PHOTOS | ಸೋಮಾರಿ, ತಿಂದು ತಿಂದು ದಪ್ಪಗಾಗಿದ್ದಾರೆ ಎಂದು ಟ್ರೋಲ್​ ಮಾಡಿದವರಿಗೆ ನಟಿ ನಿತ್ಯಾ ಮೆನನ್​ ಕೊಟ್ಟ ತಿರುಗೇಟು ಹೀಗಿದೆ….

ಮುಂಬೈ: ಬಾಲಿವುಡ್​ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿರುವ ನಟ ಅಕ್ಷಯ್​ ಕುಮಾರ್​ ಅಭಿನಯದ ‘ಮಿಷನ್​ ಮಂಗಲ್​’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪ್ರವೇಶ ಪಡೆದಿರುವ ನಟಿ ನಿತ್ಯಾ ಮೆನನ್​, ತಮ್ಮ ವಿರುದ್ಧ ಟ್ರೋಲ್​ ಮಾಡುವವರಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ನಿತ್ಯಾ ಮೆನನ್​ ತುಂಬಾ ದಪ್ಪಗಾಗಿದ್ದಾರೆ. ಅವರು ತುಂಬಾ ಸೋಮಾರಿ, ತುಂಬಾ ತಿಂದು ತಿಂದು ದಪ್ಪಗಾಗಿದ್ದಾರೆ. ಅದಕ್ಕೆ ಅವರಿಗೆ ಅವಕಾಶಗಳು ಕಡಿಮೆ ಎಂದು ಟ್ರೋಲ್​ ಮಾಡಲಾಗಿತ್ತು.

ಈ ಬಗ್ಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ನಿತ್ಯಾ, ಕೆಲ ಜನರು ದಡ್ಡರೆಂದು ನನಗನಿಸುತ್ತದೆ. ಒಂದು ವೇಳೆ ನೀವು ತೂಕದ ಸಮಸ್ಯೆಯನ್ನು ಹೊಂದಿದ್ದರೆ, ನೀವು ಸೋಮಾರಿ ಹಾಗೂ ಹೆಚ್ಚು ತಿನ್ನುತ್ತಾರೆ ಎಂದು ತಮ್ಮಷ್ಟಕ್ಕೆ ತಾವೇ ಕಲ್ಪನೆ ಮಾಡಿಕೊಳ್ಳುತ್ತಾರೆ. ಆದರೆ, ನನ್ನನ್ನು ನಂಬಿ. ವಿಶೇಷವಾಗಿ ನಟಿಯರ ವಿಚಾರದಲ್ಲಿ ನಾವು ಸೋಮಾರಿಯಂತೂ ಅಲ್ಲ. ನಾವು ಕೆಲಸ ಮಾಡುವ ರೀತಿ, ನಮಗೆ ಗೊತ್ತಿಲ್ಲದೇ ಸುಮಾರು ಎಂಟು ಗಂಟೆಗಳ ಕಾಲ ನಿಲ್ಲುವ ರೀತಿ, ಇದ್ಯಾವುದು ಸುಲಭವಲ್ಲ ಎಂದು ಹೇಳಿದ್ದಾರೆ.

ಬಹಳಷ್ಟು ಜನರು ಗಂಭೀರವಾದ ಆರೋಗ್ಯ ಸಮಸ್ಯೆಯಿಂದಲೂ ಅವರ ದೇಹದ ತೂಕ ಹೆಚ್ಚಾಗುತ್ತದೆ. ಇದರ ಬಗ್ಗೆಯೂ ಸೂಕ್ಷ್ಮವಾಗಿರಬೇಕು ಎಂದು ಹೇಳಿದ್ದಾರೆ. ಬಹುಶಃ ಇಂತಹ ಜನರು ತಮ್ಮ ತೂಕದ ಜತೆ ಹೊಂದಾಣಿಕೆ ಮಾಡಿಕೊಳ್ಳುತ್ತಿರುತ್ತಾರೆ. ನೋವನ್ನು ಅನುಭವಿಸಿರುತ್ತಾರೆ. ಕೆಲವೊಮ್ಮೆ ತೂಕದ ಸಮಸ್ಯೆ ಹಾರ್ಮೋನ್​ ಬದಲಾವಣೆಯಿಂದಾಗಿರುತ್ತದೆ. ಅದು ಸಾಕಷ್ಟು ನೋವನ್ನು ಉಂಟುಮಾಡುತ್ತದೆ. ಇಂತಹ ಸಂದರ್ಭದಲ್ಲಿ ನೀವು ಟ್ರೋಲ್​ ಮಾಡುವುದರಿಂದ ಮತ್ತಷ್ಟು ನೋವನ್ನು ಅನುಭವಿಸಬೇಕಾಗುತ್ತದೆ. ನಾವು ಆರಾಮವಾಗಿ ನಮ್ಮ ಜೀವನವನ್ನು ಅನುಭವಿಸುತ್ತಿರುವುದರಿಂದ ತೂಕ ಹೆಚ್ಚಾಗಿಲ್ಲ ಎಂದು ಜನರಿಗೆ ತಿಳಿಹೇಳಬೇಕಾಗಿದೆ. ನಿಜವಾಗಿಯೂ ಟ್ರೋಲ್​ ನನಗೆ ನೋವನ್ನು ಉಂಟುಮಾಡಿದೆ. ಅದರಿಂದ ನಾನೂ ಕೂಡ ಅಸಮಾಧಾನಗೊಂಡಿದ್ದೇನೆ ಎಂದು ನಿತ್ಯಾ ಮೆನನ್ ಬೇಸರ ವ್ಯಕ್ತಪಡಿಸಿದ್ದಾರೆ.​

ಸಿನಿಮಾ ವಿಚಾರಕ್ಕೆ ಬಂದರೆ, ನಿತ್ಯಾ ಅವರು ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂ ಚಿತ್ರಗಳಲ್ಲಿ ನಟಿಸುವ ಮೂಲಕ ಬಹುಭಾಷ ನಟಿ ಎಂಬ ಪಟ್ಟಿಗೆ ಸೇರಿದ್ದಾರೆ. ಜೋಶ್​ ಚಿತ್ರದ ಮೂಲಕ ಕನ್ನಡಕ್ಕೆ ಪ್ರವೇಶ ಪಡೆದ ನಿತ್ಯಾ, ಬಳಿಕ ಮೈನಾ ಮತ್ತು ಕೋಟಿಗೊಬ್ಬ 2 ಚಿತ್ರಗಳ ಮೂಲಕ ಯಶಸ್ವಿ ನಟಿ ಎನಿಸಿಕೊಂಡರು. (ಏಜೆನ್ಸೀಸ್​)

3 Replies to “PHOTOS | ಸೋಮಾರಿ, ತಿಂದು ತಿಂದು ದಪ್ಪಗಾಗಿದ್ದಾರೆ ಎಂದು ಟ್ರೋಲ್​ ಮಾಡಿದವರಿಗೆ ನಟಿ ನಿತ್ಯಾ ಮೆನನ್​ ಕೊಟ್ಟ ತಿರುಗೇಟು ಹೀಗಿದೆ….”

  1. Hi, Nitya don’t bother about anyone’s comments, u re the best actress and ur smile and ur dialogue delivery is the best.
    I am a big fan of u.

Leave a Reply

Your email address will not be published. Required fields are marked *