16 C
Bangalore
Thursday, December 12, 2019

ಖಂಡಿಗೆ ಕಿಂಡಿ ಅಣೆಕಟ್ಟು ದುರಸ್ತಿಗಿಲ್ಲ ಕ್ರಮ

Latest News

ರಾಜ್ಯ ಸರ್ಕಾರ, ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಬಿಬಿಎಂಪಿಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಇಂಜಿನಿಯರ್​ಗಳನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಲು ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಸರ್ಕಾರ ಹಾಗೂ ಪಾಲಿಕೆಗೆ...

ಮಣ್ಣು ಮಾಲಿನ್ಯದಿಂದ ಜೀವಸಂಕುಲಕ್ಕೆ ಸಂಕಟ

ಮಣ್ಣಿನ ಮಾಲಿನ್ಯವನ್ನು ನಿರ್ಲಕ್ಷಿಸುತ್ತಿದ್ದೇವೆ. ಲಕ್ಷಾಂತರ ವರ್ಷಗಳ ನೈಸರ್ಗಿಕ ಪ್ರಕ್ರಿಯೆಯಿಂದ ಮಣ್ಣು ರೂಪುಗೊಳ್ಳುತ್ತದೆ. ಆದರೆ, ಅದಕ್ಕೆ ಹೇಗೆ ಹಾನಿ ಮಾಡುತ್ತಿದ್ದೇವೆ ಎಂದರೆ ಮುಂದಿನ ದಿನಗಳಲ್ಲಿ ದೊಡ್ಡ ಗಂಡಾಂತರ...

ರೌಡಿ ಕಾಲಿಗೆ ಗುಂಡೇಟು

ಬೆಂಗಳೂರು: ಆರು ತಿಂಗಳ ಹಿಂದೆ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ತಲೆಮರೆಸಿಕೊಂಡು ತಿರುಗುತ್ತಿದ್ದ ಶಾರ್ಪ್​ಶೂಟರ್ ರೌಡಿಶೀಟರ್ ಕಾಲಿಗೆ ಕೆ.ಜಿ. ಹಳ್ಳಿ ಪೊಲೀಸರು...

ಸುಗಮ ಸಾರಿಗೆಗೆ ಬೇಕು 2 ಲಕ್ಷ ಕೋಟಿ ರೂಪಾಯಿ

ಬೆಂಗಳೂರು: ನಗರದ ಸಂಚಾರದಟ್ಟಣೆ ನಿವಾರಿಸುವ ಜತೆಗೆ ವಾಯುಮಾಲಿನ್ಯ ಸಮಸ್ಯೆ ಉಲ್ಬಣಿಸದಂತೆ ತಡೆಯಲು ಅಗತ್ಯ ಸೌಲಭ್ಯ ಕಲ್ಪಿಸಲು 2.30 ಲಕ್ಷ ಕೋಟಿ ರೂ. ಬೇಕಿದೆ. ಮುಂದಿನ 20...

ವಿಕ್ಟೋರಿಯಾದಲ್ಲಿ 68 ಕೋಟಿ ರೂ ವೆಚ್ಚದ ಕಟ್ಟಡ

ಬೆಂಗಳೂರು: ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್​ಐ) ಆಸ್ಪತ್ರೆಗಳಲ್ಲಿ ಒಳರೋಗಿಗಳ ಸೇವೆಗಾಗಿ 68.50 ಕೋಟಿ ರೂ. ವೆಚ್ಚದಲ್ಲಿ ಸಾವಿರ ಒಳರೋಗಿಗಳ ದಾಖಲು...

