ಆಸ್ಪತ್ರೆಯಲ್ಲಿ ಬೆಡ್​ ಸಿಗದೆ ಪ್ರಾಣಬಿಟ್ಟ ಬಿಜೆಪಿಯ ಮಾಜಿ ಸಂಸದನ ಪುತ್ರ

ಲಖನೌ: ತುರ್ತು ವಾರ್ಡ್​ ಹಾಗೂ ವೈದ್ಯರ ನಿರ್ಲಕ್ಷ್ಯದಿಂದಾಗಿ ಬಿಜೆಪಿಯ ಮಾಜಿ ಸಂಸದರೊಬ್ಬರು ತಮ್ಮ ಮಗನನ್ನು ಕಳೆದುಕೊಂಡಿರುವ ಘಟನೆ ಲಖನೌನ SGPGI ಆಸ್ಪತ್ರೆಯಲ್ಲಿ ನಡೆದಿದೆ. ಸರ್ಕಾರ ವೈದ್ಯರನ್ನು ಅಮಾನತುಗೊಳಿಸುವವರೆಗೆ ಮತ್ತು ಮುಂದಿನ ಕ್ರಮದ ಭರವಸೆ ನೀಡುವವರೆಗೆ ಸ್ಥಳದಿಂದ ತೆರಳುವುದಿಲ್ಲ ಎಂದು ತಂದೆ ಮಗನ ಮೃತದೇಹದೊಂದಿಗೆ ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿಯ ಮಾಜಿ ಸಂಸದ ಭೈರೋನ್ ಪ್ರಸಾದ್ ಮಿಶ್ರಾ ಅವರ ಪುತ್ರ, ಪ್ರಕಾಶ್ ಮಿಶ್ರಾ (41) ಮೂತ್ರಪಿಂಡದ ಸೋಂಕಿನಿಂದ ಬಳಲುತ್ತಿದ್ದರು. ಅವರನ್ನು ನಿನ್ನೆ ರಾತ್ರಿ 11 ಗಂಟೆಗೆ SGPGI ತುರ್ತು … Continue reading ಆಸ್ಪತ್ರೆಯಲ್ಲಿ ಬೆಡ್​ ಸಿಗದೆ ಪ್ರಾಣಬಿಟ್ಟ ಬಿಜೆಪಿಯ ಮಾಜಿ ಸಂಸದನ ಪುತ್ರ