More

    ಜಮ್ಮು-ಕಾಶ್ಮೀರದಲ್ಲಿ ಇಂಟರ್​ನೆಟ್​ನ್ನು ಅಶ್ಲೀಲ ಸಿನಿಮಾ ನೋಡಲಿಕ್ಕೆ ಬಳಸಲಾಗುತ್ತೆ: ನೀತಿ ಆಯೋಗದ ಸದಸ್ಯ ವಿ.ಕೆ. ಸಾರಸ್ವತ್​

    ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಪಡಿಸಿದ ಮೇಲೆ ಮುಂಜಾಗ್ರತೆಯಿಂದಾಗಿ ಇಂಟರ್​ನೆಟ್​ ಬಂದ್​ ಮಾಡಿದ್ದು ಆರ್ಥಿಕತೆ ಮೇಲೆ ಯಾವ ಗುರುತರ ಪರಿಣಾಮವನ್ನೂ ಬೀರಿಲ್ಲ. ಅಲ್ಲಿ ಇಂಟರ್​ನೆಟ್​ ಕೇವಲ ಅಶ್ಲೀಲ ಸಿನಿಮಾ ನೋಡಲಿಕ್ಕೆ ಬಳಸಲಾಗುತ್ತಿತ್ತು ಎಂದು ನೀತಿ ಆಯೋಗದ ಸದಸ್ಯ ವಿ.ಕೆ. ಸಾರಸ್ವತ್​ ಅಭಿಪ್ರಾಯಪಟ್ಟಿದ್ದಾರೆ.

    ಧೀರು ಭಾಯಿ ಅಂಬಾನಿ ಇನ್​ಸ್ಟಿಟ್ಯೂಟ್​ ಆಫ್​ ಇನ್​ಫಾರ್ಮೆಷನ್​ ಆ್ಯಂಡ್​ ಕಮ್ಯುನಿಕೇಷನ್​ ಟೆಕ್ನಾಲಜಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅವರು, ಮಾಧ್ಯಮಗಳ ಜತೆ ಮಾತನಾಡಿದರು.

    ರಾಜಕಾರಣಿಗಳು ಕಾಶ್ಮೀರಕ್ಕೆ ಏಕೆ ಹೋಗುತ್ತಾರೆ. ದೆಹಲಿ ಬೀದಿಗಳಲ್ಲಿ ಆಗುತ್ತಿರುವ ಪ್ರತಿಭಟನೆಗಳನ್ನು ಅಲ್ಲಿ ಮರುಸೃಷ್ಟಿಸುತ್ತಾರೆ. ಅವರು ಸಾಮಾಜಿಕ ಜಾಲತಾಣಗಳನ್ನು ಪ್ರತಿಭಟನೆಗಳ ಕಿಚ್ಚು ಹಚ್ಚಲು ಬಳಸುತ್ತಾರೆ. ಅಲ್ಲಿ ಏನು ಇ ಟೈಲಿಂಗ್​ ನಡೆಯುತ್ತಿದೆಯೇ? ಅಲ್ಲಿ ಅಶ್ಲೀಲ ಸಿನಿಮಾ ನೋಡುವುದನ್ನು ಬಿಟ್ಟು, ಬೇರೇನು ಮಾಡುತ್ತಾರೆ ಎಂದು ಖಾರವಾಗಿ ಪ್ರಶ್ನಿಸಿದರು.

    ಜಮ್ಮು ಕಾಶ್ಮೀರದಲ್ಲಿ ಶನಿವಾರದಿಂದ ಇಂಟರ್​ನೆಟ್​ 2ಜಿ ಡೇಟಾ ಬಳಸಲು ಅನುಮತಿ ನೀಡಲಾಗಿದೆ. ಆದರೆ 153 ವೆಬ್​ಸೈಟ್​ಗಳನ್ನು ನೋಡಲು ಮಾತ್ರ ಅನುಮತಿ ನೀಡಲಾಗಿದೆ.

    ಈ ತಿಂಗಳ ಆರಂಭದಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತರ್ಜಾಲವನ್ನು ಸ್ಥಗಿತಗೊಳಿಸಿರುವ ಆದೇಶಗಳನ್ನು ಪರಿಶೀಲಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ತಿಳಿಸಿತ್ತು. ಅಮಾನತು ಸೀಮಿತ ಅವಧಿಗೆ ಮಾತ್ರ ಆಗಿದ್ದು, ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರುತ್ತದೆ ಎಂದು ಕೋರ್ಟ್​ ಹೇಳಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts