ಮಲ್ಯ ಬೆನ್ನಲ್ಲೇ ನೀರವ್ ಬೇಟೆ

ಲಂಡನ್: ಭಾರತದ ಬ್ಯಾಂಕ್​ಗಳಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ಮರುಪಾವತಿಸದೆ ಲಂಡನ್​ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಹಸ್ತಾಂತರದ ಕಾನೂನು ಹೋರಾಟ ನಡೆಯುತ್ತಿರುವ ಬೆನ್ನಲ್ಲಿಯೇ, ಭಾರತ ಸರ್ಕಾರದ ಯತ್ನಕ್ಕೆ ಮತ್ತೊಂದು ಯಶ ಸಿಕ್ಕಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ (ಪಿಎನ್​ಬಿ) -ಠಿ; 14 ಸಾವಿರ ಕೋಟಿಗೂ ಹೆಚ್ಚು ವಂಚಿಸಿದ ವಜ್ರೋದ್ಯಮಿ ನೀರವ್ ಮೋದಿಯನ್ನು (48) ಲಂಡನ್​ನಲ್ಲಿ ಸ್ಕಾಟ್ಲೆಂಡ್​ಯಾರ್ಡ್ ಪೊಲೀಸರು ಬಂಧಿಸಿದ್ದಾರೆ. ಆ ಮೂಲಕ ಮೋದಿ ಸರ್ಕಾರ ಆರೋಪಿಯನ್ನು ಬ್ರಿಟನ್ ಕೋರ್ಟ್ ಕಟಕಟೆಗೆ ಎಳೆದುತರುವಲ್ಲಿ ಯಶಸ್ವಿಯಾಗಿದೆ.

ನೀರವ್​ಗೆ ಜಾಮೀನು ನಿರಾಕರಿಸಿರುವ ವೆಸ್ಟ್

ಮಿನ್​ಸ್ಟರ್ ಜಿಲ್ಲಾ ನ್ಯಾಯಾಲಯ, 29ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿದೆ. ‘ಐದು ವರ್ಷದ ಮಗುವನ್ನು ನೋಡಿಕೊಳ್ಳಬೇಕಿರುವುದರಿಂದ -ಠಿ; 4.53 ಕೋಟಿ (5 ಲಕ್ಷ ಪೌಂಡ್) ಭದ್ರತಾ ಠೇವಣಿ ಇರಿಸಲೂ ಸಿದ್ಧ. ಜಾಮೀನು ನೀಡಿ’ ಎಂಬ ನೀರವ್ ಕೋರಿಕೆಯನ್ನು ತಳ್ಳಿಹಾಕಿದ ನ್ಯಾಯಾಧೀಶೆ ಮೇರಿ ಮಲ್ಲನ್, ಜಾಮೀನು ನೀಡಿದರೆ ಆರೋಪಿ ಕಾನೂನಿನಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. 2018ರ ಜನವರಿಯಲ್ಲಿ ಲಂಡನ್​ಗೆ ಬಂದ ನೀರವ್, ಡೈಮಂಡ್ ಹೋಲ್ಡಿಂಗ್ ಕಂಪನಿಯಲ್ಲಿ ನೌಕರಿಯಲ್ಲಿದ್ದು, -ಠಿ; 18 ಲಕ್ಷ (20 ಸಾವಿರ ಪೌಂಡ್) ಮಾಸಿಕ ವೇತನ ಪಡೆಯುತ್ತಿದ್ದಾರೆ ಎಂದು ನೀರವ್ ಪರ ವಕೀಲರು ಕೋರ್ಟ್​ಗೆ ತಿಳಿಸಿದ್ದಾರೆ.

ಆರ್ಥಿಕ ಅಪರಾಧಗೈದು ತಲೆಮರೆಸಿಕೊಂಡಿದ್ದ ನೀರವ್ ಮೋದಿಯನ್ನು ಹಸ್ತಾಂತರ ಮಾಡುವಂತೆ ಭಾರತ ಬ್ರಿಟನ್​ಗೆ ಕೋರಿತ್ತು. ಈ ಅರ್ಜಿಯನ್ನು ಬ್ರಿಟನ್ ಗೃಹ ಇಲಾಖೆ ಮಾನ್ಯ ಮಾಡಿ, ವೆಸ್ಟ್ ಮಿನ್​ಸ್ಟರ್ ಜಿಲ್ಲಾ ಕೋರ್ಟ್​ಗೆ ರವಾನಿಸಿತ್ತು. ಇದರ ಆಧಾರದ ಮೇಲೆ ಕೋರ್ಟ್ ನೀರವ್ ಬಂಧನಕ್ಕೆ ಕಳೆದ ವಾರ ವಾರಂಟ್ ಜಾರಿ ಮಾಡಿತ್ತು.

