More

    ನೂತನ ವರ್ಷಾಚರಣೆಗೆ ನಂದಿಬೆಟ್ಟಕ್ಕೆ ಪ್ರವೇಶವಿಲ್ಲ

    ಚಿಕ್ಕಬಳ್ಳಾಪುರ: ಹೊಸ ವರ್ಷಾಚರಣೆ ಹೆಸರಿನಲ್ಲಿ ಸಂಭವಿಸುವ ಅವಘಡಗಳನ್ನು ತಪ್ಪಿಸಲು ನಂದಿ ಗಿರಿಧಾಮಕ್ಕೆ (ಮಂಗಳವಾರ) ಡಿ.31ರ ಸಂಜೆ 4ರಿಂದ ಜನವರಿ 1ರ ಬೆಳಗ್ಗೆ 8ರವರೆಗೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ.

    ಬೆಳಗ್ಗೆ 8ರ ಬಳಿಕ ಪ್ರವಾಸಿಗರು ಎಂದಿನಂತೆ ಗಿರಿಧಾಮಕ್ಕೆ ತೆರಳಲು ಅವಕಾಶ ಇದೆ. ಟಿಪ್ಪು ಡ್ರಾಪ್, ಗಿರಿಧಾಮ ಮೆಟ್ಟಿಲು, ಇಳಿಜಾರು ಅರಣ್ಯ ಪ್ರದೇಶ ಸೇರಿ ಅಪಾಯಕಾರಿ ಸ್ಥಳಗಳ ನಡುವೆ ಆಗಾಗ ಆತ್ಮಹತ್ಯೆ, ಅವಘಡಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಪಾರ್ಟಿ, ಮೋಜು ಮಸ್ತಿಗೆ ಕಡಿವಾಣ ಹಾಕಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪ್ರವೇಶ ದ್ವಾರದಲ್ಲಿ ಚೆಕ್​ಪೋಸ್ಟ್ ನಿರ್ವಿುಸಿದ್ದು ಬೆಟ್ಟದಲ್ಲಿ ಪೊಲೀಸ್, ಗೃಹರಕ್ಷಕದಳ ಮತ್ತು ಪ್ರವಾಸಿ ಮಾರ್ಗದರ್ಶಿ ಸಿಬ್ಬಂದಿ ನಿಯೋಜಿಸಲಾಗಿದೆ.

    ರೆಸಾರ್ಟ್ ಬುಕಿಂಗ್ ಫುಲ್!

    ಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಿರುವುದು ಬೆಟ್ಟದ ತಪ್ಪಲಿನ ಖಾಸಗಿ ರೆಸಾರ್ಟ್​ಗಳಿಗೆ ಲಾಭದಾಯಕವಾಗಿ ಪರಿಣಮಿಸಿದೆ ಎನ್ನಲಾಗಿದೆ. ದೇವನಹಳ್ಳಿ-ಕಾರಹಳ್ಳಿ, ನಂದಿ ಕ್ರಾಸ್-ಗಿರಿಧಾಮ ಮಾರ್ಗದಲ್ಲಿ 15 ರೆಸಾರ್ಟ್​ಗಳಿವೆ. ಇವುಗಳಲ್ಲಿ ಬಹುತೇಕವು ಅನಧಿಕೃತವಾಗಿವೆ. ಯಾವುದೇ ಪರವಾನಗಿ ಪಡೆಯದೇ ವ್ಯವಹಾರ ನಡೆಸುತ್ತಿವೆ. ಇದರ ನಡುವೆ ದೇಶದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ಆಸ್ಟ್ರೇಲಿಯಾ, ಶ್ರೀಲಂಕಾ, ಇಂಗ್ಲೆಂಡ್ ಸೇರಿ ಹಲವು ರಾಷ್ಟ್ರಗಳಿಂದ ಪ್ರವಾಸಿಗರು ಆನ್​ಲೈನ್​ನಲ್ಲಿ ಬುಕ್ಕಿಂಗ್ ಮಾಡಿಕೊಂಡು ಕುಟುಂಬ ಸಮೇತ ರೆಸಾರ್ಟ್​ನಲ್ಲಿ ತಂಗುತ್ತಿದ್ದು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಎಲ್ಲವೂ ಭರ್ತಿಯಾಗಿವೆ. ಬೇಡಿಕೆ ಹೆಚ್ಚಾದಂತೆ ಶೇ.30 ಶುಲ್ಕ ಸಹ ಹೆಚ್ಚಳ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

    ಕುಡಿದು ವಾಹನ ಚಲಾಯಿಸಬೇಡಿ

    ಮದ್ಯ ಸೇವಿಸಿ ವಾಹನ ಚಲಾಯಿಸುವರ ವಿರುದ್ಧ 170 ಸ್ಥಳಗಳಲ್ಲಿ ಸಂಚಾರ ಪೊಲೀಸರು ತಪಾಸಣೆ ನಡೆಸಲಿದ್ದಾರೆ. ಕುಡಿದು ವಾಹನ ಚಲಾಯಿಸುತ್ತಿರುವುದು ಸಾಬೀತಾದರೆ ಅಂಥವರ ವಿರುದ್ಧ ಅಜಾಗರೂಕತೆ ಚಾಲನೆ ಅಡಿ ಕ್ರಿಮಿನಲ್ ಕೇಸ್ ಬೀಳಲಿದೆ. ಸಂಚಾರ ನಿಯಮ ಉಲ್ಲಂಘನೆ ಅಡಿ ವಾಹನ ಜಪ್ತಿ, ಚಾಲನಾ ಪರವಾನಗಿ ಅಮಾನತು, ಕೋರ್ಟ್ ದಂಡ ವಿಧಿಸಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts