೆ ಒಡೆಯುವ ಉತ್ಸವದ ಅಂಗವಾಗಿ ಶುಕ್ರವಾರ ನಗರದ ಚೆನ್ನಿಪುರಮೋಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಹೂ...

ಅರಣ್ಯ ರಕ್ಷಣೆಗೆ ಡ್ರೋನ್ ಕಣ್ಗಾವಲು

ಗುಂಡ್ಲುಪೇಟೆ: ಮುಂದಿನ ಬೇಸಿಗೆಯಲ್ಲಿ ಬಂಡೀಪುರವನ್ನು ಬೆಂಕಿಯಿಂದ ರಕ್ಷಿಸಲು ಅರಣ್ಯ ಇಲಾಖೆ ಸಂಪೂರ್ಣವಾಗಿ ಸಜ್ಜಾಗಿದೆ. ಬೇಸಿಗೆಯಲ್ಲಿ ಬೆಂಕಿ ಹರಡುವುದನ್ನು ಕೂಡಲೇ ಗುರುತಿಸಲು ಇದೇ ಮೊದಲ ಬಾರಿಗೆ...

ಶ್ರೀಪತಿ ಹೆಗಡೆ ಹಕ್ಲಾಡಿ ಶೆಟ್ಟಿಪಾಲು
ಸ್ವಾಭಾವಿಕವಾಗಿ ಹರಿಯುವ ನದಿ ಪಥ ಬಲಿಸಿದರೆ, ಅಣೆಕಟ್ಟು ಕಟ್ಟಿ ನೀರು ತಡೆ ಹಿಡಿದರೆ ಏನೆಲ್ಲ ಅನಾಹುತ ಆಗುತ್ತದೆ ಎಂಬುದಕ್ಕೆ ಚಕ್ರಾ ನದಿ ಸಾಕ್ಷಿ! ನದಿ ಚಲನೆ ನಿಲ್ಲಿಸಿದ್ದರಿಂದ ಮೀನುಗಳು ಒದ್ದಾಡಿ ಸಾಯುತ್ತಿದ್ದರೆ, ನದಿ ಪಾತ್ರದ ಸೂಕ್ಷ್ಮಜೀವಿಗಳ ಮಾರಣಹೋಮವಾಗುತ್ತಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಹುಟ್ಟಿ ಗಂಗೊಳ್ಳಿ ಬಳಿ ಸಮುದ್ರ ಸೇರುವ ಚಕ್ರಾ ನದಿ ಬೇಸಿಗೆಯಲ್ಲಿ ನೀರಿನ ಹರಿವು ನಿಲ್ಲಿಸಲು ಸಾವೆಹಕ್ಲು ಅಣೆಕಟ್ಟು ಮತ್ತು ಯಂತ್ರಗಳ ಮೂಲಕ ಅತಿಯಾಗಿ ನೀರೆತ್ತುವುದು ಕಾರಣ. ಮೀನುಗಳು ಸಾಯುತ್ತಿದ್ದು, ನದಿ ಪಾತ್ರ ಬೆಂಗಾಡಾಗಿ ಸೂಕ್ಷ್ಮಜೀವಿಗಳು ಸಾಯುತ್ತಿವೆ. ನದಿ ಪಾತ್ರದಲ್ಲಿ ಸಂಚಾರ ಮಾಡುವಾಗ ಸತ್ತ ಮೀನುಗಳ ಗಬ್ಬುನಾಥ ಮೂಗಿಗೆ ಬಡಿಯುತ್ತದೆ.

