ಶಬರಿಮಲೆ ದೇಗುಲ ಪ್ರವೇಶಕ್ಕೆ ಯತ್ನಿಸಿ ಇತಿಹಾಸ ಸೃಷ್ಟಿಸಿದ್ದ ರೆಹಾನಾ ಫಾತೀಮಾಗೆ ನಿರೀಕ್ಷಣಾ ಜಾಮೀನು ನಿರಾಕರಣೆ

ತಿರುವನಂತರಪುರಂ: ಅಯ್ಯಪ್ಪ ದೇಗುಲಕ್ಕೆ ಎಲ್ಲ ಮಹಿಳೆಯರು ಪ್ರವೇಶವಿದೆ ಎಂದು ಸುಪ್ರೀಂ ತೀರ್ಪು ಹೊರಬಿದ್ದ ಬಳಿಕ ಕೇರಳದ ಶಬರಿಮಲೆ ದೇಗುಲ ಪ್ರವೇಶಕ್ಕೆ ಯತ್ನಿಸಿದ್ದ ಮಾಡೆಲ್‌ ಮತ್ತು ಹೋರಾಟಗಾರ್ತಿ ರೆಹನಾ ಫಾತಿಮಾ ಅವರಿಗೆ ಕೇರಳ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದೆ.

ಶಬರಿಮಲ ದೇಗುಲದ ಅಯ್ಯಪ್ಪ ಸ್ವಾಮಿ ಕುರಿತಾದ ಅವಮಾನಿಸುವ ಪೋಸ್ಟ್‌ನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿರುವ ಆರೋಪವನ್ನು ಫಾತಿಮಾ ಎದುರಿಸುತ್ತಿದ್ದಾರೆ.

ಈ ಕುರಿತು ಅ. 30ರಂದು ಶಬರಿಮಲ ಸಂರಕ್ಷಣಾ ಸಮಿತಿಯು ಫಾತಿಮಾ ಅವರು ಹಿಂದು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಿ ದೂರನ್ನು ದಾಖಲಿಸಿತ್ತು.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಫಾತೀಮಾ, ನಾನು ಯಾವುದೇ ತಪ್ಪು ಮಾಡಿಲ್ಲ ಹಾಗಾಗಿ ನಿರೀಕ್ಷಣಾ ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ಗೆ ತೆರಳುವುದಾಗಿ ತಿಳಿಸಿದ್ದಾರೆ.

ಅಕ್ಟೋಬರ್‌ನಲ್ಲಿ ಫಾತೀಮಾ ಮತ್ತು ಆಂಧ್ರಪ್ರದೇಶದ ಪತ್ರಕರ್ತೆಯೊಬ್ಬರು ಪೊಲೀಸ್‌ ರಕ್ಷಣೆಯಲ್ಲಿ ಶಬರಿಮಲೆ ದೇಗುಲದ ಸಮೀಪಕ್ಕೆ ಪ್ರವೇಶಿಸಿದ್ದರು. ಪವಿತ್ರ 18 ಮೆಟ್ಟಿಲುಗಳಿಂದ ಕೆಲವೇ ಮೀಟರ್‌ ಅಂತರದಲ್ಲಿ ಪ್ರತಿಭಟನಾಕಾರರು ಮತ್ತು ದೇಗುಲದ ಅರ್ಚಕರು ಅವರನ್ನು ತಡೆದಿದ್ದರು.

ಫಾತಿಮಾ ದೇಗುಲಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದಂತೆಯೇ ಇತ್ತ ಅವರ ಮನೆಯನ್ನು ದುಷ್ಕರ್ಮಿಗಳು ಧ್ವಂಸ ಮಾಡಿದ್ದರು. ಅದಾದ ಬಳಿಕ ರೆಹಾನ್‌ ಅವರ ನಡೆಯಿಂದಾಗಿ ಲಕ್ಷಾಂತರ ಹಿಂದುಗಳು ಹಾಗೂ ಅವರ ಧಾರ್ಮಿಕ ನಂಬಿಕೆಗಳಿಗೆ ನೋವುಂಟು ಮಾಡಿದೆ. ಆಕೆಗೆ ಮುಸ್ಲಿಂ ಹೆಸರನ್ನು ಬಳಕೆ ಮಾಡಿಕೊಳ್ಳಲು ಯಾವ ಹಕ್ಕು ಇಲ್ಲ ಎಂದು ಹೇಳಿ ಅವರನ್ನು ಕೇರಳ ಮುಸ್ಲಿಂ ಜಮಾತ್ ಪರಿಷತ್ ಮುಸ್ಲಿಂ ಸಮುದಾಯದಿಂದ ಉಚ್ಚಾಟನೆ ಮಾಡಿತ್ತು. (ಏಜೆನ್ಸೀಸ್)

ಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದ ರೆಹಾನಾಳನ್ನು ವರ್ಗಾವಣೆ ಮಾಡಿದ ಬಿಎಸ್​ಎನ್​ಎಲ್​