ಈ ಆದೇಶ ಹೊರಬಿದ್ದ ಎರಡು ವಾರಗಳಲ್ಲಿ ಆರೋಪಿ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇರುತ್ತದೆ. ಸಾಮಾನ್ಯವಾಗಿ ಇಂಥ ಅರ್ಜಿಯನ್ನು ಹೈಕೋರ್ಟ್ ಆರು ತಿಂಗಳಲ್ಲಿ ಇತ್ಯರ್ಥಪಡಿಸುತ್ತದೆ. ಇಲ್ಲೂ ನೀರವ್ ವಿರುದ್ಧ ತೀರ್ಪು ಬಂದರೆ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇರುತ್ತದೆ. ಮೇಲ್ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಮೊದಲು ಅದು ವಿಚಾರಣೆಗೆ ಯೋಗ್ಯವೆ ಎಂಬುದನ್ನು ಸುಪ್ರೀಂಕೋರ್ಟ್ ಪರಿಶೀಲಿಸುತ್ತದೆ. ಮಲ್ಯ ಪ್ರಕರಣ ವೆಸ್ಟ್​ಮಿನ್​ಸ್ಟರ್ ಕೋರ್ಟ್​ನಲ್ಲೇ ಇತ್ಯರ್ಥವಾಗಲು 33 ತಿಂಗಳು ಹಿಡಿಯಿತು. ಸದ್ಯ ಮಲ್ಯ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ಪಿಎನ್​ಬಿ ಷೇರು ಏರಿಕೆ

ನೀರವ್ ಬಂಧನ ನಂತರ ಷೇರುಪೇಟೆಯಲ್ಲಿ ಪಿಎನ್​ಬಿ ಷೇರು ಮೌಲ್ಯ ಶೇ. 4 ಏರಿಕೆ ಕಂಡಿದೆ. -ಠಿ; 89.75 ಇದ್ದ ಷೇರು ದರ, -ಠಿ; 93.60ಕ್ಕೆ ಹೆಚ್ಚಳವಾಗಿದೆ. ಈ ಏರಿಕೆ 20 ನಿಮಿಷಗಳ ವಹಿವಾಟಿನಲ್ಲಿ ಆಗಿದೆ.

173 ಕಲಾಕೃತಿ ಹರಾಜು

ಅತ್ತ ಲಂಡನ್​ನಲ್ಲಿ ನೀರವ್ ಬಂಧನವಾದರೆ, ಇತ್ತ ಮುಂಬೈನಲ್ಲಿ ಅವರಿಗೆ ಸೇರಿದ 173 ಕಲಾಕೃತಿ ಮತ್ತು 11 ಐಷಾರಾಮಿ ವಾಹನಗಳನ್ನು ಹರಾಜು ಹಾಕಲು ಇ.ಡಿ. ಕೋರ್ಟ್ ಅನುಮತಿ ಪಡೆದುಕೊಂಡಿದೆ. 173 ಕಲಾಕೃತಿಗಳ ಮೌಲ್ಯ -ಠಿ; 52.72 ಕೋಟಿ ಎಂದು ಅಂದಾಜಿಸಲಾಗಿದ್ದು, ಈ ಮಾಸಾಂತ್ಯಕ್ಕೆ ಹರಾಜು ಪ್ರಕ್ರಿಯೆ ನಡೆಯಲಿದೆ. ಇನ್ನೊಂದು ಪ್ರಕರಣದಲ್ಲಿ ನೀರವ್​ಗೆ ಸೇರಿದ 68 ಪೇಂಟಿಂಗ್​ಗಳನ್ನು ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿದೆ.

ನೀರವ್ ಮೋದಿಯ ವಂಚನೆ ಪ್ರವರ

ನೀರವ್ ಮೋದಿ ವಿದೇಶದಲ್ಲಿರುವ ಭಾರತೀಯ ಬ್ಯಾಂಕ್​ಗಳಿಗೆ -ಠಿ; 14 ಸಾವಿರ ಕೋಟಿಗೂ ಹೆಚ್ಚು ಮೊತ್ತ ಪಾವತಿಸಬೇಕಿತ್ತು. ನೀರವ್ ಪರವಾಗಿ ಈ ಹೊಣೆ ಹೊತ್ತುಕೊಂಡ ಪಿಎನ್​ಬಿ, ಬ್ಯಾಂಕ್​ಗಳಿಗೆ ಋಣಭಾರ ಪತ್ರ (ಎಲ್​ಒಯು) ನೀಡಿದೆ. ಆದರೆ, ನೀರವ್ 2018ರ ಜನವರಿಯಲ್ಲೆ ದೇಶಬಿಟ್ಟು ಪರಾರಿಯಾಗಿದ್ದಾರೆ. ಸಾಲದ ಹೊಣೆಗೆ ಸೂಕ್ತ ಅಡಮಾನ ಇರಿಸಿಕೊಳ್ಳದೆ ಎಲ್​ಒಯು ನೀಡಿ ನೀರವ್​ಗೆ ನೆರವು ನೀಡಿದ ಪಿಎನ್​ಬಿ ಅಧಿಕಾರಿಗಳ ವಿರುದ್ಧವೂ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ನೀರವ್ ಸಂಬಂಧಿ ಮೆಹುಲ್ ಚೋಕ್ಸಿ ಕೂಡ ಆರೋಪಿಯಾಗಿದ್ದು, ನೀರವ್ ಕುಟುಂಬದವರ ವಂಚನೆಯಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾಗಿದೆ.

ಬಂಧನವಾಗಿದ್ದು ಹೀಗೆ

ನೀರವ್ ಮೋದಿ ಹೋಲ್ಬರ್ನ್ ಮೆಟ್ರೋ ಬ್ಯಾಂಕ್​ನಲ್ಲಿ ಖಾತೆ ತೆರೆಯಲು ಹೋಗಿದ್ದಾಗ ಸ್ಕಾಟ್ಲೆಂಡ್​ಯಾರ್ಡ್ ಪೊಲೀಸರು ಬಂಧಿಸಿದ್ದಾರೆ. ನೀರವ್ ಗುರುತು ಹಿಡಿದ ಬ್ಯಾಂಕ್​ನ ಗುಮಾಸ್ತರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸಿಬಿಐ ಹೇಳಿದ್ದೇನು?

ಬ್ರಿಟನ್ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಗಡಿಪಾರಿನ ಕಾನೂನು ಪ್ರಕ್ರಿಯೆ ಸುದೀರ್ಘವಾಗಿದೆ. ಮಲ್ಯ ಪ್ರಕರಣದಲ್ಲಿ ನೆರವು ಪಡೆಯಲಾಗಿದ್ದ ಏಜೆನ್ಸಿಯಿಂದಲೇ ಅಗತ್ಯ ಕಾನೂನು ನೆರವು ಪಡೆಯಲಾಗುವುದು ಎಂದು ಸಿಬಿಐ ಮೂಲಗಳು ತಿಳಿಸಿವೆ.

ಹಸ್ತಾಂತರ ಪ್ರಕ್ರಿಯೆ ಹೇಗೆ?

ಬ್ರಿಟನ್ ಕೋರ್ಟ್​ನಲ್ಲಿ ನೀರವ್ ಮೋದಿ ಹಸ್ತಾಂತರ ಪ್ರಕ್ರಿಯೆ ಕೂಡ ವಿಜಯ್ ಮಲ್ಯ ಪ್ರಕರಣದಂತೆಯೇ ನಡೆಯಲಿದೆ. ನೀರವ್ ಪಿಎನ್​ಬಿಗೆ ವಂಚನೆ ಮಾಡಿರುವುದನ್ನು ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ನಿಸ್ಸಂದೇಹವಾಗಿ ಸಾಬೀತು ಮಾಡುವಂತಹ ಸಾಕ್ಷ್ಯಾಧಾರಗಳನ್ನು ಸಲ್ಲಿಸಬೇಕು. ಇದನ್ನು ಕೋರ್ಟ್ ಪರಿಶೀಲಿಸುತ್ತದೆ. ಎರಡೂ ಕಡೆಯ ವಾದ- ಪ್ರತಿವಾದವನ್ನು ಆಲಿಸಿ ತೀರ್ಪು ನೀಡುತ್ತದೆ. ನೀರವ್ ಗಡಿಪಾರಿಗೆ ಕೋರ್ಟ್ ಸಮ್ಮತಿಸಿದರೆ, ತೀರ್ಪು ಪ್ರಕಟವಾದ 2 ತಿಂಗಳಲ್ಲಿ ಬ್ರಿಟನ್​ನ ಗೃಹ ಇಲಾಖೆ ಕೋರ್ಟ್ ಆದೇಶ ಜಾರಿಗೆ ಸಮ್ಮತಿಸಬೇಕು.