ಸಾವೆಹಕ್ಲು ಬಳಿ ಚಕ್ರಾನದಿಗೆ ಅಣೆಕಟ್ಟು ಕಟ್ಟಿ, ಲಿಂಗನಮಕ್ಕಿ ಅಣೆಕಟ್ಟಿಗೆ ನೀರು ಹರಿಸಲು ಮುಂದಾಗಿದ್ದು ಚಕ್ರಾ ನದಿ ಬತ್ತಲು ಪ್ರಮುಖ ಕಾರಣ! ಹಿಂದೆ ಹೊಳೆಯಲ್ಲಿ ನೀರು ಸರಾಗ ಹರಿಯುತ್ತಿದ್ದು, ಮಳೆಗಾಲದಲ್ಲಿ ನೀರಿನ ಅಬ್ಬರವಿದ್ದರೆ, ಬೇಸಿಗೆಯಲ್ಲಿ ಹರಿವು ಕ್ಷೀಣಿಸಿದರೂ ಹರಿಯುವಿಕೆ ನಿಂತಿರಲಿಲ್ಲ. ಸೌಪರ್ಣಿಕಾ, ಚಕ್ರಾ, ವಾರಾಹಿ ನದಿಗಳಿಗೆ ಅಣೆಕಟ್ಟು ಕಟ್ಟಿದ ನಂತರ ನದಿಗಳ ಹರಿವು ಗಣನೀಯವಾಗಿ ಕ್ಷೀಣಿಸಿದೆ. ನದಿಗಳಿಗೆ ಅಲ್ಲಲ್ಲಿ ಕಿಂಡಿ ಅಣೆಕಟ್ಟು ಕಟ್ಟಿದ್ದರಿಂದ ಸಮುದ್ರ ಸೇರಬೇಕಿದ್ದ ನದಿ ಹರಿಯುವುದನ್ನೇ ನಿಲ್ಲಿಸಿದೆ. ಸಾವೆಹಕ್ಲು ಅಣೆಕಟ್ಟು ಬುಡದಲ್ಲಿ ಸ್ವಯಂಚಾಲಿತ ಗೇಟ್ ಅಳವಡಿಸಿ, ನೀರು ಹರಿಯಬಿಟ್ಟರೆ ಚಕ್ರಾ ನದಿ ಚಲನೆ ನಿಲ್ಲಿಸುವುದಿಲ್ಲ. ಹೊಳೆಯಲ್ಲಿ ನೀರು ಹರಿಯುವುದರಿಂದ ಪರಿಸರದ ಬಾವಿಗಳಲ್ಲಿ ನೀರಿನ ಮಟ್ಟ ಏರಿ ನೀರಿನ ಸಮಸ್ಯೆ ಆಗುವುದಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯ.

ಚಕ್ರಾ ನದಿ ನೀರು ಹರಿವು ನಿಲ್ಲಿಸಿದ ಅನಂತರ ನೀರು ಬಳಕೆದಾರರ ವೇದಿಕೆ ಹುಟ್ಟಿಕೊಂಡಿದ್ದು, ಸಾವೆಹಕ್ಲು ಅಣೆಕಟ್ಟಿಗೆ ಸ್ವಯಂಚಾಲಿತ ಗೇಟ್ ಅಳವಡಿಸಿ, ಬೇಸಿಗೆಯಲ್ಲಿ ನೀರು ಹರಿಸುವಂತೆ ಹೋರಾಟ ಸಮಿತಿ ಮಾಡಿಕೊಂಡ ಮನವಿಗೆ ಸರ್ಕಾರ ಸ್ಪಂದಿಸಿಲ್ಲ. ಜನಪ್ರತಿನಿಧಿಗಳು ಕೂಡ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಅಲವತ್ತುಕೊಳ್ಳುತ್ತಿದ್ದಾರೆ.

