ಮಂಗಳೂರು: ನ.4 ರಂದು ನಿಟ್ಟೆ ವಿಶ್ವವಿದ್ಯಾನಿಲಯದ 13ನೇ ವಾಷಿಕ ಘಟಿಕೋತ್ಸವ ಸಂಜೆ 4 ಗಂಟೆಗೆ ದೇರಳಕಟ್ಟೆ ಕ್ಯಾಂಪಸ್‌ನಲ್ಲಿ ನಡೆಯಲಿದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ. ಡಾ. ಎಂ.ಎಸ್. ಮೂಡಿತ್ತಾಯ ಹೇಳಿದರು.
ಅ.30 ರಂದು ಓಷಿಯೆನ್‌ಪರ್ಲ್ ಹೋಟೆಲ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಘಟಿಕೋತ್ಸವದ ಅಧ್ಯಕ್ಷತೆಯನ್ನು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಎನ್. ವಿನಯ್ ಹೆಗ್ಡೆ ವಹಿಸಲಿದ್ದಾರೆ. ಅಮೇರಿಕಾದ ಹ್ಯಾರಿಸ್‌ಬರ್ಗ್‌ನಲ್ಲಿರುವ ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿಚರ್ಸಿಟಿಯ ಅಂತರ್‌ರಾಷ್ಟ್ರೀಯ ವ್ಯವಹಾರಗಳ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಡಾ. ಒಮಿದ್ ಅನ್ಸಾರಿ ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ ಎಂದರು.
ನಿಟ್ಟೆ ವಿಶ್ವವಿದ್ಯಾನಿಲಯದ ಆಸ್ಪತ್ರೆ ನಿರ್ವಹಣೆಯ ಪ್ರೊ-ಚಾನ್ಸೆಲರ್ ಪ್ರೊ. ಎಂ. ಶಾಂತಾರಾಮ ಶೆಟ್ಟಿ, ಆಡಳಿತದ ಪ್ರೊ-ಚಾನ್ಸೆಲರ್ ವಿಶಾಲ ಹೆಗ್ಡೆ, ಉಪ ಕುಲಪತಿ ಪ್ರೊ. ಡಾ. ಎಂ.ಎಸ್. ಮೂಡಿತ್ತಾಯ, ಕುಲಸಚಿವ ಡಾ. ಹರ್ಷ ಹಾಲಹಳ್ಳಿ, ಪರೀಕ್ಷ ನಿಯಂತ್ರಕ ಪ್ರೊ. ಡಾ. ಪ್ರಸಾದ್ ಬಿ ಶೆಟ್ಟಿ ಉಪಸ್ಥಿತರಿರುವರು. ಈ ಘಟಿಕೋತ್ಸವವು ವಿಶ್ವವಿದ್ಯಾನಿಲಯದ ಮಹತ್ವದ ಮೈಲುಗಲ್ಲಾಗಿದ್ದು, ಅರ್ಹ ಅಭ್ಯರ್ಥಿಗಳಿಗೆ ವೈದ್ಯಕೀಯ, ದಂತ ವೈದ್ಯಕೀಯ, ಔಷಧವಿಜ್ಞಾನ, ಶುಷ್ರೂಷೆ, ಜೀವ ವಿಜ್ಞಾನಗಳು, ಸಮಗ್ರ ಆರೋಗ್ಯ ವಿಜ್ಞಾನಗಳು, ಮಾನವಿಕ ಹಾಗೂ ವಾಸ್ತುಶಿಲ್ಪ ವಿಷಯಗಳಲ್ಲಿ ಡಾಕ್ಟೊರಲ್, ಸ್ನಾತಕೋತ್ತರ, ಫೆಲೋಷಿಪ್, ಸ್ನಾತಕೋತ್ತರ ಡಿಪ್ಲೊಮಾ, ಪದವಿಗಳನ್ನು ಪ್ರದಾನ ಮಾಡಲಾಗುವುದು. ಘಟಿಕೋತ್ಸವದಲ್ಲಿ 25 ಪಿಹೆಚ್‌ಡಿ ಪದವಿ, 3 ಫೆಲೋಶಿಪ್, 397 ಸ್ನಾತಕೋತ್ತರ, 7 ಡಿಪ್ಲೊಮಾ, 822 ಪದವಿ ವಿಭಾಗದವರಿಗೆ ಪದವಿಯನ್ನು ಪ್ರದಾನ ಮಾಡಲಾಗುವುದು. ಇದರಲ್ಲಿ 31 ಗೋಲ್ಡ್ ಮೆಡಲ್, 18 ಎಂಡೋಮೆಂಟಲ್ ಗೋಲ್ಡ್ ಮೆಡಲ್, 13 ವಿಶ್ವವಿದ್ಯಾನಿಲದ ಗೋಲ್ಡ್ ಮೆಡಲ್ ನೀಡಲಾಗುವುದು ಎಂದು ಪ್ರೊ. ಡಾ. ಎಂ.ಎಸ್. ಮೂಡಿತ್ತಾಯ ಹೇಳಿದರು.
