ಹುಲ್ಲಹಳ್ಳಿ; ಅಂಗಡಿ ಮಳಿಗೆಗಳಿಂದ ಬಾಕಿ ಬಾಡಿಗೆ ಹಣ ವಸೂಲಿ ಮಾಡದೆ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸಬಾರದು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಹುಲ್ಲಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಮಳಿಗೆಗಳು ಮತ್ತು ತಳ್ಳುವ ಗಾಡಿ ಹರಾಜು ಪ್ರಕ್ರಿಯೆಯಲ್ಲಿ ಜನರು ಅಧಿಕಾರಿಗಳನ್ನು ಒತ್ತಾಯಿಸಿದರು.
ಈ ಹಿಂದೆ ಇದ್ದ 16 ಮಳಿಗೆಗಳಿಂದ ಸುಮಾರು 4 ಲಕ್ಷಕ್ಕೂ ರೂ.ಗೂ ಹೆಚ್ಚು ಹಣ ಗ್ರಾಮ ಪಂಚಾಯಿತಿಗೆ ಬರಬೇಕಿತ್ತು. ಅದನ್ನು ವಸೂಲಿ ಮಾಡದೆ ಮಳಿಗೆಗಳ ಹರಾಜು ಮಾಡಬಾರದೆಂದು ಆಗ್ರಹಿಸಿದರು. ಅಲ್ಲದೆ ಮಳಿಗೆಗಳನ್ನು ದುರಸ್ತಿ ಮಾಡಿದ ನಂತರ ಮಳಿಗೆಗಳ ಟೆಂಡರ್ ಹರಾಜು ಪ್ರಕ್ರಿಯೆಯನ್ನು ನಡೆಸಬೇಕು ಎಂದರು.
ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ಬಾಡಿಗೆದಾರದಿಂದ ಬರಬೇಕಾದ ಬಾಡಿಗೆ ಹಣವನ್ನು ವಸೂಲಿ ಮಾಡಿದ ನಂತರ ಮತ್ತು ಮಳಿಗೆಗಳನ್ನು ದುರಸ್ತಿ ಗೊಳಿಸಿದ ನಂತರ ಮತ್ತೊಂದು ದಿನಾಂಕದಂದು ಹರಾಜು ಪ್ರಕ್ರಿಯೆಗೆ ನಿಗದಿ ಮಾಡಲಾಗುವುದು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಧರ್ ತಿಳಿಸಿದ ನಂತರ ತಳ್ಳುವ ಗಾಡಿ ಮತ್ತು ಸಂತೆ ಹರಾಜುನ್ನು ಮಾಡಲಾಯಿತು.
ತಳ್ಳುವ ಗಾಡಿ ಬಾಡಿಗೆ ಹರಾಜನ್ನು 3.80 ಲಕ್ಷ ರೂ.ಗೆ ಹರಾಜು ನಡೆದು ಕಿಶೋರ್ ಎಂಬುವರಿ ಪಡೆದುಕೊಂಡರು. ಸಂತೆಯು 55,000 ರೂ,ಗೆ ನಡೆದಿದ್ದು, ಬಾಡಿಗೆ ಹರಾಜನ್ನು ವರದರಾಜು ಎಂಬುವರು ಪಡೆದುಕೊಂಡರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಮ್ಮ ಹುಚ್ಚಯ್ಯ, ಉಪಾಧ್ಯಕ್ಷ ಎಚ್.ಪಿ.ಲೋಕೇಶ್, ಸದಸ್ಯರಾದ ಶಿವಣ್ಣ, ಎಚ್.ಜೆ. ಮಲ್ಲಿಕಾರ್ಜುನ, ಮಹೇಶ್, ಕುಮಾರ್ ಚೌಡಯ್ಯ, ನಾಗೇಂದ್ರ, ಮಾಜಿ ಅಧ್ಯಕ್ಷ ವರದರಾಜು, ಜಯ ಕರ್ನಾಟಕ ಹೋಬಳಿ ಅಧ್ಯಕ್ಷ ಕಾಶಿ, ಭೀಮ ಬಳಗದ ಅಧ್ಯಕ್ಷ ಮೆಕಾನಿಕ್ ಚಂದ್ರು, ಡಿಎಸ್‌ಎಸ್ ಮಹೇಶ್, ಪ್ರಸನ್ನ, ಸಿದ್ದರಾಜು, ಪ್ರಸಾದ್, ಮಹಾದೇವ (ಸಿದ್ದು). ಶಿವಣ್ಣ ಇತರರು ಹಾಜರಿದ್ದರು.