ಚಕ್ರಾ ನದಿಗೆ ಹಿಂದೆ ಅಲ್ಲಲ್ಲಿ ಸ್ವಾಭಾವಿಕ ಕಟ್ಟ ಕಟ್ಟಿ ನೀರು ತೆಗೆದು ಕೃಷಿ ಮಾಡುತ್ತಿದ್ದರು. ಆದರೆ ಈಗ ರಸ್ತೆ ಬಿಟ್ಟು ಬೆಟ್ಟ ಗುಡ್ಡ ಹಾಡಿಯಲ್ಲೂ ಅಡಕೆ ಕೃಷಿಯಿದ್ದು, ನೀರಿನ ಬಳಕೆ ಕೂಡ ಹೆಚ್ಚಿ ನದಿ ಹರಿಯುವುದನ್ನು ನಿಲ್ಲಿಸುತ್ತಿದೆ. ಚಕ್ರಾ ನದಿ ಮೇಲಿಂದ ಕೆಳಗಿನವರಗೆ 60ರಿಂದ 70 ನೀರೆತ್ತುವ ಮೋಟಾರ್ ಅಳವಡಿಸಿರುವುದು ನದಿ ಬತ್ತಲು ಮತ್ತೊಂದು ಕಾರಣ. ಹೊಳೆಯಿಂದ ನೀರೆತ್ತುವ ಯಂತ್ರಗಳ ವಿದ್ಯುತ್ ಸಂಪರ್ಕ ಕಡಿತ ಮಾಡುವಂತೆ ಇಲಾಖೆ ಸುತ್ತೋಲೆ ಹೊರಡಿಸಿದ್ದರೂ ಚಕ್ರ ನದಿ ನೀರೆತ್ತುವ ಮೋಟಾರ್ ಸ್ವರ ನಿಲ್ಲಿಸದಿರುವುದು ವಿಪರ‌್ಯಾಸ.
ಸ್ವಾಭಾವಿಕ ಕಟ್ಟಗಳು ಕಣ್ಮರೆ: ಘಟ್ಟದಿಂದ ಕೆಳಕ್ಕೆ ಇಳಿಯುವ ಚಕ್ರಾ ನದಿ ಹರಿದು ಅರಬ್ಬಿ ಸಮುದ್ರ ಸೇರುವ ಮಧ್ಯೆ ಹಿಂದೆ ಅಲ್ಲಲ್ಲಿ ಸ್ವಾಭಾವಿಕ ಕಟ್ಟಗಳನ್ನು ಕಟ್ಟಿ ಕೃಷಿಗೆ ನೀರು ಬಳಸಲಾಗುತ್ತಿತ್ತು. ಚಕ್ರಾ ನದಿ 52 ಕಿ.ಮೀ. ಹರಿದು, 336 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುತ್ತದೆ. ಸ್ವಾಭಾವಿಕ ಕಟ್ಟಗಳ ಬದಲು ಕಿಂಡಿ ಆಣೆಕಟ್ಟು ಆರಂಭಿಸಿದ ಅನಂತರ ನದಿಗಳ ಅಸ್ತಿತ್ವಕ್ಕೆ ಕುತ್ತು ಬರುತ್ತಿದೆ. ಚಕ್ರಾ ನದಿ ಹರಿವು ನಿಲ್ಲಿಸಲು ಸಾವೆಹಕ್ಲು ಕಿಂಡಿ ಅಣೆಕಟ್ಟು ಕಾರಣವಾಗಿದ್ದರೂ, ಮತ್ತೆ ಐದು ಕಿಂಡಿ ಅಣೆಕಟ್ಟು ಕಟ್ಟಲಾಗುತ್ತಿದೆ! ಶೆಟ್ಟಿಪಾಲಿನಲ್ಲಿ ಕೋಟಿ ಲೆಕ್ಕದಲ್ಲಿ ಅನುದಾನ ಸುರಿದು ಕಿಂಡಿ ಅಣೆಕಟ್ಟು ಕಟ್ಟಿದ್ದು, ಅಲ್ಲಿನ ದೊಡ್ಡ ಹಿಡುವಳಿದಾರರಿಗೆ ಅನುಕೂಲ ಮಾಡಿಕೊಟ್ಟಿದ್ದು ಬಿಟ್ಟರೆ ಮತ್ತೇನು ಆಗಿಲ್ಲ.

ಸಾವೆಹಕ್ಲು ಬಳಿ ಅಣೆಕಟ್ಟು ಕಟ್ಟಿ ನೀರು ಡೈವರ್ಶನ್ ಮಾಡಿದ ಅನಂತರ ಹಳ್ಳಿಹೊಳೆಯಲ್ಲಿ ನೀರಿನ ಸಮಸ್ಯೆ ಉದ್ಭವಿಸಿದೆ. ಈಗ ಕೊಳವೆಬಾವಿ ತೆಗೆಯಲು ಒಪ್ಪಿಗೆ ಕೊಟ್ಟಿದ್ದರೂ 10ರಲ್ಲಿ ಎಂಟು ಬಾವಿ ಫೇಲ್. ಒಂದೆರಡು ಬಾವಿಯಲ್ಲಿ ನೀರು ಬಂದರೂ ಕೃಷಿಗೆ ಸಾಕಾಗುವಷ್ಟು ನೀರು ಸಿಗುವುದಿಲ್ಲ. ಹೊಳೆ ಬತ್ತುವುದರಿಂದ ಅಂತರ್ಜಲ ಮಟ್ಟವೂ ಕುಸಿಯುತ್ತಿದೆ. ಕೆಲವು ಕಡೆ ಕುಡಿಯುವುದಕ್ಕೂ ನೀರು ಸಿಗುವುದಿಲ್ಲ. ಹೊಳೆಯಲ್ಲಿ ನೀರು ಬತ್ತುತ್ತಿರುವುದರಿಂದ ಜಲಚರಗಳು, ಸೂಕ್ಷ್ಮಜೀವಿಗಳು ನಾಶವಾಗುತ್ತಿವೆ.
ವಿಜಯ ಕುಮಾರ್ ಚಕ್ರಾ ಮೈದಾನ, ಹಳ್ಳಿಹೊಳೆ