ನಿಟ್ಟೆ ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಹರ್ಷ ಹಾಲಹಳ್ಳಿ, ಪರೀಕ್ಷಾ ನಿಯಂತ್ರಕ ಪ್ರೊ. ಡಾ. ಪ್ರಸಾದ್ ಬಿ. ಶೆಟ್ಟಿ ಇದ್ದರು.
ಇಬ್ಬರಿಗೆ ನಿಟ್ಟೆ ವಿವಿ ಗೌರವ ಡಾಕ್ಟರೇಟ್
ಕಾನೂನು ಕ್ಷೇತ್ರದ ಕೊಡುಗೆಗಾಗಿ ಭಾರತದ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಮತ್ತು ಮಾಜಿ ಲೋಕಾಯುಕ್ತ ನ್ಯಾ. ಎನ್. ಸಂತೋಷ್ ಹೆಗ್ಡೆ, ವ್ಯವಹಾರ ಕ್ಷೇತ್ರದ ಸಾಧನೆಗಾಗಿ ಐಐಎಂ ಮುಂಬೈನ ಆಲ್ ಕಾರ್ಗೋ ಗ್ರೂಪ್‌ನ ಅಧ್ಯಕ್ಷ ಶಶಿ ಕಿರಣ್ ಶೆಟ್ಟಿ ಅವರಿಗೆ ನಿಟ್ಟೆ ವಿಶ್ವವಿದ್ಯಾನಿಲಯದ 13ನೇ ವಾಷಿಕ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರಧಾನಿಸಲಾಗುವುದು ಎಂದು ನಿಟ್ಟೆ ವಿವಿ ಉಪ ಕುಲಪತಿ ಪ್ರೊ. ಡಾ. ಎಂ.ಎಸ್. ಮೂಡಿತ್ತಾಯ ಹೇಳಿದರು.
ನಿಟ್ಟೆ ವಿವಿಗೆ ನ್ಯಾಕ್ ಎ+ ಗ್ರೇಡ್ ಮಾನ್ಯತೆ
ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯವು 2023ರ ಎನ್‌ಐಆರ್‌ಎಫ್ ಶ್ರೇಯಾಂಕದಲ್ಲಿ ಭಾರತೀಯ ವಿಶ್ವವಿದ್ಯಾನಿಲಯಗಳ ಪೈಕಿ 65ನೇ ಸ್ಥಾನವನ್ನು ಪಡೆದಿದೆ. ವಿಶ್ವವಿದ್ಯಾಲಯವು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ಎ+ ಗ್ರೇಡ್ ಪಡೆದುಕೊಂಡಿದೆ. 2023ರ ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕದ ಪ್ರಕಾರ ಏಷ್ಯಾದ ಅಗ್ರ 500 ವಿಶ್ವವಿದ್ಯಾನಿಲಯಗಳಲ್ಲಿ ಸ್ಥಾನ ಪಡೆದಿದೆ. ಇದಲ್ಲದೆ ಟೈಮ್ಸ್ ಹೈಯರ್ ಎಜುಕೇಶನ್ ಇಂಪ್ಯಾಕ್ಟ್ ಶ್ರೇಯಾಂಕಗಳು ತನ್ನ ಸುಸ್ಥಿರ ಅಭಿವೃದ್ಧಿ ಪ್ರಯತ್ನಗಳಿಗಾಗಿ ವಿಶ್ವದ ಅಗ್ರ 400 ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿ ನಿಟ್ಟೆ ವಿಶ್ವವಿದ್ಯಾನಿಲಯವನ್ನು ಗುರುತಿಸಿದೆ.