ತಮ್ಮನ್ನು ಭೇಟಿಯಾದ ಜೆಡಿಎಸ್​ ಯುವ ನಾಯಕ ನಿಖಿಲ್​ ಕುಮಾರಸ್ವಾಮಿಗೆ ಆಂಧ್ರ ಸಿಎಂ ಜಗನ್​ ರೆಡ್ಡಿ ಸಲಹೆ ಏನು ಗೊತ್ತಾ?

ಮಂಡ್ಯ: ಈ ಬಾರಿ ಮಂಡ್ಯ ಚುನಾವಣೆಯಲ್ಲಿ ಸುಮಲತಾ ಅಂಬರೀಷ್​ ವಿರುದ್ಧ ಸೋತಿದ್ದ ಜೆಡಿಎಸ್​ನ ಯುವ ನಾಯಕ ನಿಖಿಲ್​ ಕುಮಾರಸ್ವಾಮಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿ ಅವರನ್ನು ವಿಜಯವಾಡದಲ್ಲಿ ಮಂಗಳವಾರ ಭೇಟಿಯಾಗಿದ್ದರು. ಸಿಎಂ ಸ್ಥಾನ ಅಲಂಕರಿಸಿದ್ದಕ್ಕಾಗಿ ಅವರನ್ನು ಅಭಿನಂದಿಸಿದರು.

ಈ ಬಗ್ಗೆ ಫೇಸ್​ಬುಕ್​ನಲ್ಲಿ ಬರೆದುಕೊಂಡಿರುವ ನಿಖಿಲ್​, ಆಂಧ್ರದಲ್ಲಿ ಜಗನ್​ ಅಣ್ಣಾ ಎಂದೇ ಅವರು ಪರಿಚಿತರಾಗಿದ್ದಾರೆ. ಅವರ ಹತ್ತು ವರ್ಷಗಳ ಸುದೀರ್ಘ ಹೋರಾಟದ ದಾರಿ ಎಲ್ಲ ಯುವ ರಾಜಕಾರಣಿಗಳಿಗೆ ಮಾದರಿ. ಕಾರ್ಯಕರ್ತರಿಗೂ ಪ್ರೇರಣೆ ನೀಡುವಂಥದ್ದು ಎಂದು ಹೇಳಿದ್ದಾರೆ.

ಹಾಗೇ ಜಗನ್​ ಮೋಹನ್​ ರೆಡ್ಡಿಯವರು ಕರ್ನಾಟಕ ರಾಜಕಾರಣವನ್ನು, ಇಲ್ಲಿನ ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಹೀಗೆಂದು ಅವರೇ ನನ್ನ ಬಳಿ ಹೇಳಿಕೊಂಡಿದ್ದಾರೆ. ಯುವ ರಾಜಕಾರಣಿಗಳಿಗೆ ಉತ್ತಮ ಅವಕಾಶವಿದೆ. ಸಾರ್ವಜನಿಕ ಜೀವನದಲ್ಲಿ ಯಾವುದಕ್ಕೂ ಹಿಂಜರಿಯದೆ ಜನಸೇವೆ ಗುರಿಯಾಗಿಟ್ಟುಕೊಂಡು ಮುಂದುವರಿಯಲು ಸಲಹೆ ನೀಡಿದರು. ಅಲ್ಲದೆ ರಾಜಕೀಯದಲ್ಲಿ ಉತ್ತಮ ಭವಿಷ್ಯ ಹೊಂದುವಂತೆ ಹಾರೈಸಿದರು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *