ಬಿಜೆಪಿಯಿಂದ ಸುಮಲತಾಗೆ ಬೆಂಬಲ ವಿಚಾರವಾಗಿ ನಿಖಿಲ್​ ಕೊಟ್ಟ ಪ್ರತಿಕ್ರಿಯೆ ಹೀಗಿದೆ…

ಮಂಡ್ಯ: ಮಂಡ್ಯ ಲೋಕಸಭಾ ಚುನಾವಣಾ ಅಖಾಡವೂ ದೇಶದ ಕುತೂಹಲ ಕೆರಳಿಸಿದೆ. ನಟಿ ಸುಮಲತಾ ಅಂಬರೀಷ್​ ಅವರಿಗೆ ಬಿಜೆಪಿ ಬೆಂಬಲ ಘೋಷಿಸಿರುವುದು ಇನ್ನಷ್ಟು ಕುತೂಹಲಕ್ಕೀಡುಮಾಡಿದ್ದು, ಈ ಬಗ್ಗೆ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಸಕ್ಕರೆ ನಾಡಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಅವರು ಸುಮಲತಾ ಅವರಿಗೆ ಬೆಂಬಲ ನೀಡಿರುವುದರಿಂದ ನನಗೆ ಯಾವುದೇ ರೀತಿಯಲ್ಲೂ ಹಿನ್ನಡೆಯಾಗಲ್ಲ ಎಂದು ಹೇಳಿದರು.

ನನ್ನನ್ನು ಸೋಲಿಸಲು ಕೆಲ ಶಕ್ತಿಗಳಿಂದ ಹುನ್ನಾರ ನಡೆಯುತ್ತಿದೆ. ಆದರೆ, ಜನರು ನನ್ನ ಪರ ಇದ್ದಾರೆ. ಮಂಡ್ಯದ ಜನತೆ ಕೈಬಿಡುವುದಿಲ್ಲ. ತಂದೆ ಮಾಡಿರುವ ಅಭಿವೃದ್ಧಿ ಕೆಲಸ ನನ್ನ ಕೈ ಹಿಡಿಯಲಿದೆ. ನನ್ನನ್ನು ಸೋಲಿಸಲು ನಿಂತಿರುವ ಎಲ್ಲರಿಗೂ ಒಳ್ಳೆಯದಾಗಲಿ ಎಂದು ವ್ಯಂಗ್ಯವಾಡಿದ್ದಾರೆ.

ಜನ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅವರೇ ಸರಿಯಾದ ಉತ್ತರ ನೀಡಲಿದ್ದಾರೆ. ನಾಳೆ ನನ್ನ ತಂದೆಯವರ ಜತೆ ಆದಿ ಚುಂಚನಗಿರಿ ಮಠಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆಯಲಿದ್ದೇನೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)