ಕರ್ನಾಟಕ ಬಂದ್​ಗೆ ಹಲವು ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ; ಬೆಂಗಳೂರಿನಲ್ಲಿ ಮುಂದುವರಿದ ಪ್ರತಿಭಟನೆ | Karnataka Bandh

blank

Karnataka Bandh: ಕಳೆದ ತಿಂಗಳು ಮಹಾರಾಷ್ಟ್ರ ಮರಾಠಿ ಪುಂಡರು ಕನ್ನಡಿಗರ ಮೇಲೆ ನಡೆಸಿದ ಅಟ್ಟಹಾಸ, ದಬ್ಬಾಳಿಕೆಯನ್ನು ತೀವ್ರ ಖಂಡಿಸಿರುವ ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್​, ಇಂದು ರಾಜ್ಯಾದ್ಯಂತ ಬಂದ್​ಗೆ ಕರೆ ನೀಡಿದ್ದರು. ರಾಜ್ಯ ಬಂದ್​ಗೆ ಹಲವು ಕನ್ನಡ ಪರ ಸಂಘಟನೆಗಳು ಬೆಂಬಲ ಸೂಚಿಸಿದರೆ, ಇನ್ನೂ ಕೆಲವು ಸಂಘಟನೆಗಳು ಕೇವಲ ನೈತಿಕ ಬೆಂಬಲ ಮಾತ್ರ ನೀಡಿತ್ತು. ಕರುನಾಡನ್ನು ಸಂಪೂರ್ಣ ಸ್ತಬ್ದಗೊಳಿಸುವ ಮೂಲಕ ಪ್ರತಿಭಟನೆಯನ್ನು ಯಶಸ್ವಿ ಮಾಡಬೇಕು ಎಂದಿದ್ದ ವಾಟಾಳ್ ನಾಗರಾಜ್​ ಬಂದ್​ ಕರೆಗೆ ನೀರಸ ಪ್ರತಿಕ್ರಿಯೆ ಲಭಿಸಿದೆ.

ಇದನ್ನೂ ಓದಿ: ಗೋಲ್ಡ್ ಬೆಲೆಯಲ್ಲಿ ಇಳಿಕೆ! ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ನೋಡಿ ಮಾಹಿತಿ | Gold Price

ರಾಜ್ಯಾದ್ಯಂತ ಬಂದ್​ ಕರೆಯಿದ್ದ ಕಾರಣ ಸಾರಿಗೆ ಬಸ್​ಗಳು, ಆಟೋ, ಟ್ಯಾಕ್ಸಿಗಳು ಸಂಚಾರ ನಡೆಸಲಿದೆಯೇ ಎಂಬ ಅನುಮಾನಗಳು ಮೂಡಿತ್ತು. ಆದರೆ, ಇಂದು ಬೆಳಗ್ಗಿನಿಂದಲೇ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್​ಗಳು ಎಂದಿನಂತೆ ರಸ್ತೆಗಿಳಿಯಿತು. ಇದರೊಟ್ಟಿಗೆ ಖಾಸಗಿ ಕಚೇರಿಗಳು, ಹೋಟೆಲ್​, ಮಳಿಗೆಗಳು ಕೂಡ ಕಾರ್ಯನಿರ್ವಹಿಸಿವೆ. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ರಾಜ್ಯ ರಾಜಧಾನಿ ಹೊರತುಪಡಿಸಿದರೆ ಇನ್ನುಳಿದ ಜಿಲ್ಲೆಗಳಲ್ಲಿ ಬಂದ್​ಗೆ ನೀರಸ ಪ್ರತಿಕ್ರಿಯೆ ದೊರಕಿದೆ. ಈ ಮೂಲಕ ಕರ್ನಾಟಕ ಬಂದ್​ಗೆ ಕೇವಲ ನೈತಿಕ ಬೆಂಬಲ ಮಾತ್ರ ಸಿಕ್ಕಿದೆ ಎಂಬುದು ಸ್ಪಷ್ಟ.

ಬಂದ್​ಗೆ ಬೆಂಬಲ ಕೊಡದ ರಾಜ್ಯ ಸರ್ಕಾರ ನಡೆ ಮತ್ತು ಪೊಲೀಸರ ವಿರುದ್ಧ ಕಿಡಿಕಾರಿದ ವಾಟಾಳ್ ನಾಗರಾಜ್​ ಮತ್ತು ಕನ್ನಡ ಪರ ಸಂಘಟನೆಗಳು, ಬೆಂಗಳೂರಿನ ಟೌನ್​ಹಾಲ್​ ಮುಂದೆ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜ್​, ರೂಪೇಶ್​ ರಾಜಣ್ಣ, ಸಾ.ರಾ. ಗೋವಿಂದು ಸೇರಿದಂತೆ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:  ಪತಿ ಹತ್ಯೆಗೈದ ಮರುದಿನವೇ ಪ್ರಿಯಕರನ ಜತೆಗೆ ಜಾಲಿ ಟ್ರಿಪ್​! ಹಿಮಾಚಲದಲ್ಲಿ ಮೋಜು-ಮಸ್ತಿ | Murder Case

ಎಲ್ಲೆಲ್ಲಿ ನೀರಸ ಪ್ರತಿಕ್ರಿಯೆ?

  • ಕರ್ನಾಟಕ ಬಂದ್‌ಗೆ ಕೊಡಗಿನಲ್ಲಿ ನೀರಸ ಪ್ರತಿಕ್ರಿಯೆ.
  • ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ
  • ರಾಯಚೂರಿನಲ್ಲಿ ಕರ್ನಾಟಕ ಬಂದ್ ಮಿಶ್ರ ಪ್ರತಿಕ್ರಿಯೆ
  • ಶಿವಮೊಗ್ಗದಲ್ಲಿಯೂ ಸಿಗದ ಬೆಂಬಲ
  • ಮೈಸೂರಿನಲ್ಲಿ ಪ್ರತಿಭಟನೆ ಭುಗಿಲೆದ್ದರೂ ನೈತಿಕ ಬೆಂಬಲದಿಂದ ಬಂದ್​ಗೆ ಪೂರ್ಣ ಬೆಂಬಲ ಸಿಕ್ಕಿಲ್ಲ.

ಪತಿ ಹತ್ಯೆಗೈದ ಮರುದಿನವೇ ಪ್ರಿಯಕರನ ಜತೆಗೆ ಜಾಲಿ ಟ್ರಿಪ್​! ಹಿಮಾಚಲದಲ್ಲಿ ಮೋಜು-ಮಸ್ತಿ | Murder Case

Share This Article

ಬೇಸಿಗೆಯಲ್ಲಿ ಕೋಳಿ ಅಥವಾ ಮೀನು?; ತಿನ್ನಲು ಯಾವ ಮಾಂಸ ಉತ್ತಮ? ಇಲ್ಲಿದೆ ಮಾಹಿತಿ.. | Meat

Meat : ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಧಿಕ ಜನರು ತಂಪುಪಾನಿಯಗಳನ್ನು ಸೇವಿಸುತ್ತಾರೆ. ಈ ಸಮಯದಲ್ಲಿ ಹೆಚ್ಚಿನವರು ಹಗುರವಾದ(ಮೃದುವಾದ)…

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…