ಲೋಕೇಶ್ ಸುರತ್ಕಲ್
ಪಾವಂಜೆ ಖಂಡಿಗೆ ಬಳಿ ಇರುವ ನಂದಿನಿ ನದಿ ಕಿಂಡಿ ಅಣೆಕಟ್ಟಿನ ದುರಸ್ತಿಗೆ ಅಧಿಕಾರಿಗಳು ಖಚಿತ ಯೋಜನೆ ರೂಪಿಸಿಲ್ಲ. ಅಣೆಕಟ್ಟು ನಿರ್ವಹಣೆಗೆ ಸಮಿತಿಯೇ ರಚನೆಯಾಗಿಲ್ಲ. ಹಾಗಾಗಿ ಈ ವರ್ಷವೂ ಆಸುಪಾಸಿನ ಗ್ರಾಮಗಳಲ್ಲಿ ಕೃಷಿಕರಿಗೆ ಅಲ್ಲದೆ ಚೇಳಾರು ಪಂಚಾಯಿತಿ ವ್ಯಾಪ್ತಿ, ಪರಿಸರದ ನೂರಾರು ಕುಡಿಯುವ ನೀರಿನ ಬಾವಿಗಳಿಗೆ ಉಪ್ಪು ನೀರು ಹಾವಳಿ ಭೀತಿ ಎದುರಾಗಿದೆ.

ಕಳೆದ ವರ್ಷ ನದಿಯಲ್ಲಿ ಉಪ್ಪು ನೀರು ಸಮಸ್ಯೆ ಕಾರಣ ಆಸುಪಾಸಿನ ಚೇಳಾರು, ಖಂಡಿಗೆ, ಕರಿತೋಟ, ಪಡ್ರೆ ಮೊದಲಾದ ಗ್ರಾಮಗಳಲ್ಲಿ ಸುಮಾರು 200 ಎಕರೆ ಕೃಷಿ ಪ್ರದೇಶದ ರೈತರಿಗೆ ತೊಂದರೆಯಾಗಿತ್ತು. ಜಾನುವಾರುಗಳಿಗೂ ನಳ್ಳಿ ನೀರನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಬಂದಿತ್ತು. ಪಕ್ಕದ ಚೇಳಾರು ಪಂಚಾಯಿತಿ ವ್ಯಾಪ್ತಿಯಲ್ಲಿನ ಬಾವಿಗಳ ನೀರೆಲ್ಲ ಉಪ್ಪಾಗಿ ಜನರು ತೀವ್ರ ಬವಣೆ ಪಡುವಂತಾಗಿತ್ತು. ಅಂತರ್ಜಲವೇ ಉಪ್ಪಾಗಿದೆ ಎಂದ ಪಂಚಾಯಿತಿ ಕೈಕಟ್ಟಿ ಕುಳಿತಿತ್ತು ಎಂದು ಆರೋಪ ಕೇಳಿಬಂದಿತ್ತು. ಈ ಬಗ್ಗೆ ‘ವಿಜಯವಾಣಿ’ಯಲ್ಲಿ ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನ ಸೆಳೆಯಲಾಗಿತ್ತು.

ಕಿಂಡಿ ಅಣೆಕಟ್ಟು ದುರಸ್ತಿ ಪ್ರಸ್ತಾಪವಿದೆ. ಅಣೆಕಟ್ಟು ನಿರ್ವಹಣೆ ಸಮಿತಿ ರಚನೆಗೆ ರೈತರೇ ಮುಂದೆ ಬರುವುದಿಲ್ಲ. ರೈತರು ಕೃಷಿಗೆ ಹಾನಿಯಾಗುವ ಕಾರಣ ನೀಡಿ ಒಮ್ಮೆಗೆ ಹಾಕಲಾದ ಕಿಂಡಿಬಾಗಿಲು ಮತ್ತೆ ತಾವೇ ತೆಗೆಯುತ್ತಾರೆ. ಅಲ್ಲದೆ ಮೀನು ಹಿಡಿಯುವವರಿಂದಲೂ ಸಮಸ್ಯೆಯಾಗುತ್ತಿದೆ ಎಂದು ಬುಧವಾರ ಸ್ಥಳಕ್ಕೆ ಭೇಟಿ ನೀಡಿದ್ದ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ರಾಕೇಶ್ ‘ವಿಜಯವಾಣಿ’ಗೆ ತಿಳಿಸಿದರು. ಆದರೆ ದುರಸ್ತಿ ಪ್ರಸ್ತಾಪ ಯಾವಾಗ ಅನುಷ್ಠಾನವಾಗಬಹುದು ಎಂದು ಪ್ರಶ್ನಿಸಿದಾಗ ಅವರ ಜತೆಗಿದ್ದ ಹಿರಿಯ ಅಧಿಕಾರಿಗಳು ವಿಳಂಬವಾಗಿ ಆಗಲಿದೆ ಎಂದಷ್ಟೇ ಉತ್ತರ ನೀಡಿದ್ದಾರೆ.

