ಮಂಡ್ಯಕ್ಕೆ ನಿಖಿಲ್​ ಕುಮಾರ್​ ಅವರೇ ಮೈತ್ರಿಕೂಟದ ಅಧಿಕೃತ ಅಭ್ಯರ್ಥಿ: ಸಚಿವ ಸಾ.ರಾ ಮಹೇಶ್​ ಘೋಷಣೆ

ಮೈಸೂರು: ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ನಿಖಿಲ್​ ಕುಮಾರಸ್ವಾಮಿ ಅವರೇ ಮೈತ್ರಿ ಕೂಟದ ಅಧಿಕೃತ ಅಭ್ಯರ್ಥಿ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್​ ಅವರು ಮೈಸೂರಿನಲ್ಲಿ ಘೋಷಣೆ ಮಾಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಪಕ್ಷದ, ರೈತರ ಹಿತದೃಷ್ಟಿಯಿಂದ ಮತ್ತು ಸಂಘಟನೆಯ ಉದ್ದೇಶದಿಂದ ಮಂಡ್ಯದಲ್ಲಿ ನಿಖಿಲ್​ ಕುಮಾರಸ್ವಾಮಿ ಅವರೇ ಜೆಡಿಎಸ್​ನ ಅಭ್ಯರ್ಥಿ. ಮೈತ್ರಿ ಕೂಟದ ಅಭ್ಯರ್ಥಿಯೂ ಅವರೇ ಎಂದೂ ಅವರು ಹೇಳಿದರು.

ನಿಖಿಲ್​ ಕುಮಾರ್​ ಅವರು ಮೈಸೂರಿನಿಂದ ಸ್ಪರ್ಧೆ ಮಾಡುವ ಬಗ್ಗೆ ಕಳೆದ ಎರಡು ದಿನಗಳಿಂದಲೂ ಸುದ್ದಿಯಾಗಿತ್ತು. ಆದರೆ, ಅದರೆ ಸಾ.ರಾ ಮಹೇಶ್​ ಅವರ ಹೇಳಿಕೆ ಆ ಸುದ್ದಿಗಳನ್ನೆಲ್ಲ ನಿರಾಕರಿಸುವಂತಿದೆ.

ಅಲ್ಲದೆ, ಮೈತ್ರಿಕೂಟದ ಅಧಿಕೃತ ಅಭ್ಯರ್ಥಿ ನಿಖಿಲ್​ ಕುಮಾರ್​ ಅವರೇ ಎಂದು ಸರ್ಕಾರದ ಸಚಿವರೇ ಹೇಳಿರುವ ಹಿನ್ನೆಲೆಯಲ್ಲಿ ಸುಮಲತಾ ಅವರ ಮುಂದಿನ ನಡೆ ಏನಾಗಬಹುದು ಎಂಬ ಕುತೂಹಲ ಮೂಡಿದೆ.