More

    ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಕ್ಷಮಿಸಿ ಎಂದು ಟ್ವೀಟ್​ ಮಾಡಿದ್ದ ಸುಪ್ರೀಂಕೋರ್ಟ್​ ಮಹಿಳಾ ವಕೀಲರ ವಿರುದ್ಧ ಆಕ್ರೋಶ

    ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಸಂತ್ರಸ್ತೆಯ ತಾಯಿ ಆಶಾದೇವಿ ಅವರು ಕ್ಷಮಿಸಬೇಕು ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್​ ಮಾಡಿರುವ ಟ್ವೀಟ್​ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.

    ಇಂದಿರಾ ಜೈಸಿಂಗ್​ ಈ ರೀತಿಯ ಸಲಹೆ ನೀಡಲು ಅವರು ಯಾರು. ಅಪರಾಧಿಗಳನ್ನು ಗಲ್ಲಿಗೇರಿಸಬೇಕು ಎಂದು ಇಡೀ ದೇಶವೆ ಹೇಳುತ್ತಿದೆ. ಹೀಗಿರುವಾಗ ಇಂದಿರಾ ಜೈಸಿಂಗ್​ ಅವರು ಮಾನವ ಹಕ್ಕುಗಳ ಹೆಸರಿನಲ್ಲಿ ಹಣ ಮಾಡಲು ಈ ರೀತಿ ಹೇಳುತ್ತಿದ್ದಾರೆ ಎಂದು ಸಂತ್ರಸ್ತೆ ತಾಯಿ ಆಶಾದೇವಿ ಆಕ್ರೋಶ ವ್ಯಕ್ತಪಡಿಸಿದರು.

    ಇಂದಿರಾ ಜೈಸಿಂಗ್​ ಅವರ ಈ ನಡೆಯಿಂದ ಅತ್ಯಾಚಾರಕ್ಕೆ ಒಳಗಾದವರಿಗೆ ನ್ಯಾಯ ದೊರೆಯುವುದಿಲ್ಲ. ಈ ರೀತಿಯ ಹೇಳಿಕೆ ನೀಡಲು ಅವರಿಗೆ ಹೇಗೆ ಧೈರ್ಯ ಬಂತು. ಇವರನ್ನು ಸುಪ್ರೀಂಕೋರ್ಟ್​ನಲ್ಲಿ ಹಲವು ಬಾರಿ ನೋಡಿದ್ದೇನೆ. ಒಮ್ಮೆಯೂ ನನ್ನ ಯೋಗಕ್ಷೇಮ ವಿಚಾರಿಸಲಿಲ್ಲ. ಆದರೆ ಅಪರಾಧಿಗಳ ಪರ ಮಾತನಾಡುತ್ತಿದ್ದಾರೆ. ಅಪರಾಧಿಗಳ ಪರವಾಗಿ ಮಾತನಾಡಿ ಜೀವನೋಪಾಯಕ್ಕಾಗಿ ಹಣ ಸಂಪಾದಿಸುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

    ಇಂದಿರಾ ಜೈಸಿಂಗ್​ರಂತ ವ್ಯಕ್ತಿಗಳು ಮಾನವ ಹಕ್ಕುಗಳ ಅಸ್ತ್ರ ಬಳಸಿ ಹಣ ಸಂಪಾದನೆ ಮಾಡುತ್ತಿದ್ದಾರೆ. ನನಗೆ ಅವರ ಸಲಹೆ ಅಗತ್ಯ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸುಪ್ರೀಂಕೋರ್ಟ್​ ಹಿರಿಯ ವಕೀಲೆ ಇಂದಿರಾ ಜೈಸಿಂಗ್​ ಅವರು ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ರಾಜೀವ್​ ಗಾಂಧಿ ಹಂತಕರಲ್ಲಿ ಒಬ್ಬಳಾದ ನಳಿನಿಯನ್ನು ಕ್ಷಮಿಸಿ ಮರದಂಡೆ ಶಿಕ್ಷೆಯಿಂದ ಪಾರು ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಇದೆ ರೀತಿ ಆಶಾದೇವಿ ಅವರು ಅಪರಾಧಿಗಳನ್ನು ಕ್ಷಮಿಸಿ ಮಾದರಿಯಾಗಬೇಕು ಎಂದು ಟ್ವೀಟ್​ ಮಾಡಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts