ನಮ್ಮ ಕುಟುಂಬ, ನಮ್ಮ ಪಕ್ಷಕ್ಕೆ ಭಯದ ಮಾತೇ ಇಲ್ಲ : ಅನಿತಾ ಕುಮಾರಸ್ವಾಮಿ

ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಸೋಲು ಕರ್ನಾಟಕದ ಸೋಲು ಎಂದು ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ದೇವೇಗೌಡ ಮತ್ತು ನಿಖಿಲ್​​ ಕುಮಾರಸ್ವಾಮಿ ಸೋಲಿನ ಬಗ್ಗೆ ಮಾತನಾಡಿದ ಅವರು ದೇವೇಗೌಡರ ಸೋಲು ಸ್ವಾಭಿಮಾನದ ಸೋಲಿನಿಂದ ನಮಗೆಲ್ಲಾ ಬಹಳ ನೋವುಂಟಾಗಿದೆ. ಹೋರಾಟದ ಬದುಕಿನ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ ಮಾನ್ಯ ದೇವೇಗೌಡರು ಕಾವೇರಿ ಹೋರಾಟ ಸೇರಿ ಹಲವು ಹೋರಾಟಗಳಿಗೆ ಜೀವ ತುಂಬಿ ಛಲದಂಕಮಲ್ಲನಂತೆ ಹೋರಾಟದಲ್ಲೂ ಅಜೇಯರಾಗಿ ಉಳಿದಿದ್ದಾರೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ರಾಜಕಾರಣದ ಸ್ಥಾನಮಾನ ಸೃಷ್ಟಿಸಿದ ಮಹಾನುಭಾವ. ಸ್ತ್ರೀ ಸಬಲೀಕರಣಕ್ಕೆ ಮಹಿಳಾ ಮೀಸಲಾತಿಗೆ ಮುನ್ನುಡಿ ಬರೆದ ಸಮಾಜಮುಖಿ‌ ಚಿಂತಕರಾದ ಅವರನ್ನು ಇಳಿವಯಸ್ಸಿನಲ್ಲಿ ಸೋಲಿಸುವ ಮೂಲಕ ಕೆಲವರು ವಿಕೃತಾನಂದ ಅನುಭವಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ದೇವೇಗೌಡರು ನನ್ನ ಮಾವನವರಾಗಿರುವುದಕ್ಕೆ ನಾನು ಈ ಮಾತುಗಳನ್ನು ಹೇಳುತ್ತಿಲ್ಲ. ದೆಹಲಿಯ ಲೋಕಸಭೆಯಲ್ಲಿ ಕನ್ನಡಿಗರ ಪರವಾದ ಕಹಳೆ ಮೊಳಗಿಸುತ್ತಿದ್ದ ಅಗ್ರಪಂಕ್ತಿಯ ನಾಯಕ ನಮ್ಮ ದೇವೇಗೌಡರು ಎಂದು ಹೇಳಿಕೊಳ್ಳುವುದೇ ಕನ್ನಡಿಗರ ಹೆಮ್ಮೆ. ಆದರೆ ಇಂತಹ ಧೀಮಂತ ನಾಯಕನನ್ನು ಸೋಲಿಸಿರುವುದು ಕನ್ನಡಿಗರಿಗೆ ದೊಡ್ಡ ಅಪಮಾನ ಅಂತ ಹೇಳುವುದಕ್ಕೆ ನಾನು ಬಯಸುತ್ತೇನೆ. ಅವರ ಸೋಲಿನಿಂದ ನಾನು ವೈಯುಕ್ತಿಕವಾಗಿ ಹೃದಯಂತರಾಳದ ನೋವನ್ನು ಅನುಭವಿಸುತ್ತಿದ್ದೇನೆ. ಇಂತಹ ಇಳಿವಯಸ್ಸಿನಲ್ಲಿ ಸನ್ಮಾನ್ಯರಿಗೆ ಸೋಲಾಗಬಾರದಿತ್ತು. ಸೋಲಿನಿಂದ ಅವರು ಅಧೀರರಾಗಿಲ್ಲ. ನಮ್ಮ ಕುಟುಂಬ ಸೋಲು-ಗೆಲುವಿನ ಏರಿಳಿತಗಳನ್ನು ಕಂಡಿದೆ. ಸೋಲಿನಿಂದ ಕುಗ್ಗುವ ಜಾಯಮಾನ ನಮ್ಮ ಕುಟುಂಬದಲ್ಲಿ ಇಲ್ಲ ಎಂದು ಸೋಲು-ಗೆಲುವಿನ ಬಗ್ಗೆ ಅನಿತಾ ಧೈರ್ಯವಾಗಿ ಮಾತನಾಡಿದ್ದಾರೆ.

