ನವದೆಹಲಿ: ನೀತಾ ಅಂಬಾನಿ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಕಾಶಿ ವಿಶ್ವನಾಥನ ದೇವಾಲಯಕ್ಕೆ ಭೇಟಿ ನೀಡಿ ಮಗ ಅನಂತ್ ಅಂಬಾನಿ ಮದುವೆಯ ಲಗ್ನ ಪತ್ರಿಕೆಯನ್ನು ಶಿವನಿಗೆ ಅರ್ಪಿಸಿ ಆಶಿರ್ವಾದವನ್ನು ಪಡೆದಿದ್ದಾರೆ.
ದೇವಾಲಯದ ಭೇಟಿ ಬಳಿಕ ಅವರು ಅಲ್ಲಿನ ಸ್ಥಳೀಯ ಚಾಟ್ಸ್ ಶಾಪ್ಒಂದಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಳೀಯ ತಿಂಡಿ ತಿನಿಸುಗಳನ್ನು ಸವಿದಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ವಾರಣಾಸಿಯಲ್ಲಿ ಸಾಮಾನ್ಯರಂತೆ ಚಾಟ್ಸ್ ಶಾಪ್ ಒಂದರಲ್ಲಿ ಅಲ್ಲಿನ ಸ್ಥಳೀಯ ಚಾಟ್ಸ್ಗಳನ್ನು ಸವಿದಿದ್ದಾರೆ. ಸುದ್ದಿ ಸಂಸ್ಥೆ ANI ಈ ಕುರಿತ ಪೋಸ್ಟ್ ಒಂದನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಚಾಟ್ ಅಂಗಡಿಗೆ ಭೇಟಿ ನೀಡಿ ಅಲ್ಲಿ ಜನ ಸಾಮಾನ್ಯರೊಂದಿಗೆ ಮಾತನಾಡುತ್ತಾ ಚಾಟ್ಸ್ ಸವಿದರು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದೆ.
#WATCH | Varanasi, Uttar Pradesh: Founder and Chairperson of Reliance Foundation Nita Ambani visits a chaat shop and interacts with locals pic.twitter.com/1QIY4Ha0xs
— ANI (@ANI) June 24, 2024
ವೈರಲ್ ವಿಡಿಯೋದಲ್ಲಿ ವಾರಣಾಸಿಯ ಚಾಟ್ಸ್ ಅಂಗಡಿಯೊಂದಕ್ಕೆ ಭೇಟಿ ನೀಡಿದ ನೀತಾ ಅಂಬಾನಿ ಸಾಮಾನ್ಯರಂತೆ ತಮ್ಮಿಷ್ಟದ ಚಾಟ್ಸ್ಗಳನ್ನು ತಿಂದು ಅಲ್ಲಿ ನೆರೆದಿದ್ದ ಸ್ಥಳೀಯರೊಂದಿಗೆ ಬಹಳ ಪ್ರೀತಿಪೂರ್ವಕವಾಗಿ ಮಾತನಾಡುತ್ತಿರುವ ದೃಶ್ಯಗಳನ್ನು ಕಾಣಬಹುದು.
ಈ ಹಿಂದೆ ನೀತಾ ಅಂಬಾನಿ ಸಂದರ್ಶನವೊಂದರಲ್ಲಿ ನನಗೆ ಹಾಗೂ ಮುಕೇಶ್ ಅವರಿಗೆ ರಸ್ತೆ ಬದಿಗಳಲ್ಲಿನ ಚಾಟ್ಸ್ ತಿನ್ನುವುದೆಂದರೆ ತುಂಬಾನೇ ಇಷ್ಟ ಎಂದು ಹೇಳಿದ್ದರು.