Friday, 16th November 2018  

Vijayavani

Breaking News

13 ರಲ್ಲಿ 11 ಮಂದಿ ಗುಹೆಯಿಂದ ಹೊರಕ್ಕೆ; ಮಿಕ್ಕವರಿಗಾಗಿ ವಿಶ್ವಾದ್ಯಂತ ಹಾರೈಕೆ

Tuesday, 10.07.2018, 4:17 PM       No Comments

ಮೈ ಸಾಯ್​ (ಥಾಯ್ಲೆಂಡ್​): ಗುಹೆಯಲ್ಲಿ ಸಿಲುಕಿರುವ ಮಿಕ್ಕುಳಿದ ಎಲ್ಲರನ್ನೂ ಇಂದು ಹೊರಗೆ ಕರೆತರಲಾಗುವುದು ಎಂದು ಥಾಯ್ಲೆಂಡ್​ನ ರಕ್ಷಣಾ ಕಾರ್ಯಾಚರಣೆಯ ಮುಖ್ಯಸ್ಥರು ಮಂಗಳವಾರ ಹೇಳಿಕ ನೀಡಿದ ಬೆನ್ನಿಗೇ ಮೂವರು ಬಾಲಕರನ್ನು ಹೊರತರುವಲ್ಲಿ ರಕ್ಷಣಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಈ ವರೆಗೆ 11 ಮಂದಿ ರಕ್ಷಿಸಿದಂತಾಗಿದೆ.

13 ಮಂದಿಯ ಪೈಕಿ ಹನ್ನೊಂದು ಮಂದಿ ಈವರೆಗೆ ಹೊರಬಂದಿರುವ ಹಿನ್ನೆಲೆಯಲ್ಲಿ ಉಳಿದ ಇಬ್ಬರೂ ಸುರಕ್ಷಿತರಾಗಿ ಹೊರಬರುವ ಆಶಾ ಭಾವನೆ, ನಿರೀಕ್ಷೆ, ಆಶಯ ವಿಶ್ವಾದ್ಯಂತ ಮನೆ ಮಾಡಿದೆ.

ಇಂದು ಆರಂಭವಾದ ಮೂರನೇ ದಿನದ ರಕ್ಷಣಾ ಕಾರ್ಯಾಚರಣೆಯಲ್ಲಿ ಮಧ್ಯಾಹ್ನದ ಹೊತ್ತಿಗೆ ಓರ್ವ ಬಾಲಕನನ್ನು ಸ್ಟ್ರೆಚರ್​ ಮೂಲಕ ಹೊರತರಲಾಯಿತು. ಇದಾದ ಕೆಲವೇ ಗಂಟೆಗಳಲ್ಲಿ ಮತ್ತೊಬ್ಬ ಬಾಲಕನ್ನೂ ರಕ್ಷಿಸಲಾಗಿದೆ. 4 ಗಂಟೆಯ ವೇಳೆಗೆ ಮೂರನೇ ಬಾಲಕನನ್ನು ರಕ್ಷಿಸಲಾಗಿದೆ.

ಭಾನುವಾರ ಆರಂಭವಾದ ರಕ್ಷಣಾ ಕಾರ್ಯಾಚರಣೆಯಲ್ಲಿ ಸೋಮವಾರ ಸಂಜೆಯ ಹೊತ್ತಿಗೆ 8 ಮಂದಿಯನ್ನು ರಕ್ಷಿಸಲಾಗಿತ್ತು. ಭಾನುವಾರ ನಾಲ್ವರು , ಸೋಮವಾರ ನಾಲ್ವರನ್ನು ಗುಹೆಯಿಂದ ಹೊರಗೆ ತರಲಾಗಿತ್ತು. ಆದರೆ, ಈ ವರೆಗೆ ಸಿಕ್ಕವರ ಬಗ್ಗೆ ರಕ್ಷಣಾ ಸಿಬ್ಬಂದಿ ಏನನ್ನೂ ಹೇಳಿಲ್ಲ.

ಇದಕ್ಕೂ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ರಕ್ಷಣಾ ಕಾರ್ಯಚರಣೆಯ ಮುಖ್ಯಸ್ಥ ನರೊಂಗಸಕ್​ ಒಸೊಟ್ಟನಕೊರ್ನ್​ “ಅಂತಿಮ ಹಂತದ ಕಾರ್ಯಾಚರಣೆ ಹೆಚ್ಚು ಸವಾಲಿನದ್ದಾಗಿರಲಿದೆ,” ಎಂದು ಹೇಳಿದ್ದರು.

ಇನ್ನು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳದಲ್ಲಿ ಮಳೆ ಅಬ್ಬರಿಸುತ್ತಿದ್ದು ರಕ್ಷಣಾ ಸಿಬ್ಬಂದಿಗೆ ತೊಡಕಾಗಿ ಪರಿಣಮಿಸಿದೆ. ಸುಣ್ಣಕಲ್ಲಿನ ಗೋಡೆಯ ಪದರ ಹೊಂದಿರುವ ಗುಹೆಯ ಒಳಗೆ ನೀರಿನ ಹರಿವು ಹೆಚ್ಚಾಗಿದ್ದು, ಸವೆತ ಉಂಟಾಗುತ್ತಿದೆ. ಇದು ರಕ್ಷಣಾ ಕಾರ್ಯಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ.

Leave a Reply

Your email address will not be published. Required fields are marked *

Back To Top