ಮತ್ತೆ ಬಣ್ಣ ಹಚ್ಚುತ್ತಿದ್ದಾರೆ ನಿವೇದಿತಾ ಶಿವರಾಜ್​ಕುಮಾರ್​

ಬೆಂಗಳೂರು: ‘ಅಂಡಮಾನ್​​’ ಚಿತ್ರದ ಮೂಲಕ ಬಾಲ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಿವೇದಿತಾ ಶಿವರಾಜ್​​ಕುಮಾರ್​​ ಈಗ ಮತ್ತೆ ಬಣ್ಣ ಹಚ್ಚಲು ರೆಡಿ ಆಗಿದ್ದಾರೆ.

ಆದರೆ ಈ ಬಾರಿ ಯಾವುದೇ ಸಿನಿಮಾಕ್ಕೆ ಬಣ್ಣ ಹಚ್ಚದೆ, ‘ಹೇಟ್ ಯೂ ರೋಮಿಯೋ’ ಎಂಬ ವೇಬ್​​ಸರಣಿಯಲ್ಲಿ ನಟಿಸುವ ಮೂಲಕ ನಟನಾ ಲೋಕಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ. ವೆಬ್​ ಸರಣಿಯಲ್ಲಿ ನಿವೇದಿತಾ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದು, ಶಿವಣ್ಣನ ಶ್ರೀ ಮುತ್ತು ಸಿನಿ ಸರ್ವಿಸ್​ ಹಾಗೂ ಸಕ್ಕತ್​ ಸ್ಟುಡಿಯೋ ಸಹಭಾಗಿತ್ವದಲ್ಲಿ ನಿರ್ಮಾಣ ಆಗುತ್ತಿದೆ.

ಈ ವೆಬ್​ ಸೀರೀಸ್​ನಲ್ಲಿ ಅರವಿಂದ್​ ನಾಯಕ ಹಾಗೂ ದಿಶಾ ಮದನ್​ ನಾಯಕಿಯಾಗಿ ನಟಿಸುತ್ತಿದ್ದಾರೆ. ದಕ್ಷಿಣ ಭಾರತದಲ್ಲಿಯೇ ಅತಿ ದೊಡ್ಡ ವೆಬ್​ ಸೀರೀಸ್​ ಇದಾಗಿದೆ. (ದಿಗ್ವಿಜಯ ನ್ಯೂಸ್​)