ಗೇಟ್ ಎಂದೋ ಕೆಟ್ಟಿದೆ
ಈ ಅಣೆಕಟ್ಟಿನಲ್ಲಿರುವ ಗೇಟ್ 4-5 ವರ್ಷ ಹಿಂದೆಯೇ ಕೆಟ್ಟಿದೆ. ಪ್ರತಿ ವರ್ಷವೂ ಉಪ್ಪು ನೀರು ಸಮಸ್ಯೆ ಮುಗಿಯದ ಗೋಳಾಗಿದೆ. ಕಿಂಡಿಗಳಿಗೆ ಹಲಗೆ ಹಾಕಿದರೂ 7-8 ಅಡಿ ನೀರಿನಲ್ಲಿ ಮುಳುಗುವ ಗೇಟ್‌ನಲ್ಲಿ ಹಲಗೆಗಳೇ ಇಲ್ಲ. ಇದರ ಮೂಲಕ ಉಪ್ಪು ನೀರು ಸೋರಿಕೆ ನಿರಾತಂಕವಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಈ ವರ್ಷವೂ ಆಸುಪಾಸಿನ ಪಾವಂಜೆ, ಖಂಡಿಗೆ, ಕರಿಕಟ್ಟ, ಪಡ್ರೆ ಪರಿಸರದ 200 ಎಕರೆ ಪ್ರದೇಶದ ಕೃಷಿಕರಿಗೆ, ಚೇಳಾರು ಪಂಚಾಯಿತಿ ವ್ಯಾಪ್ತಿಗೆ ಉಪ್ಪುನೀರು ಸಮಸ್ಯೆ ತಟ್ಟುವ ಸಾಧ್ಯತೆ ಇದೆ ಎನ್ನುತ್ತಾರೆ ಸ್ಥಳೀಯರ ರೈತರು. ಈ ಗೇಟ್ ಶಾಶ್ವತವಾಗಿ ಮುಚ್ಚಬೇಕು ಎಂಬುದು ಕೆಲವು ರೈತರ ಅಭಿಪ್ರಾಯ.

ಅಣೆಕಟ್ಟು ದುರಸ್ತಿ ಪ್ರಸ್ತಾಪ ಹಿಂದೆಯೇ ಕಳುಹಿಸಿದ್ದೇವೆ, ಇದಕ್ಕೆ ಅಧಿಕಾರಿಗಳ ಸ್ಪಂದನವಿಲ್ಲ.
ಜಯಾನಂದ ಚೇಳಾರು ಪಂಚಾಯಿತಿ ಅಧ್ಯಕ್ಷ

ಚೇಳಾರು, ಖಂಡಿಗೆ, ಕರಿತೋಟ, ಪಡ್ರೆ ಮೊದಲಾದ ಗ್ರಾಮಗಳ ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಗಮನಕ್ಕೆ ಬಂದಿದೆ. ಈ ಕುರಿತು ಸಮಗ್ರವಾಗಿ ಪರಿಶೀಲನೆ ಶೀಘ್ರ ನಡೆಸಲಾಗುವುದು.
ಉಮಾನಾಥ ಕೋಟ್ಯಾನ್, ಶಾಸಕ

Stay connected

278,741FansLike
587FollowersFollow
624,000SubscribersSubscribe

ವಿಡಿಯೋ ನ್ಯೂಸ್

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...