ಮುಖ್ಯ ಮಂತ್ರಿ ಕುಮಾರಸ್ವಾಮಿ ಬಗ್ಗೆ ಮಾತನಾಡಿದ ಅವರು ರೈತರ ಬದುಕು ಹಸನಾಗುವಂತೆ ಮಾಡಲು ಅವಿರತ ಶ್ರಮ ಪಟ್ಟವರು ಎಚ್.ಡಿ. ಕುಮಾರಸ್ವಾಮಿಯವರು. ಸರಳತೆಯಿಂದಲೇ ಜಾತ್ಯಾತೀತವಾಗಿ ಪಕ್ಷಾತೀತವಾಗಿ ರೈತರ ಸಾಲ ಮನ್ನಾ ಮಾಡುವ ಮೂಲಕ ಸದಾ ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡುವ ಕುಮಾರಸ್ವಾಮಿ ಅವರಿಗೂ ಅನ್ಯಾಯವಾಗಿದೆ. ನಿಖಿಲ್​​ ಅವರನ್ನು ಸೋಲಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಯನ್ನು ಜನ ತಿರಸ್ಕರಿಸಿದ್ದಾರೆ. ಧರ್ಮ-ಅಧರ್ಮದ ಯುದ್ದದಲ್ಲಿ “ಅಧರ್ಮ” ಗೆದ್ದಿದೆ ಎಂದು ನಾನು ಬೇಸರದಿಂದ ಹೇಳುತ್ತೇನೆ ಎಂದಿದ್ದಾರೆ.

ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಬೇಕೆಂದು ಹಲವರು ಪ್ರಯತ್ನ ಪಟ್ಟು ಅವರುಗಳೇ ಹೆಸರಿಲ್ಲದಂತಾಗಿದ್ದಾರೆ. ದೇವೇಗೌಡರ ಸೋಲು, ನಿಖಿಲ್ ಸೋಲಿನಿಂದ ನಾವುಗಳು ಅಧೀರರಾಗಿಲ್ಲ. ಕಾರ್ಯಕರ್ತರು ಜನಗಳ ನಡುವೆ ಇದ್ದುಕೊಂಡು ನಮ್ಮ ಕುಟುಂಬ ಮತ್ತೆ ಮತ್ತಷ್ಟು ಶಕ್ತಿಶಾಲಿಯಾಗುತ್ತದೆ. ನಮಗೆ ಹತಾಶೆ, ಭಯ, ಹಿಂಜರಿಕೆ ಇಲ್ಲವೇ ಇಲ್ಲ. ನಮಗೆ ಜನರ ಆಶೀರ್ವಾದದ ಬಲವೂ ಇದೆ, ಆತ್ಮವಿಶ್ವಾಸವೂ ಧೃಢವಾಗಿದೆ. ಆದ್ದರಿಂದ ನಮ್ಮ ಕುಟುಂಬವನ್ನು, ನಮ್ಮ ಪಕ್ಷವನ್ನು, ನಮ್ಮ ಕಾರ್ಯಕರ್ತರನ್ನು, ನಮ್ಮ ಮುಖಂಡರನ್ನು ಸೋಲಿನಿಂದ ಹಿಮ್ಮೆಟ್ಟಿಸಬಹುದೆಂಬ ಭ್ರಮೆಯಲ್ಲಿ ಇರುವವರು, ಭ್ರಮೆಯಲ್ಲಿ ಇರುವಂತಾಗುತ್ತದೆ. ಟೀಕೆ ಟಿಪ್ಪಣಿಗಳಿಗೆ ನಾವು ಉತ್ತರ ನೀಡುವ ಅವಶ್ಯಕತೆ ಇಲ್ಲ – ಜನಸೇವೆಯೇ ಜನಾರ್ದನ ಸೇವೆ ಎಂದು ತಿಳಿದಿರುವ ನಾವು ಮತ್ತೆ ರಾಜ್ಯದಲ್ಲಿ ಪ್ರಖರಿಸುತ್ತೇವೆ ಎಂದು ತಮ್ಮ ಕುಟುಂಬ ಹಾಗೂ ಪಕ್ಷದ ಬಗ್ಗೆ ಧೈರ್ಯದ ಮಾತುಗಳನ್ನು ಅನಿತಾ ಕುಮಾರಸ್ವಾಮಿ ಮಾತನಾಡಿದ್ದಾರೆ. (ದಿಗ್ವಿಜಯನ ನ್ಯೂಸ್​)

3 Replies to “ನಮ್ಮ ಕುಟುಂಬ, ನಮ್ಮ ಪಕ್ಷಕ್ಕೆ ಭಯದ ಮಾತೇ ಇಲ್ಲ : ಅನಿತಾ ಕುಮಾರಸ್ವಾಮಿ”

  1. Correction. How can Devegowdas defeat is Karnataka defeat. How can Nikhil defeat is Kumarswamy defeat. Crying politics is no place in politics. Looted karnataka treasury by unpopular scheme for garnering votes minority appeasement is another story. All grandappa to grandson in crying politics. BJPs win is nations win and there by Kannadigas win. You condemed Sumalatha abused a widow threatened workers. Hence I can say Sumalathas win is Entire Mandyas win, Sisters win

  2. Saaku sumnirama nin nataka nim family chennagi meyiri nim karyakartru gulamaratara nimgoskara sayli avrge yaav seat kodbedi maadiddunno maharaya athi aase durase namge beku annodu adakke jana hugidu bisakogirodu nim familyna inmeladru nyavagiri devwgowda nambadavrnella haalumadillava adra shapadapala thumakurge neeru bidade aataadsilva jana sariyagi buddikaalsidare ninj nin paksha uddara agalla bidu …,

    1. Corrupt rogues are shameless, as such question of being worried even if they are jailed doesn’t arise.It was my prayer that all three rogues should lose their bid to enter parliament, God was kind enough to answer my prayers partially
      Looking forward and praying for a day to see this family out of Karnataka politics once for all

Leave a Reply

Your email address will not be published. Required fields are marked *