ನದಿ ಹರಿವು ನಿಲ್ಲಿಸಿರುವುದಕ್ಕೆ ಸಾವೆಹಕ್ಲು ಅಣೆಕಟ್ಟು ಕಾರಣ. ಇಲ್ಲಿಂದ ಸ್ವಯಂಚಾಲಿತ ಗೇಟ್ ಅಳವಡಿಸಿ ವಾರಕ್ಕೊಮ್ಮೆ ನೀರು ಬಿಡುವ ಮೂಲಕ ನದಿ ಹರಿವಿಗೆ ಅವಕಾಶ ಮಾಡಿಕೊಟ್ಟರೆ ಸಮಸ್ಯೆ ಪರಿಹಾರ ಆಗುತ್ತದೆ. ಸಾವೆಹಕ್ಲು ಅಣೆಕಟ್ಟಿಗೆ ಬಾಗಿಲು ಅಳವಡಿಸಿ, ನೀರು ಹರಿಬಿಟ್ಟರೆ ಹಣದ ಖರ್ಚು ಕಡಿಮೆಯಾಗಿ ಪರಿಸರಕ್ಕೂ ಆಗುವ ಹಾನಿ ತಪ್ಪುತ್ತದೆ. ನದಿ ಹರಿವು ಆರಂಭಿಸಿದರೆ ನೀರಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಶ್ರೀಕರ ನಾಯ್ಕ ಸದಸ್ಯ, ಗ್ರಾಮ ಪಂಚಾಯಿತಿ ಹಳ್ಳಿಹೊಳೆ.
ವಾರಾಹಿ ಯೋಜನೆ ಮೂಲಕ ಚಕ್ರಾ ನದಿಗೆ ನೀರು ಹರಿಸುವ ಬಗ್ಗೆ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿ ಜಲಾನಯನ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಕುಡಿಯುವ ನೀರು ಸಮಸ್ಯೆ ಇರುವಲ್ಲಿ ಟ್ಯಾಂಕರ್ ಮೂಲಕ ಪೂರೈಕೆ ಮಾಡಲಾಗುತ್ತದೆ. ಚಕ್ರಾ ನದಿಗೆ ಈಗಾಗಲೇ ಬರೇಗುಂಡಿ, ಕಬ್ಬಿನಾಲೆ, ಹನ್ಕಿ ಕೆರ್ಕಾಡು ಬಳಿ ಕಿಂಡಿ ಅಣೆಕಟ್ಟು ಕಟ್ಟಲಾಗಿದೆ. ವಾರಾಹಿ ಮೂಲಕ ಚಕ್ರಾಗೆ ನೀರು ಹರಿಸುವ ಯೋಜನೆ ಕಾರ‌್ಯರೂಪಕ್ಕೆ ಬಂದರೆ ಸಮಸ್ಯೆ ಪರಿಹಾರ ಆಗಲಿದೆ.
ಸುದರ್ಶನ್ ಎಸ್ ಪಿಡಿಒ, ಹಳ್ಳಿಹೊಳೆ ಗ್ರಾಮ ಪಂಚಾಯಿತಿ

Stay connected

278,748FansLike
588FollowersFollow
626,000SubscribersSubscribe

ವಿಡಿಯೋ ನ್ಯೂಸ್

VIDEO| ಬರೋಬ್ಬರಿ 20 ಕೆ.ಜಿ. ತೂಕದ ಹೆಬ್ಬಾವು ಸೆರೆಹಿಡಿದ ಮಹಿಳೆ:...

ತಿರುವನಂತಪುರ: ಮಹಿಳೆಯೊಬ್ಬರು ಸುಮಾರು 20 ಕೆ.ಜಿ. ತೂಗುವ ಬೃಹದಾಕಾರದ ಹೆಬ್ಬಾವನ್ನು ಸೆರೆಹಿಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮೆಚ್ಚುಗೆ ಮಹಾಪೂರ ಹರಿದುಬಂದಿದೆ. ವಿಡಿಯೋದಲ್ಲಿರುವ ಮಹಿಳೆಯನ್ನು ಕೊಚ್ಚಿ ಮೂಲದ ವನ್ಯಜೀವಿ ಸಂರಕ್ಷಕಿ...

ಅತ್ಯಾಚಾರ ಪ್ರಕರಣ ಕುರಿತು ರಾಹುಲ್​ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ಗದ್ದಲ:...

ನವದೆಹಲಿ: ಅತ್ಯಾಚಾರ ಪ್ರಕರಣ ಕುರಿತು ಗುರುವಾರ ಜಾರ್ಖಂಡ್​ ಸಮಾವೇಶದಲ್ಲಿ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಹಾಗೂ ವಯನಾಡಿನ ಹಾಲಿ ಸಂಸದ ರಾಹುಲ್​ ಗಾಂಧಿ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ....

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....