More

    VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ ಸಂತ್ರಸ್ಥೆ ತಾಯಿ ಬೇಸರದ ನುಡಿ

    ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ ಯಾರು ಬೀದಿಗೆ ಇಳಿದಿದ್ದರೋ ಈಗ ಅವರೇ ನನ್ನ ಮಗಳ ಸಾವಿನ ಪ್ರಕರಣವನ್ನು ಮುಂದಿಟ್ಟುಕೊಂಡು ಆಟವಾಡುತ್ತಿದ್ದಾರೆ. ಅದೂ ರಾಜಕೀಯ ಲಾಭಕ್ಕಾಗಿ ಎಂದು ಕಿಡಿ ಕಾರಿದ್ದಾರೆ.

    ಜ.22ರಂದು ಬೆಳಗ್ಗೆ 7ಗಂಟೆಗೆ ಪ್ರಕರಣದ ಅಪರಾಧಿಗಳನ್ನು ನೇಣಿಗೇರಿಸಬೇಕು ಎಂದು ದೆಹಲಿ ಪಟಿಯಾಲ ಕೋರ್ಟ್​ ಆದೇಶ ನೀಡಿತ್ತು. ಆದರೆ ಅಪರಾಧಿಗಳಲ್ಲಿ ಓರ್ವನಾದ ಮುಕೇಶ್​ ಸಿಂಗ್​ ರಾಷ್ಟ್ರಪತಿಗಳಿಗೆ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದಾನೆ. ಹಾಗೇ ಮರಣದಂಡನೆ ಆದೇಶವನ್ನು ಮರುಪರಿಶೀಲನೆ ಮಾಡುವಂತೆ ದೆಹಲಿ ಕೋರ್ಟ್​ಗೂ ಅರ್ಜಿ ಹಾಕಿದ್ದಾನೆ.

    ರಾಷ್ಟ್ರಪತಿಗಳು ದಯಾ ಅರ್ಜಿಯನ್ನು ಇನ್ನೂ ತಿರಸ್ಕರಿಸಿಲ್ಲ. ಅರ್ಜಿ ತಿರಸ್ಕರಿಸಿದರೂ 14 ದಿನಗಳ ಬಳಿಕವಷ್ಟೇ ಅಪರಾಧಿಗಳನ್ನು ಗಲ್ಲಿಗೇರಿಸಬೇಕಾಗುತ್ತದೆ. ನಿಯಮಗಳು ಹೀಗಿರುವಾಗ ಅಪರಾಧಿಗಳನ್ನು ಜ.22ಕ್ಕೆ ಗಲ್ಲಿಗೇರಿಸಲಾಗದು.

    ನಿಯಮಗಳು ಏನೇ ಇರಲಿ. ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ದಿನವನ್ನು ಕಾರಣಾಂತರಗಳಿಂದ ಮುಂದೂಡುತ್ತಿರುವುದಕ್ಕೆ ನಿರ್ಭಯಾ ತಾಯಿ ಬೇಸರ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts