ಚುನಾವಣೆ ಫಲಿತಾಂಶಕ್ಕೂ ಮೊದಲೇ ನಿಖಿಲ್​ ಕುಮಾರಸ್ವಾಮಿ ಸಂಸದರಾಗಿಯೇ ಬಿಟ್ಟಿದ್ದಾರೆ ಇಲ್ಲಿ !

ಮಂಡ್ಯ: ಲೋಕಸಭಾ ಚುನಾವಣೆ ಮುಗಿದಿದೆ ಅಷ್ಟೇ. ಇನ್ನೂ ಫಲಿತಾಂಶ ಹೊರಬಿದ್ದಿಲ್ಲ. ಆದರೆ, ನಿಖಿಲ್​ ಕುಮಾರಸ್ವಾಮಿ ಈಗಾಗಲೇ ಸಂಸದರಾಗಿಬಿಟ್ಟಿದ್ದಾರೆ!

ಈ ಹಿಂದೆ ನಿಖಿಲ್​ ಅವರ ಅಭಿಮಾನಿಯೋರ್ವರು ಚುನಾವಣೆ ಮುಗಿಯುತ್ತಿದ್ದಂತೆ ನಿಖಿಲ್​ ಅವರನ್ನು ಸಂಸದರು ಎಂದು ನಮೂದಿಸಿದ ನಾಮಫಲಕವನ್ನು ತಮ್ಮ ಫೇಸ್​ಬುಕ್​ನಲ್ಲಿ ಶೇರ್​ ಮಾಡಿಕೊಂಡಿದ್ದರು. ಹಾಗೇ ಜೆಡಿಎಸ್​ ಅಭಿಮಾನಿಯೋರ್ವರು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪ್ರಜ್ವಲ್ ರೇವಣ್ಣನವರ ಹೆಸರು ಹಾಕಿ, ಅದರ ಮುಂದೆ ಲೋಕಸಭಾ ಸಂಸದರು ಎಂದು ನಮೂದಿಸಿದ್ದ ಫೋಟೋವೂ ವೈರಲ್​ ಆಗಿತ್ತು.
ಈಗ ಮತ್ತೆ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ನಿಖಿಲ್​ ಕುಮಾರಸ್ವಾಮಿಯವರ ಫೋಟೋ ಹಾಕಿ, ಅದರ ಕೆಳಗೆ ಹೆಸರು ಬರೆದು, ಸಂಸದರು, ಮಂಡ್ಯ ಜಿಲ್ಲೆ ಎಂದು ಮುದ್ರಿಸಲಾಗಿದೆ.

ಶ್ರೀರಂಗಪಟ್ಟಣದ ಟಿಎಪಿಎಸಿಎಂ ಕಲ್ಯಾಣ ಮಂಟಪದಲ್ಲಿ ಮೇಳಾಪುರದ ಎಂ.ಎನ್​.ಅಶೋಕ್​ಕುಮಾರ್​ ಹಾಗೂ ಅಭಿಲಾಷಾ ವಿವಾಹ ಜೂ.6ರಂದು ನಡೆಯಲಿದೆ. ಈ ಮದುವೆಯ ಆಹ್ವಾನ ಪತ್ರಿಕೆಯ ಒಂದು ಪುಟವನ್ನು ನಿಖಿಲ್​ ಕುಮಾರಸ್ವಾಮಿಯವ ಫೋಟೋ, ಹೆಸರಿಗೇ ಮೀಸಲಾಗಿಡಲಾಗಿದೆ. ವಿಶೇಷ ಆಹ್ವಾನಿತರು ಜೆಡಿಎಸ್​ನ ಯುವ ಸಾರಥಿ, ನಿಖಿಲ್​ ಕುಮಾರಸ್ವಾಮಿ, ಮಂಡ್ಯ, ಸಂಸದರು ಎಂದು ಹಾಕಲಾಗಿದೆ.

Leave a Reply

Your email address will not be published. Required fields are marked *