More

    ನಿತ್ಯಭವಿಷ್ಯ: ಈ ರಾಶಿಯವರು ವಾಹನ ಚಾಲನೆ ಮಾಡುವಾಗ ಎಚ್ಚರದಿಂದ ಇರಿ

    ಮೇಷ: ಅವಸರದಲ್ಲಿ ನಿರ್ಧಾರ ಕೈಗೊಳ್ಳಬೇಡಿ. ಅನುಮಾನದ ಪ್ರವೃತ್ತಿಯನ್ನು ಕಡಿಮೆ ಮಾಡಿಕೊಳ್ಳಿ. ಕುಟುಂಬದ ಸಲಹೆ ಪಡೆದುಕೊಳ್ಳಿ. ಶುಭಸಂಖ್ಯೆ: 9

    ವೃಷಭ: ತಪ್ಪುಗಳು ಮರುಕಳಿಸದಂತೆ ಜಾಗ್ರತೆ ವಹಿಸಿ. ವ್ಯಾಪಾರ ವಹಿವಾಟು ಪ್ರಾರಂಭ. ದಿನಾಂತ್ಯದಲ್ಲಿ ಆತ್ಮೀಯರ ಆಗಮನ. ಶುಭಸಂಖ್ಯೆ: 7

    ಮಿಥುನ: ಬಾಳಸಂಗಾತಿಯೊಂದಿಗೆ ತಾಳ್ಮೆಯಿಂದ ವರ್ತಿಸಿ. ಮಾನಸಿಕ ಒತ್ತಡದಿಂದ ಹೊರಬನ್ನಿ. ಕಚೇರಿಯಲ್ಲಿ ಹಿರಿಯರಿಂದ ಸಲಹೆ. ಶುಭಸಂಖ್ಯೆ: 6

    ಕಟಕ: ನೆರೆಹೊರೆಯವರೊಂದಿಗೆ ಆತ್ಮೀಯತೆಯಿಂದ ವರ್ತಿಸಿ. ಶುಭ ಕೆಲಸಕ್ಕೆ ಚಾಲನೆ. ಬಾಳಸಂಗಾತಿಯೊಂದಿಗೆ ವಿಹಾರ. ಶುಭಸಂಖ್ಯೆ: 2

    ಸಿಂಹ: ಆತ್ಮ ಸಂಯಮವನ್ನು ಕಾಯ್ದುಕೊಳ್ಳಿ. ಹಿತಶತ್ರುಗಳ ಬಗ್ಗೆ ಅನುಕಂಪದ ಭಾವನೆ ಬೇಡ. ಮಕ್ಕಳೊಂದಿಗೆ ತಾಳ್ಮೆಯಿರಲಿ. ಶುಭಸಂಖ್ಯೆ: 5

    ಕನ್ಯಾ: ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಅನಿರೀಕ್ಷಿತ ಅವಕಾಶ. ವಾದಕರಿಗೆ ವಿಶೇಷ ದಿನ. ಶುಭಸಂಖ್ಯೆ: 3

    ತುಲಾ: ಗುರುಹಿರಿಯರ ಮಾರ್ಗದರ್ಶನ. ಪತ್ನಿಯೊಂದಿಗೆ ವಿರಸ. ವಿದ್ಯಾರ್ಥಿಗಳಿಗೆ ಸ್ಪರ್ಧೆಗಳಲ್ಲಿ ಜಯ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 7

    ವೃಶ್ಚಿಕ: ಸಾರ್ವಜನಿಕ ರಂಗದಲ್ಲಿರುವವರಿಗೆ ಮಹತ್ವದ ಜವಾಬ್ದಾರಿ. ನಟರಿಗೆ ಅವಕಾಶ. ವೈದ್ಯರ ಸಲಹೆಯನ್ನು ಶ್ರದ್ಧೆಯಿಂದ ಪಾಲಿಸಿ. ಶುಭಸಂಖ್ಯೆ: 6

    ಧನು: ಮಕ್ಕಳ ವಿದ್ಯಾಭ್ಯಾಸದಲ್ಲಿ ನಿರೀಕ್ಷಿತ ಪ್ರಗತಿ. ವಿವಾಹದ ನಿರೀಕ್ಷೆಯಲ್ಲಿರುವವರಿಗೆ ಕಾರ್ಯಸಿದ್ದಿ. ಕುಟುಂಬದಲ್ಲಿ ಸಡಗರ. ಶುಭಸಂಖ್ಯೆ: 2

    ಮಕರ: ಸಮಸ್ಯೆಯನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ವ್ಯಾಪಾರಸ್ಥರಿಗೆ ಲಾಭ. ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಬೆಂಬಲ. ಶುಭಸಂಖ್ಯೆ: 4

    ಕುಂಭ: ಅಪರೂಪದ ವ್ಯಕ್ತಿಯ ಭೇಟಿ. ವೃಥಾ ಖರ್ಚು. ಸಾರ್ವಜನಿಕವಾಗಿ ತಾಳ್ಮೆಯಿಂದ ವರ್ತಿಸಿ. ದಿನಾಂತ್ಯದಲ್ಲಿ ಸುಖ ಭೋಜನ. ಶುಭಸಂಖ್ಯೆ: 5

    ಮೀನ: ಅವಕಾಶವನ್ನು ತಿರಸ್ಕರಿಸಬೇಡಿ. ಬಂಧುಗಳ ಆಗಮನ. ಉದ್ಯೋಗದಲ್ಲಿ ಸ್ಪರ್ಧೆ. ಉನ್ನತ ವಿದ್ಯಾಭ್ಯಾಸದ ನಿರೀಕ್ಷೆ ಗೆ ಯಶ. ಶುಭಸಂಖ್ಯೆ: 7

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts