ಎಫ್1 ದಿಗ್ಗಜ ನಿಕಿ ನಿಧನ

ವಿಯೆನ್ನಾ: ಫಾಮುಲಾ ಒನ್ ಮಾಜಿ ಚಾಲಕ, ಮೂರು ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರಿಯಾದ ನಿಕಿ ಲೌಡಾ ನಿಧನರಾಗಿದ್ದಾರೆ.

ಎಂಟು ತಿಂಗಳ ಹಿಂದೆ ಶ್ವಾಸಕೋಶದ ಟ್ರಾನ್ಸ್​ಪ್ಲಂಟ್​ಗೆ ಒಳಗಾಗಿದ್ದ 70 ವರ್ಷದ ನಿಕಿ, ಸೋಮವಾರ ರಾತ್ರಿ ಅಸುನೀಗಿದರು ಎಂದು ಕುಟುಂಬ ತಿಳಿಸಿದೆ. ನಿಕಿ ಲೌಡಾ ನಿಧನಕ್ಕೆ ಫಾಮುಲಾ ಒನ್ ಅಭಿಮಾನಿಗಳು, ಅವರು ಪ್ರತಿನಿಧಿಸಿದ್ದ ತಂಡಗಳಾದ ಫೆರಾರಿ, ಮೆಕ್ಲಾರೆನ್ ಸಂತಾಪ ಸೂಚಿಸಿವೆ.

ಮೋಟಾರ್ ರೇಸಿಂಗ್​ನ ಅಪರೂಪದ ತಾರೆಯಲ್ಲಿ ಒಬ್ಬರಾಗಿದ್ದ ನಿಕಿ, 1975 ಹಾಗೂ 1977ರಲ್ಲಿ ಫೆರಾರಿ ಪರವಾಗಿ ವಿಶ್ವ ಚಾಂಪಿಯನ್ ಪಟ್ಟವೇರಿದ್ದರೆ, 1984ರಲ್ಲಿ ಮೆಕ್ಲಾರೆನ್ ಪರವಾಗಿ ವಿಶ್ವ ಚಾಂಪಿಯನ್ ಎನಿಸಿದ್ದರು. ಅದರಲ್ಲೂ 1976ರ ವಿಶ್ವ ಚಾಂಪಿಯನ್​ಷಿಪ್ ವೇಳೆ ಬ್ರಿಟನ್ ಚಾಲಕ ಜೇಮ್್ಸ ಹಂಟ್ ಎದುರಿನ ಪ್ರತಿಸ್ಪರ್ಧೆಯ ಕಾರಣಕ್ಕಾಗಿ ನಿಕಿ ಲೌಡಾ ಜನಮಾನಸದಲ್ಲಿ ಉಳಿದುಕೊಳ್ಳಲಿದ್ದಾರೆ.

ಲೌಡಾರನ್ನು ಹೆಚ್ಚಾಗಿ ನೆನಪಿಸಿಕೊಳ್ಳುವುದು 1976ರ ವಿಶ್ವಚಾಂಪಿಯನ್​ಷಿಪ್ ವೇಳೆ ನಡೆದ ಘಟನೆಯಿಂದ. ಕ್ರೀಡಾ ಇತಿಹಾಸದ ಗ್ರೇಟೆಸ್ಟ್ ಕಮ್್ಯಾಕ್ ಎಂದು ಇದನ್ನು ಕರೆಯಲಾಗುತ್ತದೆ.

Leave a Reply

Your email address will not be published. Required fields are marked *